2014ರ ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರವೇ ಆದ್ಯತೆ: ಶಿಮ್ಲಾ ರ್‍ಯಾಲಿಯಲ್ಲಿ ಮೋದಿ ಟೀಕೆ

ಈಗ ದೇಶದ ಗಡಿಗಳು ಸುರಕ್ಷಿತ

Team Udayavani, May 31, 2022, 10:32 PM IST

2014ರ ಹಿಂದಿನ ಸರ್ಕಾರಕ್ಕೆ ಭ್ರಷ್ಟಾಚಾರವೇ ಆದ್ಯತೆ: ಶಿಮ್ಲಾ ರ್‍ಯಾಲಿಯಲ್ಲಿ ಮೋದಿ ಟೀಕೆ

ಶಿಮ್ಲಾ/ಗಾಂಧಿನಗರ: ಭ್ರಷ್ಟಾಚಾರ ಎನ್ನುವುದು 2014ರ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರದ ಪ್ರಧಾನ ಅಂಶವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರೋಡ್‌ ಶೋ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆಯ ನಿಲುವು ತಳೆಯಲಾಗಿತ್ತು ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಪೂರ್ತಿಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. “ನಮ್ಮ ದೇಶದ ಗಡಿಗಳು 2014ಕ್ಕಿಂತಲೂ ಈಗ ಸುರಕ್ಷಿತವಾಗಿವೆ’ ಎಂದು ಹೇಳಿದ್ದಾರೆ ಪ್ರಧಾನಿ.

ನಕಲಿಗಳಿಗೆ ಆಟಕ್ಕೆ ಕಡಿವಾಣ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ 9 ಕೋಟಿ ನಕಲಿ ಹೆಸರು ಮತ್ತು ವಿವರಗಳನ್ನು ಪತ್ತೆ ಹಚ್ಚಲಾಗಿದೆ. ಇಂಥ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಥವಾ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ಯೋಜನೆಗಳ ಲಾಭವನ್ನು ಅರ್ಹರಿಗೇ ಸಲ್ಲುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2014ರ ಹಿಂದೆ ಭ್ರಷ್ಟಾಚಾರ ಎನ್ನುವುದು ಸರ್ಕಾರದ ಅವಿಭಾಜ್ಯ ಅಂಗವಾಗಿತ್ತು ಎಂದೂ ಹೇಳಿದ್ದಾರೆ.

ಕೊರೊನಾ ಪರಿಸ್ಥಿತಿ ಸೂಕ್ತ ನಿರ್ವಹಣೆ
ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ ಪ್ರಧಾನಿ. ದೇಶದಲ್ಲಿ ಇದುವರೆಗೆ 200 ಕೋಟಿ ಡೋಸ್‌ ಲಸಿಕೆಗಳನ್ನು ವಿತರಿಸಲಾಗಿದೆ. ಜತೆಗೆ ವಿದೇಶಗಳಿಗೆ ಕೂಡ ಲಸಿಕೆಗಳನ್ನು ರಫ್ತು ಮಾಡಲಾಗಿದೆ ಎಂದು ಘೋಷಿಸಿದ್ದಾರೆ ಪ್ರಧಾನಿ. ದೇಶಕ್ಕೆ ಕೊರೊನಾ ಲಸಿಕೆಗಳನ್ನು ನೀಡುವಲ್ಲಿ ಹಿಮಾಚಲ ಪ್ರದೇಶದ ಬಡ್ಡಿ ಕೈಗಾರಿಕಾ ಪ್ರದೇಶದ ಯೋಗದಾನ ಮಹತ್ವದ್ದು ಎಂದು ಕೊಂಡಾಡಿದ್ದಾರೆ.

ಪ್ರಧಾನ ಸೇವಕ:
“ನಾನು ದೇಶದ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸೇವಕ’ ಎಂದು ನರೇಂದ್ರ ಮೋದಿ ಹೇಳಿಕೊಂಡರು. ಬಿಲಾಸ್‌ಪುರದಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ಮಾಣವಾಗುತ್ತಿರುವುದರ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ದೇಶದ ಪ್ರತಿ ಜಿಲ್ಲೆಯಲ್ಲಿ ಕೂಡ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

ಮುದ್ರಾ ಯೋಜನೆಯಿಂದ ಲಾಭ
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಿಂದ ಬಹಳಷ್ಟು ಲಾಭವಾಗಿದೆ ಎಂದು ಗುಜರಾತ್‌ನ ಮೆಹಸಾನಾ ಜಿಲ್ಲೆಯ ಅರವಿಂದ ಪಟೇಲ್‌ ಎಂಬುವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗೆ ಮುದ್ರಾ ಯೋಜನೆ ಬಗ್ಗೆ ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಯೋಜನೆಯಿಂದಾಗಿ ತಮಗೆ 7.20 ಲಕ್ಷ ರೂ. ಸಾಲ ಸಿಕ್ಕಿತು. ಇದರಿಂದಾಗಿ ಮದುವೆ ಕಾರ್ಯಕ್ರಮಗಳಿಗೆ ವಿನ್ಯಾಸ ಮಾಡುವ ಮಳಿಗೆ ತೆರೆದೆ ಎಂದು ಹೇಳಿಕೊಂಡರು. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ “ನೀವು ಉದ್ಯೋಗ ಬೇಡುವ ಬದಲು, ಉದ್ಯೋಗ ನೀಡುವವರಾಗಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

22 ಲಕ್ಷ ಕೋಟಿ ರೂ. ಖಾತೆಗೆ:
ಕೇಂದ್ರ ಸರ್ಕಾರದ ವಿವಿಧ ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಮೂಲಕ ಸಿಗಬಹುದಾದ ನಗದು ಮೊತ್ತವನ್ನು ಫ‌ಲಾನುಭವಿಗಳ ಖಾತೆಗೇ ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದುವರೆಗೆ ಒಟ್ಟು 22 ಲಕ್ಷ ಕೋಟಿ ರೂ. ಮೊತ್ತವನ್ನು ಫ‌ಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದರು. ದೇಶದಲ್ಲಿ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದೂ ಪ್ರಧಾನಿ ಹೇಳಿಕೊಂಡಿದ್ದಾರೆ. ಅದನ್ನು ಅಂತಾರಾಷ್ಟ್ರೀಯ ಸಂಸ್ಥೆಗಳೂ ಕೂಡ ಒಪ್ಪಿಕೊಂಡಿವೆ ಎಂದರು.

10 ಕೋಟಿ ಮಂದಿಗೆ 21 ಸಾವಿರ ಕೋಟಿ ವರ್ಗಾವಣೆ
ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ-ಕಿಸಾನ್‌) ಯೋಜನೆಯ ಅಡಿ 10 ಕೋಟಿ ರೈತರಿಗೆ ಪ್ರಧಾನಿ ಮೋದಿಯವರು 21 ಸಾವಿರ ಕೋಟಿ ರೂ. ಮೊತ್ತವನ್ನು ಅವರವರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಯೋಜನೆಯ ಹನ್ನೊಂದನೇ ಕಂತಿನ ಮೊತ್ತ ಇದಾಗಿದೆ. ಜತೆಗೆ ಫ‌ಲಾನುಭವಿಗಳ ಜತೆಗೆ ಸಂವಾದವನ್ನೂ ನಡೆಸಿದ್ದಾರೆ.

ಭಾವನೆಗಳ ಬೆಸೆದ “ಭಾವಚಿತ್ರ’
ಶಿಮ್ಲಾದಲ್ಲಿ ರ್‍ಯಾಲಿ ಮುಗಿಸಿ ವಾಪಸ್‌ ಹೊರಡುವಾಗ ಮೋದಿ, ತಮ್ಮ ಕಾರನ್ನು ನಿಲ್ಲಿಸಿ, ಜನಜಂಗುಳಿಯಲ್ಲಿ ಮೋದಿಯವರತ್ತ ಕೈ ಬೀಸುತ್ತಾ ನಿಂತಿದ್ದ ಒಬ್ಬ ಯುವತಿಯ ಬಳಿಗೆ ಸಾಗಿಹೋಗಿ ಆಕೆಯ ಕೈಯ್ಯಲ್ಲಿದ್ದ ಚಿತ್ರವನ್ನು ಪಡೆದು ಆಕೆಗೆ ಆಶೀರ್ವದಿಸಿದ ಹೃದಯಂಗಮ ಸನ್ನಿವೇಶವೊಂದು ಜರುಗಿತು.

ಆಕೆಯ ಕೈಯ್ಯಲ್ಲಿದ್ದ ಚಿತ್ರ ಮೋದಿಯವರದ್ದೇನಲ್ಲ! ಮೋದಿಯವರ ತಾಯಿ ಹೀರಾಬೆನ್‌ ಅವರ ಪೆನ್ಸಿಲ್‌ ಸ್ಕೆಚ್‌ ಅದಾಗಿತ್ತು. ಕಾರಿನಲ್ಲಿ ಕುಳಿತು ಜನರತ್ತ ಕೈಬೀಸುತ್ತಾ ಸಾಗಿದ ಮೋದಿಯವರು ಕಾರು ನಿಲ್ಲಿಸಿ ಹೋಗಿ ಆ ಸ್ಕೆಚ್‌ ಅನ್ನು ಹತ್ತಿರದಿಂದ ನೋಡುವಂತಾಗಲು ಆಕೆಯ ಸ್ಕೆಚ್‌ನಲ್ಲಿರುವ ನೈಪುಣ್ಯತೆಯೇ ಕಾರಣ.

ಯುವತಿಯನ್ನು ಹತ್ತಿರದಿಂದ ಮಾತನಾಡಿಸಿದ ಅವರು, ಆ ಭಾವಚಿತ್ರವನ್ನು ಬರೆಯಲು ಎಷ್ಟು ದಿನ ಬೇಕಾಯಿತು ಎಂದು ಹಿಂದಿಯಲ್ಲಿ ಕೇಳಿದರು. ಅದನ್ನು ತಾನು ಒಂದು ದಿನದಲ್ಲಿ ಬರೆದಿರುವುದಾಗಿ ಆ ಯುವತಿ ತಿಳಿಸಿದರು.
ಆನಂತರ, ಆ ಚಿತ್ರವನ್ನು ಯುವತಿಯಿಂದ ಪಡೆದು ಆಕೆಗೆ ಧನ್ಯವಾದ ತಿಳಿಸಿದ ಅವರು, ತಮ್ಮ ಕೈಯ್ಯನ್ನು ಆಕೆಯ ತಲೆಯ ಮೇಲಿಟ್ಟು ಆಶೀರ್ವದಿಸಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.