ಒತ್ತಾಯಕ್ಕೆ ಮದುವೆಯಾದ: ವಾರದ ಒಳಗೆ ಪತ್ನಿಯ ರುಂಡ ಚೆಂಡಾಡಿದ !
Team Udayavani, May 16, 2017, 12:01 PM IST
ನವಿಮುಂಬಯಿ : 24 ರ ಹರೆಯದ ಯುವತಿಯೊಬ್ಬಳನ್ನು ವಿವಾಹವಾಗಿ ವಾರದೊಳಗೆ ಬರ್ಬರವಾಗಿ ತುಂಡರಿಸಿ ಕೊಲೆಗೈದು ದೇಹದ ಭಾಗಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಎಸೆದ ಬೆಚ್ಚಿ ಬೀಳುವ ಘಟನೆ ನಡೆದಿದೆ.
ಪ್ರಿಯಾಂಕಾ ಗೌರವ್ ಎಂಬಾಕೆ ವಿವಾಹವಾದ ವಾರದ ಒಳಗೆ ಗಂಡನ ಮನೆಯಿಂದ ಮೇ 5 ರಂದು ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ತನಿಖೆಯ ವೇಳೆ ಮನೆಯಿಂದ 50 ಕಿ.ಮೀ ದೂರದಲ್ಲಿರುವ ಕೊಳಚೆ ಗುಂಡಿಯಲ್ಲಿ ಆಕೆಯ ಮುಂಡ ಪತ್ತೆಯಾಗಿತ್ತು.
ಆಕೆಯ ಕೈಯಲ್ಲಿದ್ದ ಟ್ಯಾಟೂ ಮತ್ತು ತೋಳಿನಲ್ಲಿದ್ದ ಓಂ ಗುರುತಿನಿಂದಾಗಿ ಶವವನ್ನು ಗುರುತಿಸಲಾಗಿತ್ತು. ಪತಿ ಸಿದ್ದೇಶ್ ಗೌರವ್ ಮತ್ತು ಆತನ ತಂದೆ ತಾಯಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದರು.ಶವವನ್ನು ಎಸೆಯಲು ಸಹಕರಿಸಿದ ಇಬ್ಬರು ವ್ಯಕ್ತಿಗಳನ್ನೂ ವಶಕ್ಕೆ ಪಡೆದಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು ಶಹಾಪುರ್-ನಾಸಿಕ್ ರಸ್ತೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೆಡ್‌ಶೀಟ್‌ನಲ್ಲಿ ಸುತ್ತಿ ಪ್ಲ್ರಾಸ್ಟಿಕ್ ಚೀಲದಲ್ಲಿ ಹಾಕಿ ಎಸೆಯಲಾಗಿದ್ದ ರುಂಡವನ್ನು ಪತ್ತೆ ಹಚ್ಚಿದಾರೆ.
ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದರಿಂದ ಪತಿ ಕುಪಿತನಾಗಿ ಆಕೆಯನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.