ಭಾರತದ ಆರ್ಥಿಕ ಬಲವರ್ಧನೆಗೆ ಅಸೂಯೆ ಬೇಡ : ಬೀಜಿಂಗ್ಗೆ ಚೀನೀ ಮಾಧ್ಯಮ
Team Udayavani, Jul 17, 2017, 10:58 AM IST
ಹೊಸದಿಲ್ಲಿ: ಈ ದಿನಗಳಲ್ಲಿ ಅತ್ಯದ್ಭುತ ಪ್ರಮಾಣದಲ್ಲಿ ಭಾರತಕ್ಕೆ ವಿದೇಶೀ ಬಂಡವಾಳ ಹರಿದು ಬರುತ್ತಿರುವುದರಿಂದ ಅದು ಆರ್ಥಿಕವಾಗಿ ಬಲಿಷ್ಠ ವಾಗುತ್ತಿದೆ. ಅದಕ್ಕಾಗಿ ಚೀನ ಅಸೂಯೆ ಪಡದೇ ತಣ್ಣಗಿರಬೇಕು ಮತ್ತು ಹೊಸ ಶಕೆಯ ಆರ್ಥಿಕಾಭಿವೃದ್ದಿಗಾಗಿ ಚೀನ ವಿನೂತನ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳಬೇಕು ಎಂದು ಚೀನದ ಸರಕಾರಿ ಒಡೆತನದ ಸುದ್ದಿ ಪತ್ರಿಕೆ ಹೇಳಿದೆ.
”ಭಾರತಕ್ಕೆ ಅಭೂತಪೂರ್ವ ಪ್ರಮಾಣದಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿರುವುದರಿಂದ ಅದಕ್ಕೆ ಸಹಜವಾಗಿಯೇ ತನ್ನ ಉತ್ಪಾದನಾ ರಂಗವನ್ನು ಅಭಿವೃದ್ದಿಪಡಿಸುವ ಸಾಮರ್ಥ್ಯ ದೊರಕಿದೆ. ವಿದೇಶೀ ಉತ್ಪಾದಕರು ಇಂದಿನ ದಿನಗಳಲ್ಲಿ ಭಾರತದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡುತ್ತಿರುವುದರಿಂದ ಭಾರತದ ಆರ್ಥಿಕತೆ, ಕೈಗಾರಿಕೆ ಮತ್ತು ಉದ್ಯೋಗಾಭಿವೃದ್ಧಿಗೆ ಇದು ಅತ್ಯಂತ ಮಹತ್ವದ್ದಾಗಿದೆ”
”ಆದರೆ ಚೀನ ಭಾರತದ ಈ ಅತ್ಯಪೂರ್ವ ಬೆಳವಣಿಗೆಯ ಬಗ್ಗೆ ಅಸೂಯೆ ಪಡಕೂಡದು. ಬದಲಾಗಿ ಅದು ಭಾರತದೊಂದಿಗಿನ ಆರ್ಥಿಕ ಸ್ಪರ್ಧೆಯನ್ನು ಎದುರಿಸಲು ಹೊಸ ಶಕೆಗಾಗಿ ಪರಿಣಾಮಕಾರಿ ಅಭಿವೃದ್ಧಿ ತಂತ್ರಗಾರಿಕೆಯನ್ನು ರೂಪಿಸಿಕೊಂಡು ಆ ದಿಶೆಯಲ್ಲಿ ಕ್ರಿಯಾಶೀಲವಾಗಬೇಕು” ಎಂದು ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಅಗ್ರ ಲೇಖನದಲ್ಲಿ ಚೀನಕ್ಕೆ ಬುದ್ಧಿಮಾತು ಹೇಳಿದೆ.
ಭಾರತದಲ್ಲಿ ವಿದೇಶೀ ಉತ್ಪಾದಕರು ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದರಿಂದ ಈ ಕ್ಷೇತ್ರದಲ್ಲಿನ ಭಾರತದ ದೌರ್ಬಲ್ಯವು ನಿವಾರಣೆಗೊಳ್ಳುವುದು ಸಹಜವೇ ಆಗಿದೆ. ಭಾರತದಲ್ಲಿನ ಚೀನದ ಕಂಪೆನಿಗಳು ಕೂಡ ಈ ದಿಶೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದು ಲೇಖನವು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್ಎಚ್ಆರ್ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.