ಬೇನಾಮಿ ಬರೆ, ಬೇನಾಮಿ ಆಸ್ತಿ ಸಂಪಾದಿಸಿದವರಿಗೆ ಕಾದಿದೆ ಶಾಸ್ತಿ
Team Udayavani, Nov 5, 2017, 6:00 AM IST
ಸುಂದರ್‌ನಗರ / ಕಾಂಗ್ರಾ (ಹಿಮಾಚಲ ಪ್ರದೇಶ): ನೋಟು ಅಪಮೌಲ್ಯಕ್ಕೆ ಒಂದು ವರ್ಷ ವಾಗುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಮಂದಿಗೆ ಶಾಕ್ ನೀಡಲು ಸಿದ್ಧವಾಗಿದ್ದಾರೆ.
ಮನೆಯ ಅಡುಗೆಯವ, ಡ್ರೈವರ್‌ಗಳ ಹೆಸರಲ್ಲಿ ಭರ್ಜರಿ ಆಸ್ತಿ ಮಾಡಿ ಟ್ಟಿರುವವರ ಜನ್ಮ ಜಾಲಾಡುವ ಬಗ್ಗೆ ಸುಳಿವು ನೀಡಿರುವ ಮೋದಿ ಅವರು, ಸದ್ಯದಲ್ಲೇ ಬೇನಾಮಿ ಕಾಯ್ದೆ ಅಸ್ತ್ರ ಪ್ರಯೋಗಿಸುವುದಾಗಿ ಹೇಳಿದ್ದಾರೆ. ಈಗಾಗಲೇ ನೋಟು ಅಪಮೌಲ್ಯದಿಂದ ಶಾಕ್‌ಗೆ ಒಳಗಾಗಿರುವ ಕಾಂಗ್ರೆಸಿಗರು, ಇದೀಗ ಸರಕಾರದ ಬೇನಾಮಿ ಬ್ರಹ್ಮಾಸ್ತ್ರ ಎದುರಿಸುವ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಂದರ್‌ನಗರದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಅವರು, ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ನೋಟು ಅಪಮೌಲ್ಯದ ಬಗ್ಗೆ ಕಾಂಗ್ರೆಸ್ ಜನರಲ್ಲಿ ಗೊಂದಲ ಮೂಡಿ ಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಕಾರಣ ನಮ್ಮ ಬೇನಾಮಿ ಕಾಯ್ದೆಯ ಅಸ್ತ್ರದ ಪ್ರಯೋಗದ ಮಾಹಿತಿ. ನೋಟು ಅಪಮೌಲ್ಯದ ಬಗ್ಗೆ ಗೊಂದಲ ಮೂಡಿಸಿ, ನನ್ನ ವಿರುದ್ಧವೇ ಜನರಲ್ಲಿ ದ್ವೇಷ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
“”ಬಡವರಿಂದ ಲೂಟಿ ಮಾಡಿರುವು ದನ್ನು ವಾಪಸ್ ಕೊಡಿಸಲು ಸಮಯ ಕೂಡಿಬಂದಿದೆ. ಕಾಂಗ್ರೆಸ್ ನಾಯಕರು ಬೇರೆಯವರ ಹೆಸರಲ್ಲಿ ಮಾಡಿರುವ ಬೇನಾಮಿ ಆಸ್ತಿಯನ್ನು ಸಕ್ರಮ ಮಾಡಿಕೊಳ್ಳಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂಥ ವಾತಾವರಣವನ್ನೇ ಸೃಷ್ಟಿಸುತ್ತಿದ್ದೇನೆ” ಎಂದು ಹೇಳಿದರು. ಅಲ್ಲದೆ, ನ.8 ರಂದು ಕಾಂಗ್ರೆಸ್ ನಾಯಕರು ದೇಶಾ ದ್ಯಂತ ಕರಾಳ ದಿನ ಆಚರಿಸಲು ನೋಡುತ್ತಿದ್ದಾರೆ. “ಅವರ ಪ್ರಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದೇ ನಾನು ಮಾಡಿದ ಅತಿದೊಡ್ಡ ಪಾಪ’ ಎಂದೂ ವ್ಯಂಗ್ಯವಾಡಿದರು.
“”ನಾನು ಕಾಂಗ್ರೆಸ್ ನಾಯಕರ ಕಡೆಯಿಂದ ಕೆಲವೊಂದು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಕೆಲವರು (ಕಾಂಗ್ರೆಸ್ ನಾಯಕರು) ಅವರ 500 ರೂ.ಗಳ ನೋಟುಗಳ ಬ್ಯಾಗ್ ಕಳೆದು ಕೊಂಡರು. ಇನ್ನು ಕೆಲವರು 1,000 ರೂ.ಗಳ ನೋಟುಗಳ ಬ್ಯಾಗುಗಳನ್ನೂ ಕಳೆದುಕೊಂಡಿದ್ದಾರೆ. ಇದೇ ಸಂದರ್ಭ ದಲ್ಲಿ ಮೋದಿ ಬೇನಾಮಿ ಕಾಯ್ದೆ ಸಿದ್ಧ ಮಾಡುತ್ತಿದ್ದಾರೆ ಎಂಬ ಮಾಹಿತಿ ಅವರಿಗೆ ಗೊತ್ತಾಗುತ್ತಿದೆ. ಇದೇ ಅವರ ಆತಂಕಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.
“”ಅವರ ಚಿಂತೆಗೆ ಕಾರಣವಾಗಿರು ವುದು ಅವರೇ ಮಾಡಿಟ್ಟಿರುವ ಬೇನಾಮಿ ಆಸ್ತಿಗಳಾದ ಭೂಮಿ, ಫ್ಲ್ಯಾಟ್
ಗಳು, ಅಂಗಡಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ ” ಎಂಬುದು.
ಏನಿದು ಬೇನಾಮಿ ಆಸ್ತಿ?
ಬೇನಾಮಿ ಎಂಬುದು ಹಿಂದಿ ಪದವಾಗಿದ್ದು, ಹೆಸರಿಲ್ಲದ್ದು ಎಂಬ ಅರ್ಥವಿದೆ. ಅಂದರೆ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಹೆಸರಿಗೆ ಬಿಟ್ಟು ಪತ್ನಿ, ಮಕ್ಕಳು ಅಥವಾ ಬೇರೆ ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಆಸ್ತಿ ಖರೀದಿ ಮಾಡುವುದು. ಅಂದರೆ ತಮ್ಮ ಕಪ್ಪುಹಣದಿಂದ ಆಸ್ತಿ ಖರೀದಿಸಿ ಸರಕಾರಕ್ಕೂ ತೆರಿಗೆ ಕಟ್ಟದೇ ಮಣ್ಣೆರಚುವ ಕೆಲಸ ಮಾಡಲಾಗುತ್ತದೆ. ಇದಷ್ಟೇ ಅಲ್ಲ, ಸಹೋದರ, ಸಹೋದರಿ, ಸಂಬಂಧಿ ಅಥವಾ ಇನ್ನಾವುದೇ ವ್ಯಕ್ತಿಯ ಜತೆ ಜಂಟಿಯಾಗಿ ಆಸ್ತಿ ಖರೀದಿಸುವುದೂ ಬೇನಾಮಿ ಆಸ್ತಿ ಎಂದೇ ಪರಿಗಣಿತವಾಗುತ್ತದೆ. ಇದರಲ್ಲಿ ಸ್ಥಿರಾಸ್ತಿ, ಚರಾಸ್ತಿ, ಮೂರ್ತ, ಅಮೂರ್ತ, ಯಾವುದೇ ರೀತಿಯ ಹಕ್ಕು ಅಥವಾ ಆಸಕ್ತಿ ಅಥವಾ ಕಾನೂನು ಪತ್ರಗಳು ಸೇರಿವೆ.
ಬೇನಾಮಿ ಕಾಯ್ದೆ 1988
ಈಗಾಗಲೇ ಭಾರತದಲ್ಲಿ ಬೇನಾಮಿ ಆಸ್ತಿ ಮಾಡಿಕೊಳ್ಳದಂತೆ ತಡೆಗಟ್ಟುವ ನಿಟ್ಟಿನಲ್ಲಿ 1988ರಲ್ಲೇ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದೆ. ಆದರೆ ಮೋದಿ ಸರಕಾರ ಬಂದ ಮೇಲೆ ಇದಕ್ಕೆ ತಿದ್ದುಪಡಿ ಮಾಡಿ 2016ರ ನವೆಂಬರ್ 1ರಿಂದಲೇ ಜಾರಿ ಮಾಡಲಾಗಿದೆ. ಇದರನ್ವಯ ಬೇನಾಮಿ ಆಸ್ತಿ ಮಾಡಿದವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇದಷ್ಟೇ ಅಲ್ಲ, ಬೇನಾಮಿ ಆಸ್ತಿಯನ್ನು ಸರಕಾರ ಹಿಂದೆಮುಂದೆ ನೋಡದೆ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಈ ತಿದ್ದುಪಡಿಯಲ್ಲಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.