Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
ಉಗ್ರ ಹೇಳಿಕೆಗೆ ಪಾಕ್ ವಿರುದ್ಧ ಬಿಜೆಪಿ, ಆಪ್ ಕೆಂಡ
Team Udayavani, Nov 13, 2024, 5:21 AM IST
ಲಾಹೋರ್/ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ರನ್ನು ಪಾಕಿಸ್ಥಾನ “ಭಯೋತ್ಪಾದಕ’ ಎಂದು ಕರೆದಿದೆ. ಹೀಗಾಗಿ ಪಾಕಿಸ್ಥಾನದ ಲಾಹೋರ್‌ನ ಶಾದ್ಮನ್ ಚೌಕಕ್ಕೆ ಅವರ ಹೆಸರನ್ನು ಇರಿಸಲು ನಿರಾಕರಿಸಿದ ಪ್ರಕರಣ ನಡೆದಿದೆ. ಈ ಬೆಳವಣಿಗೆಗೆ ಭಾರತದ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ(ಆಪ್) ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಪಾಕಿಸ್ಥಾನ ಸೇನೆಯ ನಿವೃತ್ತ ಅಧಿಕಾರಿ ಲಾಹೋರ್ ಹೈಕೋರ್ಟ್‌ಗೆ ನೀಡಿದ ವರದಿಯಲ್ಲಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ನಮೂದಿಸಲಾಗಿದ್ದು, ಭವಿಷ್ಯದಲ್ಲೂ ಅವಹೇಳನಕಾರಿ ಹೇಳಿಕೆ ಬಾರದಂತೆ ತಡೆಯುವ ದೃಷ್ಟಿಯಿಂದ ಈ ವರದಿಯನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದೆ.
ಭಯೋತ್ಪಾದಕರಿಗೆ ಆಶ್ರಯ ನೀಡುವುದರೊಂದಿಗೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ದೇಶವೊಂದು ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ನಾಯಕನನ್ನು ಭಯೋತ್ಪಾದಕ ಎನ್ನುವುದು ಆ ದೇಶದ ಆಷಾಡಭೂತಿತನವನ್ನು ತೋರುತ್ತದೆ’ ಎಂದು ಬಿಜೆಪಿ ಟೀಕಿಸಿದೆ. ಆಪ್ ಕೂಡ ಪಾಕಿಸ್ಥಾನ ವಿರುದ್ಧ ಕಿಡಿಕಾರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.