ಇಂದು,ನಾಳೆ ಭಾರತ್ ಬಂದ್; ಬ್ಯಾಂಕಿಂಗ್,ಸಾರಿಗೆ ಸೇರಿ ಹಲವು ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ
ಸೆಂಟ್ರಲ್ ಟ್ರೇಡ್ ಯೂನಿಯನ್ ವತಿಯಿಂದ ಕರೆ ನೀಡಲಾಗಿರುವ ಬಂದ್
Team Udayavani, Mar 28, 2022, 7:27 AM IST
ಹೊಸದಿಲ್ಲಿ: ಬ್ಯಾಂಕಿಂಗ್, ಇಂಧನ ಹಾಗೂ ಇನ್ನಿತರ ಸೇವಾ ವಲಯಗಳ ನೌಕರರು ಹಾಗೂ ಕಾರ್ಮಿಕರ ಸಂಘಟನೆಗಳ ಸಂಯೋಜಿತ ವೇದಿಕೆಯಾದ ಸೆಂಟ್ರಲ್ ಟ್ರೇಡ್ ಯೂನಿಯನ್ ಕರೆ ನೀಡಿರುವ 2 ದಿನಗಳ ಭಾರತ್ ಬಂದ್‌ಗೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲಿಸಿವೆ.
ಹಾಗಾಗಿ ಮಾ. 28 ಹಾಗೂ 29ರಂದು ಸಾರ್ವಜನಿಕ ರಿಗೆ ಕೆಲವು ಸೇವೆಗಳಲ್ಲಿ ಅಡೆತಡೆ ಉಂಟಾಗಲಿವೆ.
ಏಕೆ ಮುಷ್ಕರ?: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡುವ 2021ರ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬ್ಯಾಂಕಿಂಗ್ ಕ್ಷೇತ್ರದ ಹಲವು ಸಂಘಟನೆ ಗಳು ಮುಷ್ಕರಕ್ಕಿಳಿಯಲಿವೆ. ಕೇಂದ್ರದ ರೈತ ವಿರೋಧಿ, ಜನ ವಿರೋಧಿ, ಖಾಸಗೀಕರಣದಂಥ ನೀತಿಗಳು ಕಾರ್ಮಿಕರ ಹಿತಕ್ಕೆ ಧಕ್ಕೆ ತರುತ್ತಿರುದನ್ನು ಖಂಡಿಸಿ ಮುಷ್ಕರ ನಡೆಯಲಿದೆ ಎಂದು ಬಂದ್‌ಗೆ ಬೆಂಬಲಿಸಿ ರುವ ಸಂಘಟನೆಗಳು ತಿಳಿಸಿವೆ. ಖಾಸಗಿ ಬ್ಯಾಂಕ್ ಆದ ಆರ್‌ಬಿಎಲ್ ಕೂಡ ಮುಷ್ಕರವನ್ನು ಬೆಂಬಲಿಸಿದೆ.
ಯಾರಿಂದ ಬೆಂಬಲ?: ಬ್ಯಾಂಕಿಂಗ್, ಕಲ್ಲಿದ್ದಲು, ವಿದ್ಯುತ್, ಉಕ್ಕು, ತೈಲೋದ್ಯಮ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ ಉತ್ಪಾದನೆ, ವಿಮಾ ಕ್ಷೇತ್ರಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಷ್ಕರ ಹಿನ್ನೆಲೆ ಅಲರ್ಟ್ ಆಗಿರುವಂತೆ ಮತ್ತು ರಾಷ್ಟ್ರೀಯ ಗ್ರಿಡ್‌ನಲ್ಲಿ ಸ್ಥಿರತೆ ಕಾಪಾಡುವಂತೆ ಕೇಂದ್ರ ವಿದ್ಯುತ್ ಸಚಿವಾಲಯವು ತನ್ನೆಲ್ಲ ಸಂಸ್ಥೆಗಳಿಗೂ ಸೂಚಿಸಿದೆ.
ಇದನ್ನೂ ಓದಿ:ತಂದೆ ಮಕ್ಕಳ ನಡುವಿನ ಜಗಳ, ತಂದೆ ಸಾವಿನಲ್ಲಿ ಅಂತ್ಯ : ಮಗಳು ಪೊಲೀಸರ ವಶಕ್ಕೆ
ಇಂದು ಏನಿರಲ್ಲ?
-ಎಸ್‌ಬಿಐ ಫಿಸಿಕಲ್ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯವಾಗು ವುದಾಗಿ ಹೇಳಿದೆ. ಮುಷ್ಕರ ತಾರಕಕ್ಕೇರದಿದ್ದರೆ ಸೇವೆಗಳಲ್ಲಿ ವ್ಯತ್ಯಯವಾ ಗುವುದಿಲ್ಲವೆಂದು ಕೆನರಾ ಬ್ಯಾಂಕ್ ಹೇಳಿದೆ.
-ಎಟಿಎಂ, ಆನ್‌ಲೈನ್ ಸೇವೆಗಳು ಯಥಾಸ್ಥಿತಿಯಲ್ಲಿರುತ್ತವೆ. ಆದರೆ ಬ್ಯಾಂಕ್ ಶಾಖೆಗಳಲ್ಲಿನ ಸೇವೆಗಳಲ್ಲಿ ಕೊಂಚ ವ್ಯತ್ಯಯವಾಗಬಹುದು.
-ಕೆಲವು ರಾಜ್ಯಗಳಲ್ಲಿನ ಖಾಸಗಿ ವಿದ್ಯುತ್ ಸರಬರಾಜು ಸಂಸ್ಥೆಗಳೂ ಮುಷ್ಕರಕ್ಕೆ ಬೆಂಬಲ ಕೊಟ್ಟಿರುವುದರಿಂದ ವಿದ್ಯುತ್ ಸರಬರಾಜು ಸೇವೆಗಳಲ್ಲಿ ವ್ಯತ್ಯಾಸವಾಗಬಹುದು.
-ಸಾರಿಗೆ ಒಕ್ಕೂಟಗಳೂ ಬೆಂಬಲ ನೀಡಿರುವುದರಿಂದ ಆಟೋ, ಟ್ಯಾಕ್ಸಿ, ಖಾಸಗಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.