ತ್ರಿಪುರದಲ್ಲಿ ಬಿಜೆಪಿ ಸುನಾಮಿ, ಇನ್ನೆರಡರಲ್ಲಿ ಅಧಿಕಾರದ ಮೇಲೆ ಕಣ್ಣು
Team Udayavani, Mar 3, 2018, 4:15 PM IST
ಚುನಾವಣಾ ಫಲಿತಾಂಶಗಳು:
ತ್ರಿಪುರ 59/59 : ಬಿಜೆಪಿ+ 43, ಕಾಂಗ್ರೆಸ್ 0, ಸಿಪಿಎಂ 16, ಸಿಪಿಐ 0, ಇತರರು 0.
ಮೇಘಾಲಯ : 59/59 : ಬಿಜೆಪಿ 2, ಕಾಂಗ್ರೆಸ್ 21, ಯುಡಿಪಿ 6, ಎನ್‌ಪಿಪಿ 19, ಇತರರು 11.
ನಾಗಾಲ್ಯಾಂಡ್ 60/60 : ಬಿಜೆಪಿ + 29, ಕಾಂಗ್ರೆಸ್ 0, ಎನ್‌ಪಿಎಫ್ 25, ಎನ್‌ಸಿಪಿ 0, ಇತರರು 6
ಹೊಸದಿಲ್ಲಿ : ಬಿಜೆಪಿ ಅಲೆ ಭಾರತದ ಮೂರು ಈ ಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಪ್ರಬಲವಾಗಿ ಬೀಸುತ್ತಿದ್ದು ತ್ರಿಪುರದಲ್ಲಿ ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಸಿಪಿಎಂ-ನೇತೃತ್ವದ ಸರಕಾರ ಧೂಳಿಪಟವಾಗಿದೆ. ತ್ರಿಪುರದಲ್ಲಿ ಸರಕಾರ ರಚಿಸಲಿರುವ ಬಿಜೆಪಿ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲೂ ಸರಕಾರ ರಚಿಸುವ ಸಾಧ್ಯತೆಗಳಿವೆ.
ತ್ರಿಪುರದಲ್ಲಿ ಚುನಾವಣೆಗೆ ಒಳಪಟ್ಟ 59 ಸ್ಥಾನಗಳ ಪೈಕಿ ಬಿಜೆಪಿ 43 ಸ್ಥಾನಗಳಲ್ಲಿ ಮುಂದಿದ್ದು ಅದು ಸರಕಾರ ರಚಿಸುವುದು ಖಚಿತವೇ ಇದೆ.
ಹಿಂದಿನ ತ್ರಿಪುರ ಸರಕಾರದಲ್ಲಿ 50 ಸ್ಥಾನಗಳನ್ನು ಹೊಂದಿದ್ದ ಎಡ ಪಕ್ಷ ಈ ಬಾರಿ ಕೇವಲ 16 ಸ್ಥಾನಗಳಲ್ಲಿ ಮುಂದಿದೆ. ಚಾರ್ಲಿಯಾಮ್ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ಮೃತಪಟ್ಟ ಕಾರಣ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು. ಅದನ್ನು ಇನ್ನು ಇದೇ ಮಾರ್ಚ್ 12ರಂದು ನಡೆಸಲಾಗುವು.
ತ್ರಿಪುರದಲ್ಲಿ ಐದನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಮಾಣಿಕ್ ಸರ್ಕಾರ ಅವರ ಕನಸು ಭಗ್ನವಾಗಿದೆ; ಎಡ ಪಕ್ಷಕ್ಕೆ ಆ ಮೂಲಕ ಭಾರೀ ದೊಡ್ಡ ಹೊಡೆತ ನೀಡಲಾಗಿದೆ. ಈ ವರೆಗೆ ದೇಶದಲ್ಲಿ ತ್ರಿಪುರ ಮತ್ತು ಕೇರಳದಲ್ಲಿ ಮಾತ್ರವೇ ಎಡ ಪಕ್ಷದ ಆಳ್ವಿಕೆ ಇತ್ತು. ಬಿಜೆಪಿಯ ರಾಮ ಮಾಧವ್ ಹೇಳಿರುವ ಪ್ರಕಾರ, ತ್ರಿಪುರ ಸುಂದರಿ ಮಾತೆಯ ಆಶೀರ್ವಾದದಿಂದಾಗಿ ಬಿಜೆಪಿ ತ್ರಿಪುರದಲ್ಲಿ ಕ್ರಾಂತಿಕಾರಿ ಫಲಿತಾಂಶ ಸಾಧಿಸಿದೆ.
ಮೇಘಾಲಯದಲ್ಲಿ :
ಮೇಘಾಲಯದಲ್ಲಿ ಈಗ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುಂದಿದೆ; ಆದರೆ ಸರಕಾರ ರಚಿಸಲು ಅಗತ್ಯವಿರುವ 31ರ ಮ್ಯಾಜಿಕ್ ನಂಬರ್ ಸಾಧಿಸಲು ವಿಫಲವಾಗಿದೆ.
ಇಲ್ಲಿಯೂ ಕೂಡ 59 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಲಯಂನಗರ ಕ್ಷೇತ್ರದ ಅಭ್ಯರ್ಥಿಯ ಹತ್ಯೆಯಾದ ಕಾರಣ ಚುನಾವಣೆಯನ್ನು ರದ್ದುಪಡಿಸಲಾಗಿತ್ತು.
ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಹೊರತಾಗಿಯೂ ಅದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾದ ಅನಿವಾರ್ಯತೆ ಒದಗಿದೆ.
ಇಲ್ಲಿನ ಅಂತಿಮ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ 21 ಸ್ಥಾನಗಳಲ್ಲಿ ಮುಂದಿದೆ; ಕೇಂದ್ರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ, ಮಾಜಿ ಲೋಕಸಭಾ ಸ್ಪೀಕರ್ ಪಿ ಎ ಸಂಗ್ಮಾ ಸಂಸ್ಥಾಪಿತ ಎನ್‌ಪಿಪಿ 19 ಸ್ಥಾನಗಳಲ್ಲಿ ಮುಂದಿದೆ; ಬಿಜೆಪಿ 2ರಲ್ಲಿ ಮುಂದಿದೆ.
ಎನ್‌ಡಿಎ ಪಾಲುದಾರನಾಗಿರುವ ಹಾಗೂ ಪ್ರತ್ಯೇಕವಾಗಿ ಚುನಾವಣಾ ಕಣಕ್ಕೆ ಇಳಿದಿರುವ ಯುಡಿಪಿ, ಆರು ಸ್ಥಾನಗಳಲ್ಲಿ ಮುಂದಿದೆ; ನಿರ್ಣಾಯಕರಾಗಬಲ್ಲ ಪಕ್ಷೇತ್ರರು 11 ಸ್ಥಾನಗಳಲ್ಲಿ ಮುಂದಿದ್ದಾರೆ !
ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ಸಲುವಾಗಿ ಇಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳು ಚುನಾವಣೋತ್ತರ ಹೊಂದಾಣಿಕೆ ನಡೆಸುವ ಸಂಭವವಿದೆ. ಇದನ್ನು ಬಿಜೆಪಿಯ ಮೇಘಾಲಯ ಪ್ರಭಾರ ನಳಿನ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ : ಮೇಘಾಲಯದಲ್ಲಿ ಜನರು ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದಾರೆ; ಅಂತೆಯೇ ಕಾಂಗ್ರೆಸ್ ಹೊರಗಿಡಲು ಬಿಜೆಪಿ ಮತ್ತು ಇತರ ಪಕ್ಷಗಳು ಸೇರಿಕೊಂಡು ಚುನಾವಣೋತ್ತರ ಮೈತ್ರಿ ನಡೆಸಲಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ :
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾಗಿರುವ ಹೊಸದಾಗಿ ಸಂಸ್ಥಾಪಿಸಲ್ಪಟ್ಟ ಎನ್‌ಡಿಪಿಪಿ ಮುಂದಿವೆ. ಎನ್‌ಡಿಪಿಪಿ 26 ಸ್ಥಾನಗಳಲ್ಲಿ ಮುಂದಿದೆ. ಎನ್‌ಡಿಪಿಪಿ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ನೀಫಿಯೂ ರಿಯೋ ಅವರೇ ನಾಗಾಲ್ಯಾಂಡ್‌ನ ಮುಂದಿನ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಟಿಆರ್ ಝೆಲಿಯಾಂಗ್ ಅವರ ಎನ್‌ಪಿಎಫ್ 28 ಸ್ಥಾನಗಳಲ್ಲಿ ಮುಂದಿದೆ. ಹಿಂದೆ ಎನ್‌ಪಿಎಫ್ ಬಿಜೆಪಿ ಜತೆ ಮೈತ್ರಿ ಹೊಂದಿತ್ತು. ಆದರೆ ಚುನಾವಣೆಗೆ ಮುನ್ನ ಬಿಜೆಪಿ ಆ ಮೈತ್ರಿಯನ್ನು ಮುರಿದು, ಎನ್‌ಡಿಪಿಪಿ ಜತೆಗೆ ಮೈತ್ರಿ ಬೆಳೆಸಿಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.