ಯಾರಿಗುಂಟು ಯಾರಿಗಿಲ್ಲ: ಉದ್ಯೋಗಿಗಳಿಗೆ BMW ಬೈಕ್ ಸೇರಿ ದುಬಾರಿ ಉಡುಗೊರೆ ಘೋಷಿಸಿದ ಭಾರತ್ ಪೇ
Team Udayavani, Aug 2, 2021, 9:02 PM IST
ನವದೆಹಲಿ: ನಿಜಕ್ಕೂ ಭಾರತ್ ಪೇ ಸ್ಟಾರ್ಟಪ್ ಕಂಪನಿಯ ಉದ್ಯೋಗಿಗಳಿಗೆ ಇದು ಸುವರ್ಣಕಾಲ ಅಂತಾ ಹೇಳಬಹುದು. ಯಾಕಂದ್ರೆ ಇಲ್ಲಿಯ ಉದ್ಯೋಗಿಗಳಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ ಈ ಸಂಸ್ಥೆ.
ಹೌದು, ಕೆಲ ದಿನಗಳ ಹಿಂದೆಯಷ್ಟೇ ಈ ಕಂಪನಿಯ ಟೆಕ್ ಉದ್ಯೋಗಿಗಳಿಗೆ ಬಿಎಂಡಬ್ಲೂ ಬೈಕ್, ಜಾವಾ ಪೆರಕ್, ರಾಯಲ್ ಎನ್ ಫೀಲ್ಡ್ , ಕೆಟಿಎಂ ಡ್ಯೂಕ್ 390, ಏರಪಾಡ್, ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ನೀಡುವುದಾಗಿ ಹೇಳಿದ್ದ ಭಾರತ್ ಪೇ, ಈ ಬಿಗ್ ಆಫರ್ ನ್ನು ಹೊಸದಾಗಿ ಸೇರುವ ಉದ್ಯೋಗಿಗಳಿಗೂ ವಿಸ್ತರಿಸಿದೆ.
ಈ ಬಗ್ಗೆ ತಮ್ಮ ಲಿಕ್ಡ್ ಇನ್ ಪ್ರೊಪೈಲ್ ನಲ್ಲಿ ಮಾಹಿತಿ ನೀಡಿರುವ ಭಾರತ್ ಪೇ ಸಂಸ್ಥಾಪಕ ಮತ್ತು ಸಿಇಒ ಅಶ್ನೀರ್ ಗ್ರೋವರ್ , “ಇದು ನಿಜ. ಈ ಅವಕಾಶ ನಿಮಗಾಗಿ ಕಾಯುತ್ತಿದೆ. ಟೆಕ್ ತಂಡದಲ್ಲಿ ನಮ್ಮ ಹೊಸ ಉದ್ಯೋಗಿಗಳಿಗೆ ಬಿಎಂಡಬ್ಲ್ಯು ಬೈಕುಗಳ ರೆಡಿಯಾಗಿವೆ. ನಮ್ಮ ಪ್ರಾಡಕ್ಟ್ ಮ್ಯಾನೆಜರ್ ಗಳಿಗೂ ಬೈಕ್ ಮತ್ತು ಗ್ಯಾಜೆಟ್ ಗಳ ಉಡುಗೊರೆಯನ್ನು ನೀಡುತ್ತಿರುವುದು ನಮಗೆ ಸಂತಸದ ವಿಷಯ ಎಂದು ಬರೆದುಕೊಂಡಿದ್ದಾರೆ.
ಇನ್ನು ತನ್ನ ಉದ್ಯೋಗಿಗಳಿಗೆ 75 % ಸಂಬಳ ಹೆಚ್ಚಳವನ್ನೂ ನೀಡಿದೆ ಭಾರತ್ ಪೇ. ಕೋವಿಡ್ ಸಂಕಷ್ಟದ ಕಾಲದಲ್ಲಿಯೂ ತಮ್ಮ ಟೆಕ್ ತಂಡಕ್ಕೆ ಈ ಉಡುಗೊರೆ ಘೋಷಿಸುವ ಮೂಲಕ ಇಡೀ ಟೆಕ್ ಜಗತ್ತನ್ನೆ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ ಭಾರತ್ ಪೇ. ಇದರ ಜೊತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದರೆ ಇಲ್ಲಿಯ ಉದ್ಯೋಗಿಗಳಿಗೆ ನೀಡಲಾದ ಈ ಆಫರ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಕೂಡ ಹರಿದಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.