Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್ಪೋಲ್’
ಇಂಟರ್ಪೋಲ್ ಸೇರಿ ಇತರ ಸಂಸ್ಥೆಗಳ ಜತೆ ಸಂವಹನಕ್ಕೆ ಸಹಕಾರಿ| ಭಾರತಕ್ಕೆ ಬೇಕಿರುವ ಅಪರಾಧಿಗಳನ್ನು ಹುಡುಕಲು ಅನುಕೂಲ
Team Udayavani, Jan 8, 2025, 7:10 AM IST
ನವದೆಹಲಿ: ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಭಾರತಕ್ಕೆ ಬೇಕಾದ ಅಪರಾಧಿಗಳನ್ನು ಹುಡುಕಲು ಅನುಕೂಲವಾಗುವಂತಹ ಪೋರ್ಟಲ್ವೊಂದಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದಕ್ಕೆ “ಭಾರತ್ ಪೋಲ್’ ಎಂದು ಹೆಸರಿಟ್ಟಿದ್ದು, ಇಂಟರ್ಪೋಲ್ ಸೇರಿದಂತೆ ಜಾಗತಿಕ ಸಂಸ್ಥೆಗಳ ಜತೆ ಭಾರತದ ಸಂಸ್ಥೆಗಳು ಸಂವಹನ ನಡೆಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
“ಭಾರತ್ ಪೋಲ್’ ಪೋರ್ಟಲ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಚಾಲನೆ ನೀಡಿದ್ದು, ಅಪರಾಧಿಗಳಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಸಹಾಯ ಪಡೆದುಕೊಳ್ಳಲು ಭಾರತದ ಕಾನೂನು ಜಾರಿ ಸಂಸ್ಥೆಗಳಿಗೆ ಈ ಪೋರ್ಟಲ್ ನೆರವು ನೀಡುತ್ತದೆ ಎಂದು ಹೇಳಿದರು. ಅಲ್ಲದೇ ತಲೆಮರೆಸಿಕೊಂಡಿರುವ ಅಪರಾಧಿಗಳ ಪತ್ತೆಗೆ ಕೆಂಪು, ಹಳದಿ ಕೋಡ್ಗಳ ಬಾವುಟಗಳನ್ನು ತೆರೆಯಲು ಕೋರಿಕೆ ಸಲ್ಲಿಸಲು ಈ ಪೋರ್ಟಲ್ ನೆರವಾಗಲಿದೆ ಎನ್ನಲಾಗಿದೆ.
ಈ ಮೊದಲು ಇಂಟರ್ಪೋಲ್, ಭಾರತದ ಸಿಬಿಐ ಸಂಸ್ಥೆಯನ್ನು ಮಾತ್ರ ಜಾಗತಿಕವಾಗಿ ಗುರುತಿಸಿತ್ತು. ಆದರೆ ಹೊಸ ಪೋರ್ಟಲ್ ಉಳಿದ ತನಿಖಾ ಸಂಸ್ಥೆಗಳು ಮತ್ತು ಎಲ್ಲಾ ರಾಜ್ಯಗಳ ಪೊಲೀಸರಿಗೆ ಇಂಟರ್ಪೋಲ್ ಜತೆ ಸಂಪರ್ಕ ಗಳಿಸಿಕೊಳ್ಳಲು ನೆರವು ನೀಡುತ್ತದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.