ಏರ್ ಟೆಲ್ ಗೆ 5.7 ಕೋಟಿ ಮೊಬೈಲ್ ಬಳಕೆದಾರರು ಬೈ ಬೈ!
Team Udayavani, Feb 1, 2019, 4:41 AM IST
ನವದೆಹಲಿ: ಭಾರತೀಯ ಟೆಲಿಕಾಂ ಕ್ಷೇತ್ರದ ಧಿಗ್ಗಜ ಭಾರ್ತಿ ಏರ್ ಟೆಲ್ 2018ರಲ್ಲಿ ಬರೋಬ್ಬರಿ 5.7 ಕೋಟಿ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಈ ಕುರಿತಾದ ಅಂಕಿ ಅಂಶಗಳನ್ನು ಹೊಂದಿರುವ ಹೇಳಿಕೆಯನ್ನು ಕಂಪೆನಿಯು ಗುರುವಾರ ಬಿಡುಗಡೆಗೊಳಿಸಿದೆ.
2018 ಡಿಸೆಂಬರ್ ಅಂತ್ಯಕ್ಕೆ ಏರ್ ಟೆಲ್ ಸಂಪರ್ಕ ಹೊಂದಿರುವ ಗ್ರಾಹಕರ ಸಂಖ್ಯೆ 28.42 ಕೋಟಿಗಳಾಗಿತ್ತು. ಇದಕ್ಕೂ ಮೊದಲು, ಅಂದರೆ 2018ರ ನವಂಬರ್ ಅಂತ್ಯಕ್ಕೆ 34.1 ಕೋಟಿ ಗ್ರಾಹಕರು ಏರ್ ಟೆಲ್ ಸಂಪರ್ಕ ಹೊಂದಿದ್ದರು. ಈ ಮೂಲಕ ಕಂಪೆನಿಯು ಕೇವಲ ಒಂದೇ ತಿಂಗಳಲ್ಲಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡಂತಾಗಿದೆ. ಏರ್ ಟೆಲ್ ಬಳಕೆದಾರರ ಒಟ್ಟಾರೆ ಸಂಖ್ಯೆ ಇಳಿಮುಖವಾಗಿದ್ದರೂ, ಇದರ 4ಜಿ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸದ್ಯಕ್ಕೆ ಏರ್ ಟೆಲ್ ಬಳಿಯಲ್ಲಿ 7.71 ಕೋಟಿ 4ಜಿ ಬಳಕೆದಾರರಿದ್ದಾರೆ.
ಇದ್ದಕ್ಕಿದ್ದಂತೆಯೇ ಇಷ್ಟೊಂದು ಪ್ರಮಾಣದಲ್ಲಿ ಮೊಬೈಲ್ ಗ್ರಾಹಕರು ಏರ್ ಟೆಲ್ ಸಂಪರ್ಕದಿಂದ ವಿಮುಖವಾಗಲು ಕಾರಣವೇನೆಂಬುದು ಗೊತ್ತಾಗಿಲ್ಲವಾದರೂ, ಕಾಲ್ ಡ್ರಾಪ್ ಸಮಸ್ಯೆ ಮತ್ತು ಇಂಟರ್ನೆಟ್ ವೇಗ ಸಂಬಂಧಿತ ತಾಂತ್ರಿಕ ತೊಂದರೆಗಳಿಂದ ಬೇಸತ್ತು ಹೆಚ್ಚಿನ ಗ್ರಾಹಕರು ಏರ್ ಟೆಲ್ ಕನೆಕ್ಷನ್ ನಿಂದ ವಿಮುಖರಾಗಿದ್ದಾರೆಂದು ಮಾರುಕಟ್ಟೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಟೆಲಿಕಾಂ ಕ್ಷೇತ್ರದಲ್ಲಿ ಉಂಟಾಗಿರುವ ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ ಬಳಕೆದಾರರ ನಡುವಿನ ಅಂತರ ಇನ್ನಷ್ಟು ಕಡಿಮೆಯಾದಂತಾಗಿದೆ. 2018ರ ಡಿಸೆಂಬರ್ ಅಂತ್ಯಕ್ಕೆ ಜಿಯೋ ಬಳಕೆದಾರರ ಒಟ್ಟು ಸಂಖ್ಯೆ 28 ಕೋಟಿಗಳಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.