ಭೀಮಾ ಕೋರೆಗಾಂವ್ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್ ಸಿಂಗ್‌ಗೆ ಸಮನ್ಸ್ ಜಾರಿ
Team Udayavani, Oct 23, 2021, 11:00 PM IST
ಪುಣೆ: ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಲುಕಿದ ರಶ್ಮಿ ಶುಕ್ಲಾ ಮತ್ತು 100 ಕೋಟಿ ರೂ. ಮನಿ ಲಾಂರ್ಡಿಂಗ್ ಪ್ರಕರಣದಿಂದಾಗಿ ನಾಪತ್ತೆಯಾಗಿದ್ದ ಪರಂಬೀರ್ ಸಿಂಗ್ ಮತ್ತೆ ಸಂಕಟದಲ್ಲಿ ಸಿಲುಕಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ ಆಯೋಗವು ಇಬ್ಬರಿಗೂ ಸಮನ್ಸ್ ಜಾರಿಗೊಳಿಸಿದೆ.
ಆಯೋಗದ ವಕೀಲ ಆಶಿಶ್ ಸತು³ತೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಕೋರೆಗಾಂವ್ ಭೀಮಾ ಹಿಂಸಾಚಾರ ನಡೆದಿರುವ ಸಂದರ್ಭದಲ್ಲಿ ಪರಂಬೀರ್ ಸಿಂಗ್ ಅವರು ಎಡಿಜಿ ಕಾನೂನು ಮತ್ತು ರಶ್ಮಿ ಶುಕ್ಲಾ ಅವರು ಪುಣೆ ಪೊಲೀಸ್ ಕಮಿಷನರ್ ಆಗಿದ್ದರು. ಹಿಂಸಾಚಾರದ ಹಿನ್ನೆಲೆಯಲ್ಲಿ ಅವರ ಗುಪ್ತಚರ ಮಾಹಿತಿಯು ಮಹತ್ವದ್ದಾಗಿರುವುದರಿಂದ ಅವರ ಸಾಕ್ಷ್ಯದ ಅಗತ್ಯವಿದೆ ಎಂದವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಸತ್ಪುತೆಯ ಅರ್ಜಿಯನ್ನು ಅನುಮೋದಿಸಿ ಆಯೋಗದ ಅಧ್ಯಕ್ಷ, ಮಾಜಿ ನ್ಯಾಯಮೂರ್ತಿ ಜೆಎನ್ ಪಟೇಲ್ ಅವರು ಸಮನ್ಸ್ ಜಾರಿಗೊಳಿಸಿದ್ದಾರೆ.
ಇದೇ ವೇಳೆ ಹಿರಿಯ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧ ಫೋನ್ ಕದ್ದಾಲಿಕೆ ಪ್ರಕರಣ ದಾಖಲಾಗಿದೆ. ರಶ್ಮಿ ಶುಕ್ಲಾ ಪೋಲಿಸ್ ಮತ್ತು ರಾಜ್ಯ ಗುಪ್ತಚರ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾಗ, ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಹಲವು ಮಂತ್ರಿಗಳ ಮತ್ತು ಕೆಲವು ಖಾಸಗಿ ವ್ಯಕ್ತಿಗಳ ಫೋನ್ ಟ್ಯಾಪ್ ಮಾಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮತ್ತು ಕೇಂದ್ರದ ನಡುವೆ ವಿವಾದ ಆರಂಭವಾಗಿದ್ದು, ಮುಂಬಯಿ ಪೊಲೀಸರು ರಶ್ಮಿ ಶುಕ್ಲಾರನ್ನು ಪ್ರಕರಣಕ್ಕೆ ಉತ್ತರಿಸುವಂತೆ ಒತ್ತಾಯಿಸಿದ್ದರು. ಇದಾದ ಅನಂತರ ಮತ್ತೂಮ್ಮೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ರಶ್ಮಿ ಶುಕ್ಲಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.