Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕಿ ನರಿ ದಾಳಿ: ವಿಡಿಯೋ ವೈರಲ್
Team Udayavani, Sep 10, 2024, 6:50 PM IST
ಭೋಪಾಲ್: ಇಬ್ಬರು ವ್ಯಕ್ತಿಗಳ ಮೇಲೆ ನರಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆಯೊಂದು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಸೋಮವಾರ (ಸೆ.09) ನಡೆದಿದೆ.
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ಸಂಜೆಯ ಹೊತ್ತಿನಲ್ಲಿ ರಸ್ತೆ ಬದಿಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಬಂದ ನರಿಯು ಏಕಾಏಕಿ ಇಬ್ಬರ ಮೇಲೂ ದಾಳಿ ನಡೆಸಿದೆ. ಮೊದಲೊಬ್ಬನ ಮೇಲೆ ದಾಳಿ ನಡೆಸಿದ ನರಿಯನ್ನು ಆತ ದೂರ ತಳ್ಳಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ. ಅದೇ ಸಮಯಕ್ಕೆ ನರಿ ಜೊತೆಗಿದ್ದ ಮತ್ತೊಬ್ಬನ ಮೇಲೆ ದಾಳಿ ನಡೆಸಿದೆ. ಆತ ಅದನ್ನು ಸುಮಾರು 15 ಅಡಿಯಷ್ಟು ದೂರ ಎಸೆದಿದ್ದುದರಿಂದ ನರಿಯು ಹೆದರಿ ಓಡಿದೆ. ಇದೀಗ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಾಯಗೊಂಡವರು ಶ್ಯಾಮ್ ಯಾದವ್ ಹಾಗೂ ನರ್ಮದಾ ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ನರ್ಮದಾಪುರಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಸಲುವಾಗಿ ಸ್ಥಳೀಯ ಅಧಿಕಾರಿಗಳು ಸ್ಥಳೀಯರಿಗೆ ಮನೆಯಿಂದ ಹೊರಗಡೆ ಹೋಗುವಾಗ ಬಹಳ ಜಾಗರೂಕವಾಗಿರಬೇಕು, ಒಂಟಿಯಾಗಿ ಹೊರ ಹೋಗುವುದನ್ನು ತಡೆಯಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
“ನಾವು ಹಳ್ಳಿಯ ಜನರಿಗೆ ಮನೆಯಿಂದ ಹೊರಹೋಗುವ ಸಂದರ್ಭ ಬಂದಾಗ ಗುಂಪುಗಳಾಗಿ ತೆರಳುವಂತೆ ತಿಳಿಸಿದ್ದೇವೆ. ಜೊತೆಗೆ ಈ ಘಟನೆಯ ಕುರಿತು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈಗಾಗಲೆ ರೇಂಜರ್ ಹರೀಶ್ ಮಹೇಶ್ವರಿ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರವನ್ನು ವಿತರಿಸಿದ್ದಾರೆ” ಎಂದು ಗ್ರಾಮ ಪಂಚಾಯತಿ ಸಹಾಯಕ ಕಾರ್ಯದರ್ಶಿ ರಾಮಕೃಷ್ಣ ಉಯ್ಕೆ ತಿಳಿಸಿದ್ದಾರೆ.
उत्तर प्रदेश में भेड़िया तो MP में सियार का आतंक…
– CCTV में कैद हुआ हमले का वीडियो.
– अब तक 6 लोगों को किया जख्मी.
– घटना एमपी के सीहोर जिले की.#UttarPradesh #MadhyaPradesh #Sehore #Attack #Nedricknews pic.twitter.com/uexJT8ErAE— Nedrick News (@nedricknews) September 10, 2024
ಇತ್ತೀಚೆಗೆ ನಡೆದ ನರಿಗಳ ದಾಳಿಯಿಂದಾಗಿ ಭಯಭೀತರಾದಂತಹ ಸ್ಥಳೀಯರು ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಕೋಲುಗಳನ್ನು ಜೊತೆಗೆ ತೆಗೆದುಕೊಂಡು ಹೋಗಲು ಪ್ರಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.
ಹಳ್ಳಿಯ ಸುತ್ತಲೂ ಅರಣ್ಯ ಸುತ್ತುವರೆದುದರಿಂದ ನರಿಗಳು ಪೊದೆಗಳ ಒಳಗೆ ಅಡಗಿರುವ ಸಾಧ್ಯತೆ ಇದ್ದು, ಅವು ಮರಳಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸೋಮವಾರದಂದೇ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸಲ್ಕಂಪುರ ನಲ್ಲಿ ಐದು ಜನರ ಮೇಲೆ ನರಿಯು ದಾಳಿ ನಡೆಸಿದ್ದು, ಇಬ್ಬರಿಗೆ ಗಾಯಗಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.