ತನ್ನ ಫ್ಲಾಟ್‌ನಲ್ಲೇ ಭೋಪಾಲ್ ಮಾಡೆಲ್ ಲವರ್ ಕೈಯಲ್ಲಿ ಒತ್ತೆಸೆರೆ
Team Udayavani, Jul 13, 2018, 4:23 PM IST
ಭೋಪಾಲ್ : ತಾನು ಪ್ರೇಮಿಸಿ ಮದುವೆಯಾಗ ಬಯಸಿರುವ ಮಾಡೆಲ್ ಒಬ್ಟಾಕೆಯನ್ನು ವ್ಯಕ್ತಿಯೋರ್ವ ಇಲ್ಲಿನ ಆಕೆಯ ಫ್ಲಾಟ್‌ನಲ್ಲಿ ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದಾನೆ; ಆಕೆಯ ವಿಮೋಚನೆ ಕಾರ್ಯಾಚರಣೆಗಾಗಿ ಬಂದಿರುವ ಪೊಲೀಸ್ ಅಧಿಕಾರಿಗಳಲ್ಲಿ ಆತ ಸ್ಟಾಂಪ್ ಪೇಪರ್ ಮತ್ತು ಮೊಬೈಲ್ ಚಾರ್ಜರ್ ಕೇಳಿದ್ದಾನೆ.
ಮಾಡೆಲ್ ಒತ್ತೆಸೆರೆಯಾಗಿರುವ ಆಕೆಯ ಫ್ಲಾಟಿನ ಒಂದು ಕೋಣೆಯಲ್ಲಿ ಆಕೆಯ ತಂದೆ-ತಾಯಿ ಕೂಡ ಇದ್ದು ಅವರ ಕೋಣೆಯನ್ನು ಆರೋಪಿ ರೋಹಿತ್ ಲಾಕ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
“ನಾನು ಆಕೆಯನ್ನು ಪ್ರೀತಿಸುತ್ತೇನೆ. ಆಕೆಯೂ ನನ್ನನ್ನು ಪ್ರೀತಿಸುತ್ತಿರುವುದಾಗಿ ನನ್ನಲ್ಲಿ ಒಪ್ಪಿಕೊಳ್ಳಬೇಕಿದೆ. ಅಲ್ಲಿಯ ವರೆಗೆ ನಾನು ಆಕೆಯನ್ನು ಬಿಡುವುದಿಲ್ಲ’ ಎಂದು ರೋಹಿತ್ ಪೊಲೀಸರಲ್ಲಿ ಹೇಳಿದ್ದಾನೆ. ಆತನ ಒತ್ತೆಸೆರೆಯಲ್ಲಿರುವ ರೂಪದರ್ಶಿಯನ್ನು ಸುರಕ್ಷಿತವಾಗಿ ಹೊರತರುವ ಪೊಲೀಸರ ಪ್ರಯತ್ನ ಈಗಲೂ ಸಾಗಿದೆ.
ಮೂಲಗಳ ಪ್ರಕಾರ ರೂಪದರ್ಶಿಯು ಎರಡು ತಿಂಗಳ ಹಿಂದಷ್ಟೇ ಮುಂಬಯಿಯಿಂದ ಭೋಪಾಲಕ್ಕೆ ಬಂದಿದ್ದಳು. ಮುಂಬಯಿಯಲ್ಲಿ ಆಕೆಗೆ ಪರಿಚಿತನಾಗಿದ್ದ ರೋಹಿತ್ ಆಕೆಗೆ ಪದೇ ಪದೇ ಫೋನ್ ಮಾಡಿ ಕಿರುಕುಳ ಕೊಡುತ್ತಿದ್ದ; ಆತನ ಕರೆಗಳಿಗೆ ಆಕೆಯ ಉತ್ತರಿಸುವುದನ್ನೇ ನಿಲ್ಲಿಸಿದ್ದಳು; ಆದರೆ ಮೊನ್ನೆ ಸೋಮವಾರ ರೋಹಿತ್ ಭೋಪಾಲಕ್ಕೆ ಬಂದು ಆಕೆಯ ಫ್ಲ್ಯಾಟ್ ಪ್ರವೇಶಿಸಿ ಒಳಗಿನಿಂದ ಲಾಕ್ ಮಾಡಿದ್ದ.
ಮಹಿಳೆ ತನ್ನನ್ನು ಪ್ರೀತಿಸುವುದಾಗಿ ಒಪ್ಪಿಕೊಳ್ಳದಿದ್ದರೆ ತಾನು ಆಕೆಯನ್ನು ಮತ್ತು ಆಕೆಯ ಮನೆಯವರನ್ನು ಕೊಲ್ಲುವುದಾಗಿ ರೋಹಿತ್ ಬೆದರಿಕೆ ಹಾಕಿದ್ದಾನೆ.
ರೋಹಿತ್ ಹೇಳಿರುವ ಪ್ರಕಾರ ಪೊಲೀಸರು ಆತನನಿಗೆ ಹಿಂಸೆ, ಕಿರುಕುಳ ಕೊಟ್ಟಿದ್ದಾರೆ. “ನಾನು ಭೋಪಾಲ ತಲುಪಿದಾಗ ನನ್ನ ವಿರುದ್ಧ ಪೊಲೀಸ್ ಕಂಪ್ಲೇಂಟ್ ದಾಖಲಾಯಿತು. ಪೊಲೀಸರು ನನಗೆ ಹಿಂಸೆ, ಕಿರುಕುಳ ಕೊಟ್ಟರು; ಆದುದರಿಂದಲೇ ನಾನು ಒತ್ತೆಸೆರೆ ಕ್ರಮಕ್ಕೆ ಮುಂದಾದೆ. ಇಲ್ಲಿ ಫ್ಲಾಟ್ ಎದುರುಗಡೆ ಜನ ಜಮಾಯಿಸದಿರುತ್ತಿದ್ದಲ್ಲಿ ನಾನು ಎಂದೋ ಹೊರಗೆ ಬರುತ್ತಿದ್ದೆ’ ಎಂದು ರೋಹಿತ್ ಹೇಳಿದ್ದಾನೆ.
ರೋಹಿತ್ ಈಗಾಗಲೇ ತನ್ನ ದೇಹಕ್ಕೆ ಅನೇಕ ಕಡೆಗಳಲ್ಲಿ ಗಾಯಮಾಡಿಕೊಂಡಿದ್ದಾನೆ. ಹಾಗೆಯೇ ಆತ ಪ್ರೀತಿಸುವ ಮಹಿಳೆಗೂ ಗಾಯಮಾಡಿದ್ದಾನೆ. ಆಕೆ ದೇಹದಲ್ಲಿ ರಕ್ತ ಒಸರುವುದನ್ನು ನಾವು ಕಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಒತ್ತೆಸೆರೆ ಪ್ರಹಸನ ಈಗಲೂ ಮುಂದುವರಿದಿದ್ದು ಪೊಲೀಸರು ರೋಹಿತ್‌ನಿಂದ ಮಹಿಳೆಗೆ ಇರುವ ಜೀವ ಬೆದರಿಕೆಯ ಕಾರಣ ಎಚ್ಚರಿಕೆಯಿಂದ ಪ್ರಕರಣ ನಿಭಾಯಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.