ಬೈಕ್ ರಾಲಿ: ಹೆಲ್ಮೆಟ್ ಧರಿಸದ ಭೋಪಾಲ್ ಸಂಸದನಿಗೆ ದಂಡ
Team Udayavani, Jan 18, 2018, 4:51 PM IST
ಭೋಪಾಲ್: ಭೋಪಾಲ್ ಸಂಸತ್ ಸದಸ್ಯ ಆಲೋಕ್ ಸಂಜಾರ್ ಅವರು ರಾಲಿಯೊಂದರಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸದ ಕಾರಣಕ್ಕೆ ಅವರಿಗೆ 250 ರೂ. ದಂಡ ಹೇರಲಾಗಿದೆ. ದಂಡ ಪಾವತಿಸಿದ ಅವರು ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
ಕಳೆದ ವಾರ ರಾಜ್ಯಾದ್ಯಂತ ಏಕಾತ್ಮ ಯಾತ್ರೆ ನಡೆದಿತ್ತು. ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗಾಗಿ ಲೋಹ ಸಂಗ್ರಹಣೆಯ ಅಭಿಯಾನ ಅದಾಗಿತ್ತು. ಈ ಸಂಬಂಧ ನಡೆದ ರಾಲಿಯಲ್ಲಿ ಆಲೋಕ್ ಸಂಜಾರ್ ಅವರು ಮಧ್ಯ ಭೋಪಾಲ್ ಶಾಸಕ ಸುರೇಂದ್ರ ನಾಥ್ ಸಿಂಗ್ ಅವರೊಂದಿಗೆ ಭಾಗವಹಿಸಿದ್ದರು.
ಬೈಕ್ ರಾಲಿಯಲ್ಲಿ ಸಂಸದ ಆಲೋಕ್ ಸಂಜಾರ್ ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಕಾರಣಕ್ಕೆ ದಂಡನೆಗೆ ಗುರಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.