![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jan 29, 2021, 1:52 PM IST
ನವ ದೆಹಲಿ : ಕೋವಿಡ್ ನ ಕಾರಣದಿಂದಾಗಿ ಸ್ತಬ್ಧವಾಗಿದ್ದ ಲಕ್ನೋ-ನವದೆಹಲಿ ಮಾರ್ಗದ ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್‌ಪ್ರೆಸ್ ಮತ್ತೆ ಇದೇ ಮೊದಲ ಬಾರಿಗೆ ಹಳಿಗಿಳಿಯಲು ಸಜ್ಜಾಗಿದೆ.
ಹೌದು, ಫೆಬ್ರವರಿ 14 ರಿಂದ ತೇಜಸ್ ಎಕ್ಸ್‌ಪ್ರೆಸ್ ವಾರದಲ್ಲಿ 4 ದಿನಗಳು ಕಾರ್ಯನಿರ್ವಹಿಸಲಿದೆ. ತೇಜಸ್ ಎಕ್ಸ್ ಪ್ರೆಸ್ ನ ಪ್ರಯಾಣಿಕರು ಶತಾಬ್ಡಿ ಎಕ್ಸ್‌ಪ್ರೆಸ್ ನಲ್ಲಿಯೂ ಶುಲ್ಕ ಪಾವತಿಸುವುದರ ಮೂಲಕ ಪ್ರಯಾಣಿಸಬಹುದಾಗಿದೆ. 40 ರಷ್ಟು ಸೀಟುಗಳು ಮುಂಗಡ ಮೀಸಲಾತಿಗಾಗಿ ಇರಲಿವೆ ಎಂದು ವರದಿಯಾಗಿದೆ.
ಓದಿ : ಕರ್ನಾಟಕ ಬಸ್ ಮೇಲೆ ‘ಸಂಯುಕ್ತ ಮಹಾರಾಷ್ಟ್ರ’ ಮರಾಠಿ ಪೋಸ್ಟರ್: ಎನ್ ಸಿಪಿ ಪುಂಡಾಟಿಕೆ
ಅದಾಗ್ಯೂ, ರೈಲ್ವೆ ಪ್ರಯಾಣಿಕರಿಗೆ ಹೆಚ್ಚು ಆಸಕ್ತಿದಾಯಕವಾದ ಸಂಗತಿಯೆಂದರೆ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೋರೇಷನ್ ಲಿಮಿಟೆಡ್ (ಐ ಆರ್ ಸಿ ಟಿ ಸಿ), ಪ್ರಯಾಣದ ವೇಳೆ ಪ್ರಯಾಣಿಕರ ಮನೆಯಲ್ಲಿ ಕಳ್ಳತನ ಅಥವಾ ದರೋಡೆ ಸಂಭವಿಸಿದ್ದಲ್ಲಿ ಪರಿಹಾರವನ್ನು ನೀಡಲು ಮುಂದಾಗಿದೆ. ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಮನೆಯಲ್ಲಿ ಕಳ್ಳತನ ಅಥವಾ ದರೋಡೆ ನಡೆದರೇ ಒಂದು ಲಕ್ಷ ವಿಮೆ ನೀಡಲಾಗುವುದು. ಇದಲ್ಲದೆ, ರೈಲಿನಲ್ಲಿ ಪ್ರಯಾಣಿಸುವಾಗ ಕಳ್ಳತನ ನಡೆದರೆ ಒಂದು ಲಕ್ಷ ವಿಮೆ ನೀಡಲಾಗುವುದು ಎಂದು ಹೇಳಿದೆ.
ಇನ್ನು,ತೆಜಸ್ ಎಕ್ಸ್ ಪ್ರೆಸ್ ಫೆಬ್ರವರಿ 14 ರಿಂದ, ವಾರದ ನಾಲ್ಕು ದಿನಗಳಾದ ಶುಕ್ರವಾರ, ಶನಿವಾರ, ಆದಿತ್ಯವಾರ ಹಾಗೂ ಸೋಮವಾರ ಸಂಚರಿಸಲಿದೆ.
ದೇಶದಲ್ಲಿ ಕೋವಿಡ್ ಸಮಸ್ಯೆಯ ಕಾರಣದಿಂದಾಗಿ 2020ರ ಮಾರ್ಚ್ 19 ರಂದೇ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅದಾಗ್ಯೂ, ತೇಜಸ್ ಎಕ್ಸ್ ಪ್ರೆಸ್ ನ ಸಂಚಾರವನ್ನು ಅಕ್ಟೋಬರ್ ನಲ್ಲಿ ಐ ಆರ್ ಸಿ ಟಿ ಸಿ ಪ್ರಾರಂಭಿಸಿತ್ತು. ಪ್ರಯಾಣಿಕರ ಕೊರತೆಯಿಂದಾಗಿ ಲಕ್ನೋ ಟು ದೆಹಲಿ ಹಾಗೂ ಮುಂಬೈ ಟು ಅಹಮದಬಾದ್ ಮಾರ್ಗಗಳ ಸಂಚಾರವನ್ನು ಐ ಆರ್ ಸಿ ಟಿ ಸಿ ಮತ್ತೆ ಕಳೆದ ನವೆಂಬರ್ ನಲ್ಲಿ ರದ್ದುಗೊಳಿಸಿತ್ತು.
ಓದಿ : ಗಾಜ್ಹಿಪುರ ಗಡಿಯಲ್ಲಿ ರೈತರಿಗೆ ಒದಗಿಸಿದ ಸೌಲಭ್ಯಗಳನ್ನು ಪರಿಶೀಲಿಸಿದ ಸಿಸೋಡಿಯಾ
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.