![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 8, 2023, 12:48 AM IST
ಪಟ್ನಾ: ಬಿಹಾರದಲ್ಲಿ ಇರುವ ಒಟ್ಟು ಜನಸಂಖ್ಯೆಯ ಪೈಕಿ ಶೇ.34 ಮಂದಿ ಪ್ರತೀ ತಿಂಗಳು 6 ಸಾವಿರ ರೂ.ಗಳಿಗಿಂತ ಕಡಿಮೆ ಸಂಪಾದನೆ ಮಾಡುತ್ತಿದ್ದಾರೆ. ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದ ಶೇ.42ರಷ್ಟು ಕುಟುಂಬಗಳು ಬಡತನದಲ್ಲೇ ದಿನದೂಡುತ್ತಿವೆ.
ಬಿಹಾರದ ಜಾತಿ ಗಣತಿಯ ವರದಿಯ ಎರಡನೇ ಆವೃತ್ತಿಯಲ್ಲಿ ಈ ಅಂಶಗಳು ಉಲ್ಲೇಖಗೊಂಡಿವೆ. ಎಸ್‌ಟಿ ವರ್ಗದ ಶೇ.5.76 ಮಂದಿ ಮಾತ್ರ 11 ಅಥವಾ 12ನೇ ತರಗತಿಯ ವಿದ್ಯಾಭ್ಯಾಸ ಮಾಡಿದ್ದಾರೆ ಎಂದು ಅದರಲ್ಲಿ ಪ್ರಸ್ತಾವಿಸಲಾಗಿದೆ.
2025ರ ಅಕ್ಟೋಬರ್- ನವೆಂಬರ್ ವೇಳೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಬಿಡುಗಡೆಯಾಗಿರುವ ಅಂಶಗಳು ಅಲ್ಲಿನ ಸಾಮಾ ನ್ಯರು ಹೊಂದಿರುವ ಜೀವನ ಸ್ಥಿತಿಯನ್ನು ಬೆಟ್ಟು ಮಾಡಿ ತೋರಿಸಿವೆ. ಶೇ.34.13 ಕುಟುಂಬಗಳು ಪ್ರತೀ ತಿಂಗಳು 6 ಸಾವಿರ ರೂ.ಗಳಿಗಿಂತ ಕಡಿಮೆ ಸಂಪಾದನೆ ಮಾಡುತ್ತಿವೆ. ಶೇ.29.61 ಕುಟುಂಬಗಳು 10 ಸಾವಿರ ರೂ.ಗಳಿಗಿಂತ ಕಡಿಮೆ ಸಂಪಾದನೆ ಮಾಡುತ್ತಿದೆ. ಶೇ.28 ಕುಟುಂಬಗಳು ಮತ್ತು ವ್ಯಕ್ತಿಗಳು ಪ್ರತೀ ತಿಂಗಳು 10 ಸಾವಿರ ರೂ.ಗಳಿಂದ 50 ಸಾವಿರ ರೂ. ಒಳಗೆ ಸಂಪಾದನೆ ಮಾಡುತ್ತಿದೆ. ಶೇ.1ಕ್ಕಿಂತ ಕಡಿಮೆ 50 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿವೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.