Bihar; ಮೀಸಲು ಪ್ರಮಾಣ ಶೇ. 65?: ಸಿಎಂ ನಿತೀಶ್ ಕುಮಾರ್ ಸುಳಿವು
ಹಾಲಿ ಅಧಿವೇಶನದಲ್ಲೇ ಮಸೂದೆ
Team Udayavani, Nov 8, 2023, 12:52 AM IST
ಪಟ್ನಾ: ಬಿಹಾರದಲ್ಲಿ ಬಿಡುಗಡೆ ಆಗಿರುವ ಜಾತಿಗಣತಿಯ ವರದಿ ಬಗ್ಗೆ ಪರ-ವಿರೋಧದ ಚರ್ಚೆಗಳು ಮುಂದುವರಿದಿರುವಂತೆಯೇ ಸಿಎಂ ನಿತೀಶ್ ಕುಮಾರ್ ಮೀಸಲು ಪ್ರಮಾಣ ಹೆಚ್ಚಿಸುವ ಘೋಷಣೆ ಮಾಡಿದ್ದಾರೆ.
ಬಿಹಾರ ಜಾತಿ ಗಣತಿಯ ಎರಡನೇ ಆವೃತ್ತಿ ಬಿಡುಗಡೆ ಮಾಡಿದ ಬಳಿಕ ಅವರು ಮಂಗಳವಾರ ವಿಧಾನ ಸಭೆಯಲ್ಲಿ ಮಾತನಾಡಿದರು. ಹಾಲಿ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಿ, ಅಂಗೀಕರಿಸಿಕೊಳ್ಳುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.
ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ಸದ್ಯ ಶೇ. 17 ಮೀಸಲು ಇದೆ. ಇದನ್ನು ಶೇ. 22ಕ್ಕೆ ಹೆಚ್ಚಿಸಲಾಗುತ್ತದೆ. ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಇರುವ ಮೀಸಲಾತಿಯನ್ನು ಶೇ. 50ರಿಂದ ಶೇ. 65ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಇದಲ್ಲದೆ ಎಸ್‌ಟಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ. 2 ಮೀಸಲು, ಅತ್ಯಂತ ಹಿಂದುಳಿದ ವರ್ಗಕ್ಕೆ (ಇಸಿಬಿ) ಶೇ. 43 ನೀಡುವ ಪ್ರಸ್ತಾವವೂ ನಿತೀಶ್ ಸರಕಾರದ ಮುಂದಿದೆ.
ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ವರ್ಗ (EWS)ಕ್ಕೆ ನೀಡುತ್ತಿರುವ ಮೀಸಲು ಪ್ರಮಾಣ ಶೇ. 10 ಇದೆ. ಅದನ್ನೂ ಸೇರ್ಪಡೆ ಮಾಡಿದರೆ ಬಿಹಾರದಲ್ಲಿ ಮೀಸಲು ಪ್ರಮಾಣ ಶೇ. 75ಕ್ಕೆ ಏರಿಕೆಯಾದಂತೆ ಆಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಯಾವುದೇ ರೀತಿಯಲ್ಲಾದರೂ ಮೀಸಲಾತಿ ಶೇ. 50 ಮೀರುವಂತೆ ಇಲ್ಲ.
ಶೇ. 43- ಅತ್ಯಂತ ಹಿಂದುಳಿದ ವರ್ಗ (ಉದ್ದೇಶಿತ)
ಶೇ. 10- ಆರ್ಥಿಕವಾಗಿ ಹಿಂದುಳಿದ ವರ್ಗ – ಈಗ ಇರುವ ವ್ಯವಸ್ಥೆ
ಅತ್ಯಂತ ಹಿಂದುಳಿದ ವರ್ಗದವರ ಹಿತಾಸಕ್ತಿ ಕಾಪಾಡುವ ಬಗ್ಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳದಿದ್ದರೆ ಉದ್ದೇಶಿತ ನಿರ್ಧಾರದಿಂದ ಪ್ರಯೋಜನ ಆಗಲಾರದು.
– ಸುಶೀಲ್ ಕುಮಾರ್ ಮೋದಿ,ಬಿಜೆಪಿ ರಾಜ್ಯಸಭಾ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.