ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡು ಬಾಲಕನ ಕೊಲೆ!
Team Udayavani, Oct 21, 2022, 6:50 AM IST
ಪಾಟ್ನಾ: ಪರೀಕ್ಷೆಯ ಕಾಪಿ ಚೀಟಿಯನ್ನು ಬಾಲಕಿ ಪ್ರೇಮ ಪತ್ರ ಎಂದು ತಪ್ಪಾಗಿ ತಿಳಿದ ಹಿನ್ನೆಲೆ ಬಾಲಕನೊಬ್ಬನ ಕೊಲೆಯಾದಂತಹ ಘಟನೆ ಬಿಹಾರದಲ್ಲಿ ನಡೆದಿದೆ.
ಬೋಜ್ಪುರ ನಗರದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 12 ವರ್ಷದ ಬಾಲಕ ಇತ್ತೀಚೆಗೆ ತನ್ನ 6ನೇ ತರಗತಿ ಮಧ್ಯ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ಅಕ್ಕನಿಗೆ ಸಹಾಯ ಮಾಡಲೆಂದು ಆಕೆಯಿದ್ದ ಪರೀಕ್ಷಾ ಕೇಂದ್ರದೊಳಗೆ ಕಾಪಿ ಚೀಟಿ ಎಸೆದಿದ್ದಾನೆ. ಅದು ತಪ್ಪಿ ಇನ್ನೋರ್ವ ವಿದ್ಯಾರ್ಥಿನಿಯ ಬಳಿ ಬಿದ್ದಿದೆ. ಅದನ್ನು ಆಕೆ ಪ್ರೇಮ ಪತ್ರ ಎಂದು ತಪ್ಪಾಗಿ ತಿಳಿದಿದ್ದು, ತನ್ನ ಅಣ್ಣನಿಗೆ ವಿಚಾರ ಮುಟ್ಟಿಸಿದ್ದಾಳೆ. ಸಿಟ್ಟಿಗೆದ್ದ ಅಣ್ಣ ಸ್ನೇಹಿತರೊಡಗೂಡಿ, ಬಾಲಕನ ಕೊಲೆ ಮಾಡಿದ್ದಾನೆ. ಆತನ ಕೈ, ಕಾಲನ್ನೆಲ್ಲ ಕತ್ತರಿಸಿ, ರೈಲ್ವೆ ಹಳಿ ಬಳಿ ಎಸೆದಿದ್ದಾರೆ. ಬಾಲಕನ ಕೈ ಊರಿನ ದೇವಸ್ಥಾನದ ಬಳಿ ಸಿಕ್ಕಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ತಿಳಿದುಬಂದಿದೆ. ಆರೋಪಿಗಳೆಲ್ಲರೂ ಅಪ್ರಾಪ್ತ ವಯಸ್ಸಿನವರೇ ಆಗಿದ್ದು, ಅವರನ್ನು ಬಾಲಾಪರಾಧಿ ಕೇಂದ್ರದಲ್ಲಿ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.