Bihar DCM ಶಪಥ ಪೂರ್ಣ; ಅಯೋಧ್ಯೆ ರಾಮನಿಗೆ ಪೇಟ ಅರ್ಪಣೆ
ಆಗ ನಿತೀಶ್ ಕುಮಾರ್ ವಿರುದ್ಧವೇ ಶಪಥ ... ಈಗ ಒಂದೇ ಸರಕಾರದಲ್ಲಿ ಸಿಎಂ, ಡಿಸಿಎಂ!!
Team Udayavani, Jul 3, 2024, 3:27 PM IST
ಅಯೋಧ್ಯೆ: ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ 22 ತಿಂಗಳ ನಂತರ ಅಯೋಧ್ಯೆಯಲ್ಲಿ ಅಂತಿಮವಾಗಿ ತಮ್ಮ ಪೇಟವನ್ನು ತೆಗೆದು ರಾಮನಿಗೆ ಸಮರ್ಪಿಸುವ ಮೂಲಕ ಶಪಥ ಪೂರ್ಣಗೊಳಿಸಿದ್ದಾರೆ.
ಬುಧವಾರ ಬೆಳಗ್ಗೆ ಸರಯು ನದಿಯಲ್ಲಿ ಸ್ನಾನ ಮಾಡಿ,ಕೇಶಮುಂಡನ ಮಾಡಿಸಿ ಸಾಂಕೇತಿಕವಾಗಿ ಶ್ರೀರಾಮನಿಗೆ ಕಳೆದ 22 ತಿಂಗಳಿಂದ ಧರಿಸಿದ್ದ ಪೇಟವನ್ನು ಅರ್ಪಿಸಿದರು. ಚೌಧರಿ ಅವರ ಬೆಂಬಲಿಗರು ಉತ್ಸಾಹದಿಂದ “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಮೊಳಗಿಸಿದರು. ನನ್ನ ಪೇಟವನ್ನು ಭಗವಾನ್ ಶ್ರೀರಾಮನಿಗೆ ಭಕ್ತಿಪೂರ್ವಕವಾಗಿ ಅರ್ಪಿಸಿದ್ದೇನೆ ಎಂದು ಚೌಧರಿ ಹೇಳಿದರು.
ಸಾಮ್ರಾಟ್ ಚೌಧರಿ ಶಪಥವೇನಾಗಿತ್ತು?
“ಅಂದು ನಾನು ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ವಾಗ್ದಾನ ಮಾಡಿದ್ದೆ ನಿಜ. ಆದರೆ ಅವರು ಇಂಡಿಯಾ ಮೈತ್ರಿಕೂಟವನ್ನು ತೊರೆದು ನಮ್ಮ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದಾರೆ, ನಾನು ಪೇಟ ಅರ್ಪಿಸುವ ಸಮಯ ಬಂದಿದೆ. ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಡಿಎಗೆ ಮರಳಿದ ದಿನವೇ ನಾನು ಭಗವಾನ್ ರಾಮನಿಗೆ ಈ ಪೇಟವನ್ನು ಸಮರ್ಪಿಸುವುದಾಗಿ ಘೋಷಿಸಿದ್ದೇನೆ ಎಂದು ಚೌಧರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಮಹಾಘಟಬಂಧನ್ ಮೈತ್ರಿಯೊಂದಿಗೆ ಭಿನ್ನಾಭಿಪ್ರಾಯದ ನಂತರ ನಿತೀಶ್ ಕುಮಾರ್ ಈ ವರ್ಷದ ಜನವರಿಯಲ್ಲಿ ಎನ್‌ಡಿಎ ಬಣವನ್ನು ಮರಳಿ ಸೇರಿಕೊಂಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಇದು ಐದನೇ ಬಾರಿ ಅವರ ಬಣ ಬದಲಾವಣೆಯಾಗಿತ್ತು.
ಬಿಜೆಪಿಯೊಂದಿಗೆ ಕೈಜೋಡಿಸಿ ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಬದಲಾದ ಸನ್ನಿವೇಶದಲ್ಲಿ ರಾಜಕೀಯ ವೈಮನಸ್ಸು ಮರೆತು ನೂತನ ಸರಕಾರ ರಚನೆಯಾಗಿ ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
#WATCH | Uttar Pradesh | Bihar deputy CM & BJP state president Samrat Choudhary offers prayers at Hanuman Garhi temple, in Ayodhya.
The Bihar deputy CM to devote his turban to lord Ram. pic.twitter.com/wLoFZQJ2KD
— ANI (@ANI) July 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.