ಕಣ್ಣೆದುರೇ ನೀರುಪಾಲಾದ ಅಮ್ಮ-ಮಗಳು
Team Udayavani, Aug 19, 2017, 10:40 AM IST
ಪಟ್ನಾ/ಗುವಾಹಟಿ: ಅಸ್ಸಾಂ, ಬಿಹಾರ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ತೀವ್ರಗೊಂಡಿದೆ. ಬಿಹಾರದಲ್ಲಿ ಮೃತರ ಸಂಖ್ಯೆ 119ಕ್ಕೇರಿದೆ. ಇಲ್ಲಿನ ಅರಾರಿಯಾ ಜಿಲ್ಲೆಯಲ್ಲಿ ಕುಟುಂಬವೊಂದು ನಡೆದು ಬರುತ್ತಿದ್ದಂತೆಯೇ ಸೇತುವೆ ಕುಸಿದು ಬಿದ್ದು, ತಾಯಿ-ಮಗಳು ನೀರುಪಾಲಾಗುವ ವಿಡಿಯೋವೊಂದು ಶುಕ್ರವಾರ ವೈರಲ್ ಆಗಿದೆ.
ಇನ್ನೇನು ಕ್ಷಣಮಾತ್ರದಲ್ಲಿ ಸೇತುವೆಯನ್ನು ದಾಟಿ ಬಿಡುತ್ತಾರೆ ಎನ್ನುವಷ್ಟರಲ್ಲಿ ಸೇತುವೆಯು ಕುಸಿದು ಬಿದ್ದಿದೆ. ಪರಿಣಾಮ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಇಬ್ಬರೂ ಕೊಚ್ಚಿಹೋಗಿದ್ದು, ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಇನ್ನೊಂದೆಡೆ, ಗೋಪಾಲ್‌ಗಂಜ್‌ನಲ್ಲಿ ರಕ್ಷಣಾ ಕಾರ್ಯಾಚರಣೆಯ ದೋಣಿಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆಯೂ ನಡೆದಿದೆ. ಇನ್ನು ಅಸ್ಸಾಂನ ಕಾಜಿರಂಗಾದಲ್ಲಿ ಪ್ರವಾಹದಿಂದಾಗಿ ಸುಮಾರು 140 ಪ್ರಾಣಿಗಳು ಮೃತಪಟ್ಟಿದ್ದು, 481 ಚ.ಕಿ.ಮೀ. ವ್ಯಾಪ್ತಿಯ ರಕ್ಷಿತಾರಣ್ಯದ ಪೈಕಿ ಶೇ.80ರಷ್ಟು ಜಲಾವೃತವಾಗಿವೆ.
ಏತನ್ಮಧ್ಯೆ, ದಕ್ಷಿಣ ಏಷ್ಯಾದಲ್ಲಿ ಗಂಭೀರವಾದ ಮಾನವೀಯ ಬಿಕ್ಕಟ್ಟು ಎದುರಾಗಿದ್ದು, ಭಾರತದಲ್ಲಿ ಭಾರೀ ಪ್ರವಾಹದಿಂದ 1.10 ಕೋಟಿ ಮಂದಿ ನಿರ್ವಸಿತರಾಗಿದ್ದಾರೆ ಎಂದು ರೆಡ್‌ಕ್ರಾಸ್ ವರದಿ ತಿಳಿಸಿದೆ.
ನೀವು ದುರ್ಬಲ ಹೃದಯದವರಾಗಿದ್ದರೆ ಈ ವಿಡಿಯೋ ವೀಕ್ಷಿಸಬೇಡಿ ..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.