ಫುಲ್ವಾರಿ ಷರೀಫ್ ಉಗ್ರ ಜಾಲ ಕೇಸ್: ಶಂಕಿತ ಉಗ್ರನಿಗೆ ಕತಾರ್‌ನಿಂದ ಕ್ರಿಪ್ಟೋ ಮೂಲಕ ಹಣ ಸಂದಾಯ
Team Udayavani, Jul 24, 2022, 6:48 PM IST
ಪಾಟ್ನಾ: ಬಿಹಾರದ ಫುಲ್ವಾರಿ ಷರೀಫ್ ಉಗ್ರ ಜಾಲ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳು ಕತಾರ್‌ನಿಂದ ಕ್ರಿಪ್ಟೋಕರೆನ್ಸಿ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಭಾರತ ವಿರೋಧಿ ನಿಲುವುಗಳನ್ನು ಪ್ರಚುರಪಡಿಸಲೆಂದು ಗಜ್ವಾ-ಎ-ಹಿಂದ್ ಮತ್ತು ಡೈರೆಕ್ಟ್ ಜಿಹಾದ್ ಎಂಬ ಎರಡು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಆಪರೇಟ್ ಮಾಡುತ್ತಿದ್ದ ಫುಲ್ವಾರಿ ಷರೀಫ್ ನಿವಾಸಿ ಮಾರ್ಗವ್ ಅಹ್ಮದ್ ಡ್ಯಾನಿಷ್(26)ನನ್ನು ಜು.15ರಂದು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಡ್ಯಾನಿಷ್ ಕತಾರ್ ಮೂಲದ ಸಂಘಟನೆ ಅಲ್ಫಾಹಿಯಿಂದ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಹಣ ಪಡೆಯುತ್ತಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜತೆಗೆ ಪಾಕ್ ಮೂಲದ ಮೂಲಭೂತವಾದಿ ಸಂಘಟನೆ ತೆಹ್ರೀಕ್-ಇ-ಲಬ್ಬೈಕ್ ಜೊತೆಗೆ ಡ್ಯಾನಿಶ್ ನಂಟು ಹೊಂದಿದ್ದು, ಪಾಕ್ ನಾಗರಿಕ ಫೈಜಾನ್ ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬುದೂ ತನಿಖೆ ವೇಳೆ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯೂ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.