![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jun 17, 2023, 4:20 PM IST
ಪಾಟ್ನಾ: ವರದಕ್ಷಿಣೆ ರೂಪದಲ್ಲಿ ಬುಲೆಟ್ ಬೈಕ್ ಕೊಡದಿದ್ದಕ್ಕೆ ಸೊಸೆಯನ್ನು ಹಾಕಿ ಕೊಂದಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಬಕ್ಸರ್ ಜಿಲ್ಲೆಯ ಪವರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಬುಲೆಟ್ ಬೈಕ್ ನೀಡುವ ಬೇಡಿಕೆಯನ್ನು ಗಂಡನ ಮನೆಯವರು ಇಟ್ಟಿದ್ದರು. ವರದಕ್ಷಿಣೆಯ ಸಲುವಾಗಿ ಬುಲೆಟ್ ನೀಡಬೇಕೆಂದು ಅತ್ತೆ ಸೇರಿದಂತೆ ಗಂಡನ ಮನೆಯವರು ಮಹಿಳೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಮೃತಳ ಸಹೋದರ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ: ಸಚಿವ ಮಹದೇವಪ್ಪ
ಮಹಿಳೆಯ ಅತ್ತೆ ಸೊಸೆಗೆ ವಿಷ ಹಾಕಿದ್ದು, ಅದೇ ದಿನ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯನ್ನು ತವರಿಗೆ ಕಳುಹಿಸಿದ್ದಾರೆ. ಆದರೆ ಸೊಸೆ ಅಲ್ಲಿ ಮೃತಪಟ್ಟಿದ್ದಾಳೆ ವರದಿ ತಿಳಿಸಿದೆ.
ಮೃತರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಅತ್ತೆ ಸೇರಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.