Wheelie: ವ್ಹೀಲಿಂಗ್ ಮಾಡುವಾಗ ಸ್ಕಿಡ್ ಆದ ಬೈಕ್… ತಮಿಳುನಾಡಿನ ಯೂಟ್ಯೂಬರ್ ಗೆ ಗಂಭೀರ ಗಾಯ
Team Udayavani, Sep 18, 2023, 11:00 AM IST
ತಮಿಳುನಾಡು: ತನ್ನ ಹೈ-ಸ್ಪೀಡ್ ಮೋಟಾರ್‌ಸೈಕಲ್ ರೈಡಿಂಗ್ ಹಾಗೂ ಸಾಹಸಗಳಿಗೆ ಹೆಸರುವಾಸಿಯಾಗಿರುವ ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್ ಟಿಟಿಎಫ್ ವಾಸನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಾಲುಶೆಟ್ಟಿ ಛತ್ರಂ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಅವರು ಬೈಕ್ ವ್ಹೀಲಿಂಗ್ ಮಾಡಲು ಯತ್ನಿಸಿ ಅಪಘಾತ ಸಂಭವಿಸಿದೆ.
ವಾಸನ್ ಅವರು ಪ್ರಖ್ಯಾತ ಯೂಟ್ಯೂಬರ್ ಆಗಿದ್ದು ಇವರಿಗೆ ಲಕ್ಷಾಂತರ ಮಂದಿ ಫ್ಯಾನ್ ಫಾಲೋವರ್ಸ್ ಗಳಿದ್ದಾರೆ, ಟ್ರಾವೆಲ್ ಬ್ಲಾಗ್ ನಿಂದಲೇ ಹೆಸರುವಾಸಿಯಾಗಿರುವ ಅವರು ಹೈ ಸ್ಪೀಡ್ ಬೈಕ್ ರೈಡಿಂಗ್ ಜೊತೆಗೆ ವ್ಹೀಲಿಂಗ್ ನಲ್ಲಿ ಹೆಸರುವಾಸಿಯಾಗಿದ್ದರು ಅದರಂತೆ ಭಾನುವಾರ ಚೆನ್ನೈ-ಬೆಂಗಳೂರು ಮಾರ್ಗದಲ್ಲಿ ಚಲಿಸುತ್ತಿದ್ದ ವೇಳೆ ವ್ಹೀಲಿಂಗ್ ಮಾಡಲು ಹೋದ ವೇಳೆ ಬೈಕ್ ನ ಮುಂಭಾಗ ಮೇಲಕ್ಕೆ ಎಬ್ಬಿಸಿದಾಗ ಹಿಂಬದಿಯ ಚಕ್ರ ಸ್ಕಿಡ್ ಆಗಿ ನಿಯಂತ್ರಣ ಕಳೆದುಕೊಂಡಿದೆ ಪರಿಣಾಮ ವೇಗವಾಗಿದ್ದ ಬೈಕ್ ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದು ಮೀಟರ್ ಗಳಷ್ಟು ದೂರ ಎಸೆಯಲ್ಪಟ್ಟಿದೆ.
ಕಾಂಚೀಪುರಂನ ಖಾಸಗಿ ಆಸ್ಪತ್ರೆಯಲ್ಲಿ ವಾಸನ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಅವರ ಕೈ ಮುರಿದಿದೆ. ಇದಲ್ಲದೇ ದೇಹದ ವಿವಿಧೆಡೆ ಗಾಯಗಳಾಗಿವೆ. ಅವರು ಅಪಘಾತಕ್ಕೀಡಾಗಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Yogi: ಯಮರಾಜ ನಿಮಗಾಗಿ ಕಾಯುತ್ತಿದ್ದಾನೆ: ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಯೋಗಿ ಎಚ್ಚರಿಕೆ
So many questions.. IN BOTH VIDEO #TTFVasan violated the traffic rules, which makes other guys to copy him. Why still no proper action taken against him. Dear youth don’t get influenced by this kind of stupid.
— A k (@JustMyTweetssss) September 18, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.