ಭಾರತಕ್ಕೆ ಆಗಮಿಸಿದ ಪಾಕ್ ವಿದೇಶಾಂಗ ಸಚಿವ ಬಿಲಾವಲ್
Team Udayavani, May 5, 2023, 7:05 AM IST
ಪಣಜಿ: ಗೋವಾದಲ್ಲಿ ನಡೆಯಲಿರುವ ಶಾಂಘಾಯ್ ಸಹಕಾರ ಸಂಘದ ಸಮಾವೇಶದಲ್ಲಿ (ಎಸ್ಸಿಒ) ಪಾಲ್ಕೊಳ್ಳಲು ಪಾಕಿಸ್ಥಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಗುರುವಾರ ಆಗಮಿಸಿದರು. ಬಹುಕಾಲದ ಅನಂತರ ಭಾರತಕ್ಕೆ ಆಗ ಮಿಸಿರುವ ಪ್ರಮುಖ ನಾಯಕ ಬಿಲಾವಲ್. ಗೋವಾಕ್ಕೆ ಬಂದಿಳಿದ ಬಳಿಕ ಸಲಾಮ್ ಫಮ್ ಗೋವಾ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಎಸ್ಸಿಒ ಪ್ರಧಾನ ಕಾರ್ಯದರ್ಶಿ ಝಾಂಗ್ ಮಿಂಗ್ ಜತೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿ ಸ್ಥಾನದ ಕುಮ್ಮಕ್ಕು ಇಲ್ಲಿ ಪ್ರಾಮುಖ್ಯ ಪಡೆದಿದೆ. ಅದನ್ನು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನೇರವಾಗಿ ಪ್ರಸ್ತಾವಿಸಿ ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದಾರೆ. ಹಾಗಾಗಿ ಬಿಲಾವಲ್-ಜೈಶಂಕರ್ ಮಾತುಕತೆ ನಡೆಯುವುದು ಕಷ್ಟವೆನಿಸಿದೆ. “ಪಾಕಿಸ್ಥಾನದಿಂದ ಇದುವರೆಗೂ ಯಾವುದೇ ಕೋರಿಕೆ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ನಡುವೆ ಇದುವರೆಗೂ ಯಾವುದೇ ದ್ವಿ ಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ’ ಎಂದು ಶಾಂಘಾಯ್ ಸಹಕಾರ ಸಮಾವೇಶದ ಮೂಲಗಳು ತಿಳಿಸಿವೆ.
ಭಾರತ ಆಗಮನಕ್ಕೂ ಮುನ್ನ ಟ್ವೀಟ್ ಮಾಡಿದ ಬಿಲಾವಲ್ ಭುಟ್ಟೊ, “ಈ ಸಮಾವೇ ಶದಲ್ಲಿ ಪಾಲ್ಗೊಳ್ಳುವ ನನ್ನ ನಿರ್ಧಾರವು ಶಾಂಘಾಯ್ ಸಹಕಾರ ಒಕ್ಕೂಟದ ಬಗ್ಗೆ ಪಾಕಿಸ್ಥಾನದ ಬದ್ಧತೆ ಯನ್ನು ತೋರಿಸುತ್ತದೆ’ ಎಂದು ಬರೆದು ಕೊಂಡಿದ್ದಾರೆ. ಆದರೆ ಅವರೂ ಜೈಶಂಕರ್ ಜತೆಗಿನ ಮಾತುಕತೆ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.