ಮದುವೆ ವಯೋಮಿತಿ ಹೆಚ್ಚಳ: ಶೇ. 95 ಜನರಿಂದ ಅಪಸ್ವರ
Team Udayavani, Apr 15, 2022, 8:10 AM IST
ಹೊಸದಿಲ್ಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಸರಕಾರದ ಪ್ರಸ್ತಾವನೆ ದೇಶದ ಜನತೆಗೆ ಇಷ್ಟವಾಗಿಲ್ಲ ಎನ್ನುವ ಮುನ್ಸೂಚನೆಯೊಂದು ಸಿಕ್ಕಿದೆ. ಈ ಪ್ರಸ್ತಾವನೆ ಬಗ್ಗೆ ಸಮಾಲೋಚನೆ ನಡೆಸುತ್ತಿರುವ ಸಮಿತಿಗೆ ಜನರಿಂದ ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಶೇ. 95 ಮಂದಿ ಪ್ರಸ್ತಾವನೆಯ ವಿರುದ್ಧವೇ ಇದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಹೊರಬಿದ್ದಿದೆ.
ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸರಕಾರವು ಕಳೆದ ಡಿಸೆಂಬರ್ನಲ್ಲೇ ಲೋಕಸಭೆಯಲ್ಲಿ ಕರಡು ಪ್ರಸ್ತಾ ವಿಸಿದೆ. ಆದರೆ ಈ ಬಗ್ಗೆ ವಿರೋಧವೂ ಇದ್ದ ಹಿನ್ನೆಲೆ ಸಮಾ ಲೋಚನೆ ನಡೆಸಲೆಂದು ಸಮಿತಿ ರಚಿ ಸಲಾಗಿತ್ತು. ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಅವರ ನೇತೃತ್ವದ ಸಮಿತಿಗೆ 96 ಸಾವಿರ ಇಮೇಲ್ಗಳು ಮದುವೆ ವಯಸ್ಸು ಏರಿಕೆ ಕುರಿತಾಗಿ ಬಂದಿವೆ. ಅದರಲ್ಲಿ 90 ಸಾವಿರ ಇ ಮೇಲ್ಗಳು ಅಂದರೆ ಶೇ. 95ರಷ್ಟು ಇ ಮೇಲ್ಗಳಲ್ಲಿ ಮದುವೆ ವಯಸ್ಸು ಏರಿಕೆ ಬಗ್ಗೆ ವಿರೋಧವಿದೆ ಎಂದು ಪಿಟಿಐ ವರದಿ ಮಾಡಿದೆ. ಆ ಹಿನ್ನೆಲೆ ಸರಕಾರವು ಈ ಪ್ರಸ್ತಾವವನ್ನು ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಮಿತಿಯು, ಈ ವಿಚಾರವಾಗಿ ಸರಕಾರಕ್ಕೆ ಮದುವೆ ವಯಸ್ಸು ಏರಿಸಲು ಮನವಿ ಮಾಡಿದ್ದ ಜಯಾ ಜೈಟ್ಲಿ ನೇತೃತ್ವದ ಟಾಸ್ಕ್ ಫೋರ್ಸ್ನೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.