![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 14, 2022, 9:16 AM IST
ಮುಂಬೈ: ಶೇರು ಮಾರುಕಟ್ಟೆಯ ಅತೀ ದೊಡ್ಡ ಹೆಸರು, ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಭಾನುವಾರ ಬೆಳಿಗ್ಗೆ ನಿಧನರಾದರು.
62 ವರ್ಷ ವಯಸ್ಸಿನ ರಾಕೇಶ್ ಜುಂಜುನ್‌ವಾಲಾ ಅವರನ್ನು ಬೆಳಗ್ಗೆ 6.45ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಯಿತು ಎಂದು ಮೂಲಗಳು ತಿಳಿಸಿವೆ.
1960ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ ರಾಕೇಶ್ ಜುಂಜುನ್‌ವಾಲಾ, 1985ರಲ್ಲಿ ಶೇರು ಮಾರುಕಟ್ಟೆಗೆ ಕಾಲಿಟ್ಟರು. 5000 ರೂ ನಿಂದ ವಹಿವಾಟು ಆರಂಭಿಸಿದ್ದ ರಾಕೇಶ್ 11 ಸಾವಿರ ಕೋಟಿ ರೂ. ವಹಿವಾಟು ನಡೆಸುವಷ್ಟು ಬೆಳೆದಿದ್ದರು.
ಸಕ್ರಿಯ ಹೂಡಿಕೆದಾರರಾಗಿರುವ ಜುಂಜುನ್‌ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ನ ಅಧ್ಯಕ್ಷರಾಗಿದ್ದಾರೆ. ಲಿಮಿಟೆಡ್ ಮತ್ತು ಪ್ರೈಮ್ ಫೋಕಸ್ ಲಿಮಿಟೆಡ್, ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಬಿಲ್ಕೇರ್ ಲಿಮಿಟೆಡ್, ಪ್ರಜ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರೊವೊಗ್ ಇಂಡಿಯಾ ಲಿಮಿಟೆಡ್, ಕಾನ್ಕಾರ್ಡ್ ಬಯೋಟೆಕ್ ಲಿಮಿಟೆಡ್, ಇನ್ನೋವಸಿಂತ್ ಟೆಕ್ನಾಲಜೀಸ್ ಲಿಮಿಟೆಡ್, ಮಿಡ್ ಡೇ ಮಲ್ಟಿಮೀಡಿಯಾ ಕಂಪನಿ ಲಿಮಿಟೆಡ್, ನಾಗಾರ್ಜುನಾ ಕಂಪನಿ ಲಿಮಿಟೆಡ್, ವೈಸರಾಯ್ ಹೋಟೆಲ್ಸ್ ಲಿಮಿಟೆಡ್ ಮತ್ತು ಟಾಪ್ಸ್ ಸೆಕ್ಯುರಿಟಿ ಲಿಮಿಟೆಡ್ ನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.
ಇದನ್ನೂ ಓದಿ:ಕಾಮನ್ ಸರ್ವಿಸ್ ಸೆಂಟರ್ 10 ಸಾವಿರಕ್ಕೆ ಏರಿಸುವ ಗುರಿ : ಡಾ| ವೀರೇಂದ್ರ ಹೆಗ್ಗಡೆ
ಶೇರು ಮಾರುಕಟ್ಟೆಯ ತನ್ನ ಹಿಡಿತದ ಕಾರಣದಿಂದ ರಾಕೇಶ್ ಜುಂಜುನ್ ವಾಲಾ ಅವರನ್ನು “ಬಿಗ್ ಬುಲ್ ಆಫ್ ಇಂಡಿಯಾ” ಮತ್ತು “ಕಿಂಗ್ ಆಫ್ ಬುಲ್ ಮಾರ್ಕೆಟ್” ಎಂದು ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ಅವರು ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ್ದರು. ಆಗಸ್ಟ್ 7ರಂದು ಇದರ ಮೊದಲ ಹಾರಾಟ ನಡೆದಿತ್ತು.
ರಾಕೇಶ್ ಜುಂಜುನ್ ವಾಲಾ ನಿಧನಕ್ಕೆ ಮಾಜಿ ಕ್ರಿಕೆಟಿಗ ವೀರೆಂದ್ರ ಸೆಹವಾಗ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
End of an Era as the Big Bull of the Dalal Street , #RakeshJhunjhunwala passes away.
Condolences to his family and loved ones. Om Shanti ? pic.twitter.com/3OrVSzU2Ty— Virender Sehwag (@virendersehwag) August 14, 2022
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.