“ಬಳಸಿದ ಅಡುಗೆ ಎಣ್ಣೆಯಿಂದ ಬಯೋಡೀಸೆಲ್‌’


Team Udayavani, May 6, 2021, 6:40 AM IST

“ಬಳಸಿದ ಅಡುಗೆ ಎಣ್ಣೆಯಿಂದ ಬಯೋಡೀಸೆಲ್‌’

ಹೊಸದಿಲ್ಲಿ: ಬಳಸಿದ ಅಡುಗೆ ಎಣ್ಣೆ (ಯುಸಿಒ)ಯಿಂದ ತಯಾರಿಸಿದ ಬಯೋಡೀಸೆಲ್‌ ಮಿಶ್ರಿತ ಡೀಸೆಲ್‌ನ ಮೊದಲ ಸರಬರಾಜಿಗೆ ಇಂಡಿಯನ್‌ ಆಯಿಲ್‌ನ ತಿಕ್ರಿಕಾನ್‌ ಟರ್ಮಿನಲ್‌ನಲ್ಲಿ  ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು  ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ವರ್ಚುವಲ್‌ ಆಗಿ ಚಾಲನೆ ನೀಡಿದರು.  ಈ ಸಂದರ್ಭ ಪೆಟ್ರೋ ಲಿಯಂ ಸಚಿವಾಲಯದ ಕಾರ್ಯದರ್ಶಿ ತರುಣ್‌ ಕಪೂರ್‌, ಇಂಡಿಯನ್‌ ಆಯಿಲ್‌ನ ಚೇರ್ಮೆನ್‌ ಎಸ್‌. ಎಂ. ವೈದ್ಯ ಮೊದಲಾದವರು ಉಪಸ್ಥಿತರಿದ್ದರು.

ಬಳಸಿದ ಅಡುಗೆ ತೈಲವನ್ನು ಸಂಗ್ರಹಿಸಿ ಬಯೋಡೀಸೆಲ್‌ ಆಗಿ ಪರಿವರ್ತಿಸಲು ಮತ್ತು  ಇದರಲ್ಲಿ ಔದ್ಯೋಗಿಕ ಅವಕಾಶ ವನ್ನು ವಿಸ್ತರಿಸಲು ಪೆಟ್ರೋಲಿಯಂ ಇಲಾಖೆಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಜ್ಞಾನ, ತಂತ್ರಜ್ಞಾನ ಮತ್ತು ಭೂವಿಜ್ಞಾನ ಇಲಾಖೆಯ ಸಹಯೋಗದೊಂದಿಗೆ 2019ರ ಆ. 10ರ ವಿಶ್ವ ಜೈವಿಕ ಇಂಧನ ದಿನದಂದು ಯೋಜನೆಯೊಂದನ್ನು ಆರಂಭಿಸಿತ್ತು. ಇದರ ಪ್ರಕಾರ 2019ರ ಆ. 10ರಿಂದ 2020ರ ನ. 9ರವರೆಗೆ 11 ಇಒಐ (ಎಕ್ಸ್‌ಪ್ರೆಶನ್‌ ಆಫ್ ಇಂಟೆರೆಸ್ಟ್‌)ಗಳು 200 ಪ್ರದೇಶಗಳಲ್ಲಿ ಈ ಬಗ್ಗೆ ಕಾರ್ಯೋನ್ಮುಖವಾಗಿದ್ದವು.

ಇದೀಗ  ಈ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದ್ದು, 2021ರ ಡಿ. 31ರ ವೇಳೆಗೆ 300 ಪ್ರದೇಶಗಳಿಗೆ ವಿಸ್ತರಣೆಯಾಗಲಿದೆ. ಈ ಯೋಜನೆ ಪ್ರಕಾರ ತೈಲ ಮಾರುಕಟ್ಟೆ ದೇಶಗಳು ತೈಲ ಕಂಪೆನಿಗಳಿಗೆ ದರ ಖಾತರಿ ಸಹಿತ ಕೆಲವು ಕೊಡುಗೆಗಳನ್ನು ಘೋಷಿಸಿವೆ. ಇಲ್ಲಿಯವರೆಗೆ ಇಂಡಿಯನ್‌ ಆಯಿಲ್‌ ಕಂಪೆನಿಯು ಬಯೋಡೀಸೆಲ್‌ ಪ್ಲಾಂಟ್‌ಗಳಿಗೆ 22.95 ಕೋಟಿ ಲೀಟರ್‌ ಸಾಮರ್ಥ್ಯದಲ್ಲಿ 23 ಎಲ್‌ಒಐಗಳನ್ನು ಬಿಡುಗಡೆ ಮಾಡಿದೆ. ಇದರಡಿ ಯಲ್ಲಿ ಇಂಡಿಯನ್‌ ಆಯಿಲ್‌ ಕಂಪೆನಿಯು 2021ರ ಮಾ. 31ರ ವರೆಗೆ ತಿಕ್ರಿಕಾನ್‌ ಟರ್ಮಿನಲ್‌ನಲ್ಲಿ 51 ಕೆಎಲ್‌ ಯುಸಿಒ- ಬಯೋಡೀಸೆಲ್‌ ಅನ್ನು ಪಡೆದುಕೊಂಡಿದೆ.

ಈ ಹೊಸ ಯೋಜನೆಗಾಗಿ ಧರ್ಮೇಂದ್ರ ಪ್ರಧಾನ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದು, ಈಗಿನ ಸಂಕಷ್ಟದ ಸಂದರ್ಭದಲ್ಲಿ ಇಂಥದ್ದೊಂದು ಯೋಜನೆ  ಉತ್ತಮವಾಗಿದೆ. ಕೊರೊನಾ ಸಾಂಕ್ರಾಮಿಕದ ಸವಾಲಿನ ನಡುವೆಯೂ ಪರ್ಯಾಯ ಇಂಧನ ಮಾರ್ಗಗಳನ್ನು ಹುಡುಕುತ್ತಿರುವುದು ಉತ್ತಮ ಬೆಳವಣಿಗೆ. ಇಂಡಿಯನ್‌ ಆಯಿಲ್‌ ಸಂಸ್ಥೆಯು ಈ ಹೊಸ ಯೋಜನೆ ಮೂಲಕ ದೇಶದ ತೈಲದ ಅಗತ್ಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗಲಿದೆ ಹಾಗೂ ಪರಿಸರದ ಮೇಲೆ ಗುಣಾತ್ಮಕ ಪರಿಣಾಮ ಬೀರಲಿದೆ. ತೈಲ ಆಮದು ಪ್ರಮಾಣವನ್ನು ಇಳಿಸಲು ಹಾಗೂ ಗ್ರಾಮೀಣ ಭಾಗದ ನಿರುದ್ಯೋಗವನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗಿದೆ ಎಂದರು.

ಎಸ್‌.ಎಂ. ವೈದ್ಯ ಮಾತನಾಡಿ, ನಾವು ಜನರು ಬಳಸಿದ ಅಡುಗೆ ಎಣ್ಣೆಯ ಕೊನೆಯ ಒಂದು ಬಿಂದುವನ್ನೂ ಬಯೋಡೀಸೆಲ್‌ ಆಗಿ ಪರಿವರ್ತಿಸುವ ಮೂಲಕ ಆರೋಗ್ಯ ಕಾಪಾಡಲು ಕೂಡ ಶ್ರಮಿಸುತ್ತೇವೆ ಮತ್ತು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ನಿಟ್ಟಿನಲ್ಲೂ  ಪೂರಕ ಹೆಜ್ಜೆ ಇರಿಸುತ್ತೇವೆ ಎಂದರು.

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

Gujarat: ಕೋಸ್ಟ್‌ ಗಾರ್ಡ್‌ ಹೆಲಿಕಾಪ್ಟರ್‌ ಪತನ; ಮೂವರು ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.