ಯೋಧರಿಗೆ ಬರ್ತ್ಡೇ ರಜೆ
Team Udayavani, Aug 13, 2018, 9:57 AM IST
ಹೊಸದಿಲ್ಲಿ: ಚೀನ ಜತೆಗೆ ಗಡಿ ಕಾಯುವ ಹೊಣೆ ಹೊತ್ತಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್ (ಐಟಿಬಿಪಿ) ಸಿಬಂದಿಯ ಜನ್ಮದಿನದಂದು ಅರ್ಧ ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಅದೇ ದಿನ ಕೇಕ್ ಕತ್ತರಿಸಿ ಸಂಭ್ರಮಾಚರಣೆ ನಡೆಸಲು ಅನುಮತಿ ನೀಡಲಾಗಿದೆ. ಅರೆ ಸೇನಾ ಸಿಬಂದಿಯಲ್ಲಿನ ಸ್ಥೈರ್ಯ ಮತ್ತು ಮನೋಬಲ ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೇನಾ ಪಡೆಯಲ್ಲಿನ ಪುರುಷ ಅಥವಾ ಮಹಿಳಾ ಯೋಧರ ಹುಟ್ಟಿದ ಹಬ್ಬದ ವಿವರಣೆಯನ್ನು ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಬೇಕಾಗುತ್ತದೆ. ಜತೆಗೆ ಅವರಿಗೆ ಹಿರಿಯ ಅಧಿಕಾರಿಯೊಬ್ಬರ ವತಿಯಿಂದ ಹೂಗುತ್ಛ ನೀಡಿ ಅಭಿನಂದನೆ ಸಲ್ಲಿಸಬೇಕು. ಆ ದಿನ ಅವರಿಗೆ ಸಮವಸ್ತ್ರ ಧರಿಸದೇ ಇರಲು ಅವಕಾಶ ಮಾಡಿಕೊಡಲಾಗಿದ್ದು, ಇಷ್ಟದ ದಿರಿಸನ್ನು ಧರಿಸಲೂ ಅನುಮತಿ ನೀಡಲಾಗಿದೆ.
ಶೀಘ್ರದಲ್ಲೇ ಸ್ವದೇಶಿ ಉಪಕರಣಗಳು
ವಿಶ್ವದ ಅಪಾಯಕಾರಿ ಯುದ್ಧಭೂಮಿ ಎಂದೇ ಪರಿಗಣಿಸಲ್ಪಟ್ಟಿರುವ ಸಿಯಾಚಿನ್ನಲ್ಲಿ ನಿಯೋಜಿಸಲಾದ ಯೋಧರಿಗೆ ವಿಶೇಷ ಉಡುಗೆ, ಸ್ಲಿàಪಿಂಗ್ ಕಿಟ್ ಹಾಗೂ ಪ್ರಮುಖ ಉಪಕರಣಗಳನ್ನು ಒದಗಿಸುವ ದೀರ್ಘಾವಧಿಯ ಯೋಜನೆಗೆ ಸೇನೆ ಅಂತಿಮ ಸ್ಪರ್ಶ ನೀಡುತ್ತಿದೆ. ಇಲ್ಲಿರುವ ಯೋಧರಿಗೆ ವಿಪರೀತ ಚಳಿ ತಡೆಯುವಂಥ ವಸ್ತ್ರ ಹಾಗೂ ಪರ್ವತಾ ರೋಹಣಕ್ಕೆ ಬೇಕಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಭಾರತ ಪ್ರತಿ ವರ್ಷ 800 ಕೋಟಿ ರೂ. ವೆಚ್ಚ ಮಾಡುತ್ತದೆ. ಈಗ ದೇಶದಲ್ಲೇ ಇವುಗಳನ್ನು ತಯಾರಿಸುವ ಮೂಲಕ 300 ಕೋಟಿ ರೂ. ಉಳಿತಾಯ ಮಾಡಲು ಸೇನೆ ನಿರ್ಧರಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.