ಪಾತಕಿ ಛೋಟಾ ರಾಜನ್ ಬರ್ತ್ ಡೇಗೆ ಶುಭಕೋರಿ ಬ್ಯಾನರ್: 6 ಜನರ ವಿರುದ್ಧ ಪ್ರಕರಣ
Team Udayavani, Jan 14, 2023, 2:49 PM IST
ಮುಂಬೈ: ಮುಂಬೈನ ಮಲಾಡ್ ನಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದಂದು ಪೋಸ್ಟರ್ ಹಾಕಿದ್ದಕ್ಕಾಗಿ ಆರು ಜನರ ವಿರುದ್ಧ ಮುಂಬೈ ಪೊಲೀಸರು ಶನಿವಾರ (ಜನವರಿ 14) ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಕಬಡ್ಡಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೋಸ್ಟರ್ ನಲ್ಲಿ ನಮೂದಿಸಲಾದ ವಿವರಗಳಲ್ಲಿ ಸಾಗರ್ ರಾಜ್ ಗೋಲೆ ಎಂಬ ವ್ಯಕ್ತಿಯೇ ಸಂಘಟಕ ಎಂದು ಬರೆಯಲಾಗಿದ್ದು, ‘ಸಿಆರ್ ಸಮಾಜಿಕ ಸಂಘಟನೆ’ ಮಹಾರಾಷ್ಟ್ರದ ಪೋಸ್ಟರ್ ಹಾಕಲಾಗಿದೆ.
ಇದನ್ನೂ ಓದಿ:ತಮಿಳುನಾಡು ಡಿಎಂಕೆ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು
ಪೋಸ್ಟರ್ ಪ್ರಕಾರ ಶುಕ್ರವಾರ (ಜನವರಿ 13) ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದ ಸಂದರ್ಭದಲ್ಲಿ ಕಬ್ಬಡ್ಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೂಲತಃ ಚೆಂಬೂರಿನ ಪಾತಕಿ ಛೋಟಾ ರಾಜನ್ ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಆತನನ್ನು ಮಲೇಷ್ಯಾದಿಂದ ಗಡೀಪಾರು ಮಾಡಲಾಗಿತ್ತು. ಇತ್ತೀಚೆಗಷ್ಟೇ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.
Maharashtra | Mumbai Police books six people who put up a poster wishing underworld don Chhota Rajan on his birthday, in Malad. The six people who have been booked, also include a man who had organised a Kabaddi event on the occasion. pic.twitter.com/uI62rwLrAd
— ANI (@ANI) January 14, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.