ಕಾರ್ಮಿಕರಿಗೆ ಕಹಿಯಾಯ್ತು ಪಾರ್ಲೆ ಜಿ
10 ಸಾವಿರ ಉದ್ಯೋಗ ಕಡಿತ ಭೀತಿ?
Team Udayavani, Aug 21, 2019, 3:37 PM IST
ಮುಂಬಯಿ: ಏಷ್ಯಾದ ಅತಿ ದೊಡ್ಡ ಬಿಸ್ಕೆಟ್ ತಯಾರಿಕೆ ಕಂಪೆನಿಯಾದ ಪಾರ್ಲೆ ಜಿ ಈಗ ಕಾರ್ಮಿಕರ ಪಾಲಿಗೆ ಕಹಿಯಾಗುವ ಸಾಧ್ಯತೆ ಇದೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಕಂಪೆನಿ ಇದೀಗ 10 ಸಾವಿರ ಮಂದಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಪಾರ್ಲೆ ಪ್ರೊಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ನ ಬಿಸ್ಕೆಟ್ ಉತ್ಪನ್ನಗಳ ಮಾರಾಟದಲ್ಲಿ ತೀವ್ರ ಕುಸಿತ ಕಂಡಿವೆ. 1929ರಲ್ಲಿ ಸ್ಥಾಪನೆಯಾದ ಈ ಕಂಪೆನಿ 10 ಸ್ವಂತ ಬಿಸ್ಕೆಟ್ ತಯಾರಿಕೆ ಫ್ಯಾಕ್ಟರಿಗಳನ್ನು ಹೊಂದಿದ್ದು, 125 ಗುತ್ತಿಗೆ ಆಧಾರಿತ ತಯಾರಿಕೆ ಕೇಂದ್ರಗಳನ್ನು ಹೊಂದಿದೆ. ಒಟ್ಟು 1 ಲಕ್ಷದಷ್ಟು ನೇರ ಮತ್ತು ಗುತ್ತಿಗೆ ಆಧಾರಿತ ಕಾರ್ಮಿಕರಿದ್ದಾರೆ.
ಕೇಂದ್ರ ಸರಕಾರ ಮಧ್ಯ ಪ್ರವೇಶಿಸದೇ ಇದ್ದರೆ, ಕಾರ್ಮಿಕರನ್ನು ಕೈಬಿಡಬೇಕಾಗಿ ಬರಬಹುದು ಎಂದು ಪಾರ್ಲೆಯ ವಿಭಾಗೀಯ ಮುಖ್ಯಸ್ಥ ಮಾಯಾಂಕ್ ಶಾ ಹೇಳಿದ್ದಾರೆ. ಜಿ.ಎಸ್.ಟಿ. ಜಾರಿಗೆ ಬಂದ ಬಳಿಕ ಹೆಚ್ಚಿದ ಮಾರಾಟ ಸುಂಕದ ಕಾರಣಕ್ಕಾಗಿ ಕಂಪೆನಿ ನಷ್ಟ ಅನುಭವಿಸುತ್ತಿದೆ.
ತೆರಿಗೆ ಹೆಚ್ಚಾದ್ದರಿಂದ ಪ್ಯಾಕ್ ನಲ್ಲಿ ಬಿಸ್ಕೆಟ್ ಕಡಿಮೆ ಹಾಕಬೇಕಾಗಿದ್ದು, ಇದರಿಂದ ಅತಿ ಕಡಿಮೆ ದರದ ಬಿಸ್ಕೆಟ್ ಖರೀದಿ ಮಾಡುವ ಗ್ರಾಮೀಣ ಜನರು, ಪಾರ್ಲೆ ಜಿ ಖರೀದಿಗೆ ಹಿಂದೇಟು ಹಾಕಬಹುದು. ಇದು ಕಂಪೆನಿ ನಷ್ಟವನ್ನು ಹೆಚ್ಚು ಮಾಡಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Surat: ಭಾನುವಾರ ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರವೇ ಬಿತ್ತು ಬೀಗ
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Maharastra: ಚುನಾವಣೆಗೂ ಮೊದಲೇ ಬಿಜೆಪಿ ನಾಯಕನ ವಿರುದ್ಧ ಹಣ ಹಂಚಿದ ಆರೋಪ
Viral Video: ಟಿಕ್‌ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.