ಬಿಟ್ ಕಾಯಿನ್ ಹೂಡಿಕೆ ಬೇಡ;ಬಿಟ್ ಕಾಯಿನ್ ಎಂದರೇನು?
Team Udayavani, Dec 30, 2017, 2:00 PM IST
ಹೊಸದಿಲ್ಲಿ: ಬಿಟ್ ಕಾಯಿನ್‌ಗಳಲ್ಲಿ ಹೂಡಿಕೆ ಮಾಡುವಿರಾ? ಅದಕ್ಕೆ ಭಾರತದಲ್ಲಿ ಕಾನೂ ನಿನ ಮಾನ್ಯತೆ ಇಲ್ಲ. ಡಿಜಿಟಲ್ ಕರೆನ್ಸಿ ಎನ್ನುವು ದೊಂದು “ಮೋಡಿ ಮಾಡುವ ಯೋಜನೆ’.
– ಹೀಗೆಂದು ಕೇಂದ್ರ ಹಣಕಾಸು ಸಚಿವಾ ಲಯ ಶುಕ್ರವಾರ ಎಚ್ಚರಿಕೆ ನೀಡಿದೆ. ಸದ್ಯ ಚಲಾವಣೆಯಲ್ಲಿರುವ ಕರೆನ್ಸಿಗೆ ಸಮಾನವಾಗಿ ರುವ ಮೌಲ್ಯ ನಿಗದಿ ಮಾಡಲಾಗಿಲ್ಲ. ಬಿಟ್ ಕಾಯಿನ್ ಮತ್ತು ಇತರ ಡಿಜಿಟಲ್ ಕರೆನ್ಸಿಗೆ ಊಹಾತ್ಮಕ ಬೆಲೆ ನಿಗದಿ ಮಾಡಲಾಗಿದೆ. ವರ್ಚುವಲ್ ಕರೆನ್ಸಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಕಾರಣ, ಬೇಗನೆ ವೈರಸ್ ದಾಳಿಗೆ ಒಳಗಾಗಬಹುದು. ಹೀಗಾಗಿ ಅದರ ಮೇಲೆ ಹೆಚ್ಚಿನ ವಿಶ್ವಾಸ ಇರಿಸಲಾಗದು ಎಂದು ದೇಶವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಕಾನೂನಾತ್ಮಕವಾಗಿ ಕೂಡ ಅದರಲ್ಲಿ ಹೂಡಿಕೆ ಮಾಡುವ ಬಗ್ಗೆ ಸವಾಲುಗಳಿವೆ. ಸಾರ್ವಜನಿಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೆಚ್ಚಿನ ಲಾಭವಾಗುತ್ತದೆ ಎಂಬ ಆಸೆಯಿಂದ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಬಾರದು ಎಂದು ಸಚಿವಾಲಯ ಮನವಿ ಮಾಡಿದೆ. ಭಾರತ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅದಕ್ಕೆ ಮಾನ್ಯತೆ ನೀಡಿಲ್ಲ. ಅದನ್ನು ಚಲಾವಣೆ ಮಾಡುವ ಬಗ್ಗೆ ಯಾವುದೇ ಸಂಸ್ಥೆ ಅಥವಾ ಏಜೆನ್ಸಿಗೆ ಅನುಮತಿ ನೀಡಲಾಗಿಲ್ಲ ಎಂದಿದೆ.
ಈ ಬಗ್ಗೆ 2013ರ ಡಿಸೆಂಬರ್ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಆರ್‌ಬಿಐ ವತಿಯಿಂದ ಎಚ್ಚರಿಕೆ ನೀಡಲಾಗಿತ್ತು.
ಬಿಟ್ ಕಾಯಿನ್ ಎಂದರೇನು?
ಇದೊಂದು ಡಿಜಿಟಲ್ ಕರೆನ್ಸಿ. ಡಿಜಿಟಲ್ ಕರೆನ್ಸಿಗೆ ಇರುವ ನಿಯ ಮ ಗಳನ್ನೇ ಉಪಯೋಗಿಸಲಾ ಗುತ್ತದೆ. ಇದೊಂದು ಅತ್ಯಂತ ಸೂಕ್ಷ್ಮಹಾಗೂ ವಿಕೇಂದ್ರೀಕೃತ ಡಿಜಿಟಲ್ ಕರೆನ್ಸಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.