![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 19, 2022, 2:20 PM IST
ಭುವನೇಶ್ವರ : ಒಡಿಶಾದ ಬಿಜೆಡಿಯ ತಿರ್ಟೋಲ್ ಶಾಸಕ ಬಿಜಯ ಶಂಕರ್ ದಾಸ್ ಅವರು ಸೆಕ್ಸ್ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ಪ್ರೇಯಸಿಯೇ ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ಬಿಜಯ ಶಂಕರ್ ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದರು ಎಂದು ಸೋಮಲಿಕಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಬಿಜಯ ಶಂಕರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಆದರೆ ನಿಗದಿತ ದಿನಾಂಕದಂದು ಅವರು ಜಗತ್‌ಸಿಂಗ್‌ಪುರದ ಮದುವೆ ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಲಿಲ್ಲ, ಅವರು ಬಾರದ ಕಾರಣ ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಮತ್ತು ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಸೋಮಲಿಕಾ ಹೇಳಿದ್ದಾರೆ.ಈ ನಿಟ್ಟಿನಲ್ಲಿ ದಾಸ್ ವಿರುದ್ಧ ಕಟಕ್ ಮತ್ತು ಭುವನೇಶ್ವರದಲ್ಲಿ ಹಲವು ಪ್ರಕರಣಗಳು ಬಾಕಿ ಇವೆ.
ಇಬ್ಬರೂ ಬಹಳ ಸಮಯದಿಂದ ಪ್ರೀತಿಸುತ್ತಿದ್ದರು. ಕಳೆದ ಪಂಚಾಯತಿ ಚುನಾವಣೆ ವೇಳೆ ಕೆಲ ಕಾರಣಗಳಿಂದ ಸಂಬಂಧ ಹಳಸಿತ್ತು. ಆಗ ಅವರು ತಮ್ಮ ಆತ್ಮೀಯ ಕ್ಷಣಗಳ ಕೆಲವು ಫೋಟೋಗಳನ್ನು ವೈರಲ್ ಮಾಡಿದ್ದರು. ಕಳೆದ ತಿಂಗಳು ಆಕೆ ಈ ವಿಷಯವನ್ನು ಪೊಲೀಸ್ ವರಿಷ್ಠಾಧಿಕಾರಿ ಬಳಿಯೂ ಕೊಂಡೊಯ್ದಿದ್ದರು.
ಏತನ್ಮಧ್ಯೆ, ಇಬ್ಬರೂ ವಿವಾಹ ನೋಂದಣಿಗಾಗಿ ಮೇ 17 ರಂದು ಜಗತ್‌ಸಿಂಗ್‌ಪುರದ ವಿವಾಹ ನೋಂದಣಿ ಕಚೇರಿಗೆ ಭೇಟಿ ನೀಡಿದ್ದರು.ನಿಯಮದ ಪ್ರಕಾರ ಎರಡೂ ಕಡೆಯಿಂದ ಯಾವುದೇ ಕಂಪ್ಲೈಂಟ್ ಸ್ವೀಕರಿಸದಿದ್ದರೆ, ಮದುವೆಯ ಅರ್ಜಿಯು ಮಾನ್ಯವಾಗಿರುತ್ತದೆ. ಹಾಗಾಗಿ, ಮದುವೆಗೆ ಅರ್ಜಿ ಸಲ್ಲಿಸಿ ಒಂದು ತಿಂಗಳು ಪೂರ್ಣಗೊಂಡಾಗ ಜೂನ್ 17 ರಂದು ಸೋಮಲಿಕಾ ಮದುವೆ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದರು.
ಮದುವೆಯನ್ನು ನಿಗದಿಪಡಿಸಿದ ದಿನ ನಾವು ಜಗತ್‌ಸಿಂಗ್‌ಪುರದ ಮದುವೆಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಅವರಿಗಾಗಿ ಕಾಯುತ್ತಿದ್ದೆವು ಮತ್ತು ಅವರು ಬಾರದಿದ್ದಾಗ ನಾವು ಪೊಲೀಸ್ ದೂರು ದಾಖಲಿಸಬೇಕಾಯಿತು ಎಂದು ಸೋಮಲಿಕಾ ಅವರ ತಂದೆ ಸಂಗ್ರಾಮ್ ಕಿಶೋರ್ ದಾಸ್ ತಿಳಿಸಿದ್ದಾರೆ.
ಬಿಜಯ ಶಂಕರ್ ಅವರನ್ನು ಸಂಪರ್ಕಿಸಿದಾಗ, ಹೊರಿಸಲಾದ ಹೊಸ ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.ಮದುವೆ ವಿಚಾರದಲ್ಲಿ ಯಾರೂ ಮಾತನಾಡಿಲ್ಲ ಎಂದು ಶುಕ್ರವಾರ ಹೇಳಿದ್ದರು. ಬಿಜಯ ಶಂಕರ್ ದಾಸ್ ಅವರ ತಂದೆ ದಿವಂಗತ ಬಿಷ್ಣು ಚರಣ್ ದಾಸ್ ಅವರು ಶಿಕ್ಷಣ ಸಚಿವರಾಗಿದ್ದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.