‘ಕೆಲಸ ಮಾಡುವವರ ಮೇಲೆ ಜನರ ನಿರೀಕ್ಷೆ’: ಮಹಾಸಮರಕ್ಕೆ BJP ಸ್ಲೋಗನ್ !
Team Udayavani, Feb 3, 2019, 10:16 AM IST
ನವದೆಹಲಿ: ಕೆಲವೇ ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಮಹಾಚುನಾವಣೆಗೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಪಕ್ಷದ ಘೋಷವಾಕ್ಯ ಸಿದ್ಧವಾಗಿದ್ದು ಅದನ್ನು ಆದಿತ್ಯವಾರದಂದು ಬಿಡುಗಡೆಗೊಳಿಸಲಾಗಿದೆ. ‘ಕಾಮ್ ಕರೇ ಜೋ, ಉಮೀದ್ ಉಸೀ ಸೆ ಹೋ’ (ಯಾರು ಕೆಲಸ ಮಾಡುತ್ತಾರೋ, ಅವರ ಮೇಲೆ ಜನರ ನಿರೀಕ್ಷೆ) ಎಂಬ ವಾಕ್ಯವನ್ನು ಬಳಸಿಕೊಂಡು ಬಿ.ಜೆ.ಪಿ. ಇದೀಗ ಮತದಾರರತ್ತ ಬರುತ್ತಿದೆ.
आपके मन की बात भाजपा के संकल्प-पत्र और भारत के भविष्य के संकल्पों में हो सकती है शामिल।
भाजपा संकल्प पत्र के लिए बताएं मोदी जी को अपने मन की बात
➞ डायल करें 6357171717
➞ अपने सुझाव ऑनलाइन भेजें https://t.co/JmNcFQFel9
➞ नमो ऐप पर अपने सुझाव भेजें#BharatKeMannKiBaat pic.twitter.com/tY1Jyf3eZb— BJP (@BJP4India) February 3, 2019
‘ಭಾರತ್ ಕಿ ಮನ್ ಕಿ ಬಾತ್, ಮೋದಿ ಕೆ ಸಾಥ್’ (ಮೋದಿಯವರೊಂದಿಗೆ ಭಾರತೀಯರ ಮನದಾಳದ ಮಾತು) ಎಂಬ ಒಂದು ತಿಂಗಳ ಅಭಿಯಾನದ ಪ್ರಾರಂಭದ ದಿನವೇ ಈ ಹೊಸ ಘೋಷವಾಕ್ಯವನ್ನು ಕಮಲ ಪಕ್ಷವು ಬಿಡುಗಡೆ ಮಾಡಿದೆ. ಈ ಅಭಿಯಾನದ ಮೂಲಕ ಬಿ.ಜೆ.ಪಿ.ಯು ದೇಶಾದ್ಯಂತ ಸುಮಾರು 10 ಕೋಟಿ ಜನರಿಂದ ತನ್ನ ಮುಂಬರುವ ಪ್ರಣಾಳಿಕೆ ರೂಪಿಸಲು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಿದೆ. ಈ ಸಲಹೆ ಸೂಚನೆಗಳನ್ನು ಆಧರಿಸಿ ಬಿ.ಜೆ.ಪಿ.ಯು ಲೋಕ ಸಮರಕ್ಕಾಗಿ ತನ್ನ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ್ ಪತ್ರ್’ ತಯಾರಿಸಲಿದೆ. 2014ರ ಚುನಾವಣೆಯಲ್ಲಿ ‘ಸಬ್ ಕೆ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯನ್ನು ಎದುರಿಸಿತ್ತು. ಮತ್ತು ಈ ಮೂಲಕ ಯುವ ಮತದಾರರ ಹೃದಯವನ್ನು ಗೆದ್ದು ನರೇಂದ್ರ ಮೋದಿ ಅವರು ಭರ್ಜರಿ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರು.
‘ದೆಶದ ಜನರಿಂದ ಸಲಹೆಗಳನ್ನು ಪಡೆದುಕೊಂಡು ಪ್ರಣಾಳಿಕೆಯನ್ನು ರೂಪಿಸುವ ಈ ನಮ್ಮ ನೂತನ ಯೋಚನೆ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಇನ್ನಷ್ಟು ಸಹಕಾರಿಯಾಗುವುದು’ ಎಂಬ ಆಶಾವಾದವನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ‘ದೇಶ ನಿರ್ಮಾಣದಲ್ಲಿ ಮತದಾರರ ಕನಸುಗಳೇನು ಮತ್ತು ಈ ನಿಟ್ಟಿನಲ್ಲಿ ಅವರು ಯಾವೆಲ್ಲ ರೀತಿಯ ಸಲಹೆಗಳನ್ನು ನೀಡುತ್ತಾರೆ ಎಂಬುದನ್ನು ನಮಗೆ ತಿಳಿಸಿದರೆ ಅದಕ್ಕೆ ಸೂಕ್ತವಾದ ಪ್ರಣಾಳಿಕೆಯನ್ನು ರೂಪಿಸಲು ಅನುಕೂಲವಾಗುತ್ತದೆ ಮತ್ತು ಆ ಮೂಲಕ ನಮಗೆ ನಮ್ಮ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ ಎಂದು ಶಾ ಇದೇ ಸಂದರ್ಭದಲ್ಲಿ ಹೇಳಿದರು. ಪಕ್ಷದ ಇಂದಿನ ಸಭೆ ನಡೆದ ಹೊಟೇಲ್ ನ ಪರಿಚಾರಕರೊಬ್ಬರಿಂದ ಪ್ರಥಮ ಸಲಹೆಯನ್ನು ಪಡೆಯುವ ಮೂಲಕ ಬಹು ನಿರೀಕ್ಷಿತ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ಅಭಿಯಾನದ ಅಂಗವಾಗಿ ದೇಶಾದ್ಯಂತ ಇರುವ 4000 ವಿಧಾನಸಭಾ ಕ್ಷೇತ್ರಗಳಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಲು 300 ವಿಶೇಷ ವಾಹನಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ವಾಹನಗಳಲ್ಲಿ 7700 ಸಲಹೆ ಸಂಗ್ರಹ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ‘ಸಂಕಲ್ಪ್ ಪತ್ರ್’ ಆಯೋಗದ ಮುಖ್ಯಸ್ಥರಾಗಿದ್ದಾರೆ.
काम करे जो, उम्मीदें उसी से हों…
बुनियाद बनाने निकल पड़े, हम देश बनाने निकल पड़े।
भारत को भारत की पहचान दिलाने निकल पड़े… #BharatKeMannKiBaat pic.twitter.com/LHWMGTAhYL
— BJP (@BJP4India) February 3, 2019
Every section of society has been empowered, every aspect of the nation has been strengthened by the Modi government over the past five years. Out of all the amazing work, what are the five things this government will be most remembered for? Let us know. #BharatKeMannKiBaat pic.twitter.com/4qqAxuL53g
— BJP (@BJP4India) February 3, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.