ಚುನಾವಣಾ ಕಣಕ್ಕೆ ಬಿಜೆಪಿ ಹುರಿಯಾಳುಗಳ ಘೋಷಣೆ
Team Udayavani, Nov 18, 2017, 8:44 AM IST
ಹೊಸದಿಲ್ಲಿ /ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಅಖಾಡ ಈಗಾಗಲೇ ರಂಗೇರಿದೆ. ಅದಕ್ಕೆ ಪೂರಕವೆಂಬಂತೆ ಆಡಳಿತ ಪಕ್ಷ ಬಿಜೆಪಿ ಶುಕ್ರವಾರ ಮುಖ್ಯಮಂತ್ರಿ ವಿಜಯ ರೂಪಾಣಿ ಸೇರಿದಂತೆ 70 ಮಂದಿ ಹುರಿಯಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಮುಖ್ಯಾಂಶವೆಂದರೆ ಕಾಂಗ್ರೆಸ್‌ನಿಂದ ಸಿಡಿದು ಪಕ್ಷಕ್ಕೆ ಸೇರ್ಪಡೆಯಾಗಿರುವ ಐವರು ಸೇರಿದಂತೆ 49 ಹಾಲಿ ಶಾಸಕರಿಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸಲಾಗಿದೆ. ಒಟ್ಟು 16 ಹೊಸಬರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಮೂವರು ಹಾಲಿ ಶಾಸಕರು ಟಿಕೆಟ್ ವಂಚಿತರಾದರೆ, ಒಬ್ಬರ ಕ್ಷೇತ್ರ ಬದಲಾವಣೆ ಮಾಡಲಾಗಿದೆ.
ಸಿಎಂ ವಿಜಯ ರೂಪಾಣಿ ರಾಜ್‌ಕೋಟ್ ಪಶ್ಚಿಮ, ಡಿಸಿಎಂ ನಿತಿನ್ ಭಾಯ್ ಪಟೇಲ್ ಮೆಹಸಾನಾದಿಂದ, ಗುಜರಾತ್ ಬಿಜೆಪಿ ಅಧ್ಯಕ್ಷ ಜಿತು ಭಾಯಿ ವಘಾನಿ ಭಾವಾನಗರ ಪಶ್ಚಿಮ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಜಾತಿವಾರು ಲೆಕ್ಕ ನೋಡುವುದಾದರೆ 18 ಪಟೇಲ್, 16 ಒಬಿಸಿ, 3 ಎಸ್‌ಸಿ, 11 ಎಸ್‌ಟಿ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ. 25 ಮಂದಿ ಸಚಿವರ ಪೈಕಿ ಮೊದಲ ಪಟ್ಟಿಯಲ್ಲಿ 15 ಮಂದಿಗೆ ಅದೃಷ್ಟ ಪರೀಕ್ಷೆಯ ಅವಕಾಶ ಸಿಕ್ಕಿದೆ. ಅಮ್ರೇಲಿ ಕ್ಷೇತ್ರದ ಮಾಜಿ ಸಂಸದ ದಿಲಿಪ್‌ಸಂಘನಾನಿಗೆ ಧರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ನಾಲ್ವರು ಮಹಿಳೆಯರೂ ಇದ್ದಾರೆ.
ಕಾಂಗ್ರೆಸ್‌ನ ಐವರು ಭಿನ್ನಮತೀಯ ನಾಯಕರಾದ ರಾಘವ್‌ಜಿ ಪಟೇಲ್, ಧರ್ಮೇಂದ್ರ ಸಿನ್ಹ ಜಡೇಜ, ರಮೇಶ್ ಸಿನ್ಹ ಪರ್ಮಾರ್, ಮನೀಶ್ ಚೌಹಾಣ್ ಮತ್ತು ಸಿ.ಕೆ.ರಾಜೋಲಿ ಬಿಜೆಪಿ ಟಿಕೆಟ್ ಪಡೆದವರು. ಇತ್ತೀಚೆಗೆ ಮುಕ್ತಾಯವಾದ ರಾಜ್ಯಸಭೆ ಚುನಾವಣೆಯಲ್ಲಿ ಈ ನಾಯಕರು ಕಾಂಗ್ರೆಸ್‌ನ ವಿಪ್ ಉಲ್ಲಂ ಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮೊದಲ ಹಂತದ ಪಟ್ಟಿಗೆ ಅನುಮೋದನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.