Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
ಎಡ್ವಿನಾ ಮೌಂಟ್ ಬ್ಯಾಟನ್ ರೊಂದಿಗೆ ಪತ್ರ ವ್ಯವಹಾರ...ಇತಿಹಾಸಕಾರ ರಿಜ್ವಾನ್ ಕಾದ್ರಿ ಆರೋಪವೇನು?
Team Udayavani, Dec 16, 2024, 7:05 PM IST
ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪತ್ರವ್ಯವಹಾರಗಳನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ಸೋಮವಾರ(ಡಿ16) ಒತ್ತಾಯಿಸಿ, ”ಐತಿಹಾಸಿಕ ದಾಖಲೆಗಳು ದೇಶಕ್ಕೆ ಸೇರಿದ್ದು, ಅವು ಯಾರ ವೈಯಕ್ತಿಕ ಆಸ್ತಿ ಅಲ್ಲ”ಎಂದು ಹೇಳಿದೆ.
ಬಿಜೆಪಿ ಸಂಸದ ಮತ್ತು ವಕ್ತಾರ ಸಂಬಿತ್ ಪಾತ್ರ ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (PMML) ಚರ್ಚೆಯ ವರದಿಗಳನ್ನು ಉಲ್ಲೇಖಿಸಿ, ನೆಹರೂ ಅವರು ಭಾರತಕ್ಕೆ ಕೊನೆಯ ಬ್ರಿಟಿಷ್ ವೈಸ್‌ರಾಯ್ ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ , ಖ್ಯಾತ ನಾಯಕರಾದ ಜಯಪ್ರಕಾಶ್ ನಾರಾಯಣ್ ಮತ್ತು ಜಗಜೀವನ್ ರಾಮ್ ಅವರೊಂದಿಗೆ ಪತ್ರವ್ಯವಹಾರಗಳನ್ನು ಮಾಡಿದ್ದಾರೆ. ಅವುಗಳನ್ನು ಹಿಂದಿನ ನೆಹರೂ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ 2008 ರಲ್ಲಿ ಸೋನಿಯಾ ಗಾಂಧಿಗೆ ಹಿಂದಿರುಗಿಸಿತು’ ಎಂದು ಹೇಳಿದ್ದಾರೆ.
ಕಾದ್ರಿ ಆರೋಪ
ನೆಹರೂ ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಮರಳಿ ಪಡೆಯಲು ಪ್ರಧಾನ ಮಂತ್ರಿಗಳ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಗೆ ಸಹಾಯ ಮಾಡುವಂತೆ ಇತಿಹಾಸಕಾರ ರಿಜ್ವಾನ್ ಕಾದ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ವಿನಂತಿ ಮಾಡಿದ್ದಾರೆ.
2008ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಆ ದಾಖಲೆಗಳನ್ನು ಗ್ರಂಥಾಲಯದಿಂದ ತೆಗೆಯಲಾಗಿತ್ತು ಎಂದು ಕಾದ್ರಿ ಆರೋಪಿಸಿದ್ದಾರೆ.
‘2008ರಲ್ಲಿ ಸೋನಿಯಾ ಗಾಂಧಿಯವರ ಆದೇಶದ ಮೇರೆಗೆ ಲೈಬ್ರರಿಯಲ್ಲಿದ್ದ 51 ಬಾಕ್ಸ್ ಗಳನ್ನು ತೆಗೆಯಲಾಗಿತ್ತು. ಈ ದಾಖಲೆಗಳು ಮೂಲತಃ ನಮ್ಮ ಮಾಜಿ ಪ್ರಧಾನಿ ನೆಹರೂ ರವರ ಅಧಿಕೃತ ಮತ್ತು ವೈಯಕ್ತಿಕ ಪತ್ರವ್ಯವಹಾರಗಳನ್ನು ಒಳಗೊಂಡಿರುವ ಪತ್ರಿಕೆಗಳ ಸಂಗ್ರಹದ ಭಾಗವಾಗಿತ್ತು. ಈ ದಾಖಲೆಗಳು ಈಗ ಆ ಸಂಗ್ರಹದಿಂದ ಕಾಣೆಯಾಗಿವೆ’ ಎಂದು ಹೇಳಿದ್ದಾರೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನೆಹರೂ ವಸ್ತುಸಂಗ್ರಹಾಲಯವನ್ನು ಎಲ್ಲಾ ಪ್ರಧಾನ ಮಂತ್ರಿಗಳ ಸ್ಮರಣಿಕೆಗಳನ್ನು ಇಡಲು ವಿಸ್ತರಿಸಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಯಿತು.
ಇದನ್ನೂ ಓದಿ : PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್ ಗೆ ಕೇಂದ್ರದ ಪತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
MUST WATCH
ಹೊಸ ಸೇರ್ಪಡೆ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
ಸ್ಪೀಕರ್, ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಭಾಪತಿ ಹೊರಟ್ಟಿ
ಕೆಕೆಆರ್‌ಡಿಬಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಮಾತ್ರ ಅವಕಾಶ: ಪ್ರತಿಪಕ್ಷ ಸದಸ್ಯರ ಬೇಸರ
Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.