ರಫೇಲ್ : ರಾಹುಲ್ ಗಾಂಧಿ ಒಬ್ಬ ಸರಣಿ ಸುಳ್ಳುಗಾರ: ಬಿಜೆಪಿ ಆರೋಪ
Team Udayavani, Oct 12, 2018, 4:52 PM IST
ಹೊಸದಿಲ್ಲಿ : ”ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಸರಣಿ ಸುಳ್ಳುಗಾರ; ರಫೇಲ್ ಡೀಲ್ ವಿಷಯದಲ್ಲಿ ಫ್ರೆಂಚ್ ಮಾಧ್ಯಮ ವರದಿಗಳನ್ನು ತಿರುಚಲು ಯತ್ನಿಸುತ್ತಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.
“ಈಚಿನ ದಿನಗಳಲ್ಲಿ ನಾವು ಒಬ್ಬ ಸರಣಿ ಸುಳ್ಳುಗಾರನ ಚಟುವಟಿಕೆಗಳನ್ನು ಕಾಣುತ್ತಿದ್ದೇವೆ; ಒಬ್ಬ ಮನುಷ್ಯ ಪದೇ ಪದೇ ಒಂದೇ ವಿಷಯವನ್ನು ಪುನರುಚ್ಚರಿಸುತ್ತಾನೆಂದರೆ ಆತನ ಬಳಿ ಬೇರೆ ಯಾವುದೇ ವಿಷಯ ಇಲ್ಲ ಎಂದರ್ಥ; ರಾಹುಲ್ ಗಾಂಧಿ 1,000 ಬಾರಿ ಸುಳ್ಳನ್ನು ಪುನರುಚ್ಚರಿಸಿದರೂ ರಫೇಲ್ ಸತ್ಯವನ್ನು ಆತನಿಂದ ಬದಲಾಯಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ರೈಲ್ವೇ, ಕಲ್ಲಿದ್ದಲು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾಗಿರುವ ಪಿಯೂಷ್ ಗೋಯಲ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
”2007 ಮತ್ತು 2012ರಲ್ಲಿ ಅಂದಿನ ಯುಪಿಎ ಸರಕಾರ ಒಪ್ಪಿಕೊಂಡದ್ದಕ್ಕಿಂತಲೂ ಅತ್ಯುತ್ತಮ ಬೆಲೆಯಲ್ಲಿ ಎನ್‌ಡಿಎ ಸರಕಾರ ರಫೇಲ್ ವಹಿವಾಟನ್ನು ಅಂತಿಮಗೊಳಿಸಿದೆ. ಈ ವಹಿವಾಟಿನಲ್ಲಿ ನಮಗೆ ಶೀಘ್ರ ಪೂರೈಕೆ, ದೀರ್ಘ ನಿರ್ವಹಣ ಅವಧಿ, ಬಿಡಿ ಭಾಗಗಳ ಲಭ್ಯತೆ ಮತ್ತು ಅತ್ಯಗತ್ಯ ಇರುವ ರಕ್ಷಣಾ ಸಾಮರ್ಥ್ಯ ಇತ್ಯಾದಿಗಳನ್ನು ನಾವು ಖಾತರಿ ಪಡಿಸಿಕೊಂಡಿದ್ದೇವೆ” ಎಂದು ಗೋಯಲ್ ಹೇಳಿದರು.
”ರಫೇಲ್ ಡೀಲ್ ಅನುಷ್ಠಾನಕ್ಕಾಗಿ ಡಸಾಲ್ಟ್ ಕಂಪೆನಿಯೇ ಭಾರತದಲ್ಲಿ ತನ್ನ ಭಾಗೀದಾರ ಕಂಪೆನಿಯನ್ನು ಆಯ್ಕೆ ಮಾಡಿಕೊಂಡಿದೆ. ರಫೇಲ್ ವಿಷಯದಲ್ಲಿ ಅನೇಕ ಸತ್ಯಗಳನ್ನು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವನ್ನು ತಿರುಚುವ ಯತ್ನದಲ್ಲಿ ತೊಡಗಿದ್ದಾರೆ” ಎಂದು ಗೋಯಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.