ಆರೆಸ್ಸೆಸ್-ಕ್ರೈಸ್ತ ಪ್ರತಿನಿಧಿ ಸಭೆ
Team Udayavani, Mar 5, 2021, 6:55 AM IST
ಕೊಚ್ಚಿ (ಕೇರಳ): ಮಹತ್ವದ ಬೆಳವಣಿಗೆಯೊಂದರಲ್ಲಿ, ಗುರುವಾರ ಕೊಚ್ಚಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಸಾಂಪ್ರದಾಯಿಕ ಕ್ರೈಸ್ತ ಚರ್ಚ್‌ಗಳ ಬಿಷಪ್‌ಗಳ ಸಭೆ ಜರಗಿದೆ.
ಮಲಂಕರ ಆರ್ಥ್ರೋಡಕ್ಸ್ ಸಿರಿಯನ್ ಚರ್ಚ್‌ನ (ಎಂಒಎಸ್‌ಸಿ) ಒಡೆತನದ ಬಗ್ಗೆ ವರ್ಷ ಗಳಿಂದ ವಿವಾದ ಏರ್ಪಟ್ಟಿದ್ದು, ಆ ಹಿನ್ನೆಲೆಯಲ್ಲಿ ಆಥ್ರೋìಡಕ್ಸ್ ಹಾಗೂ ಜಾಕೋಬೈಟ್ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಯಿತು.
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಜಾಕೋಬೈಟ್ಸ್ ಗುಂಪಿನ ಮುಖಂಡರು, ಸಮಸ್ಯೆ ಇತ್ಯರ್ಥಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಇತ್ತೀಚೆಗೆ ಮಾತುಕತೆ ನಡೆಸಲಾಗಿತ್ತು. ಗುರುವಾರ ನಡೆದ ಸಭೆ ಅದರ ಮುಂದಿನ ಭಾಗವಾಗಿದೆ ಎಂದರು.
ಮಲಂಕರ ರ್ಥ್ರೋಡಕ್ಸ್‌ಸಿರಿಯನ್ ಚರ್ಚ್‌ನ (ಎಂಒಎಸ್‌ಸಿ) ಬಿಷಪ್ ಗೀವರ್ಗೀಸ್ ಮರ್ ಯುಲಿಯೋಸ್ ಅವರು ಮಾತನಾಡಿ, ಸಭೆಯಲ್ಲಿ ಚುನಾ ವಣ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಹಲ ವಾರು ವರ್ಷಗಳಿಂದ ಇರುವ ಮಲಂಕ್ಕಾರ ಚರ್ಚ್‌ನ ಸಮಸ್ಯೆಯನ್ನು ಸೌಹಾರ್ದ ಯುತವಾಗಿ ಇತ್ಯರ್ಥ ಮಾಡುವ ಸಲುವಾಗಿ ಸಂಧಾನ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ, ಮರ್ ಯುಲಿಯೋಸ್ ಜತೆಗೆ, ಕೊಚ್ಚಿಯ ಬಿಷಪ್ ಯಾಕೂಬ್ ಮರ್ ಇರೆನೈಯಿಸ್ ಕೂಡ ಭಾಗವಹಿಸಿದ್ದರು.
ಶ್ರೀಧರನ್ ಹೆಸರು ಘೋಷಿಸಿಲ್ಲ - ಬಿಜೆಪಿ: ದೇಶದ ಹಲವು ಕಡೆಗಳಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಮೆಟ್ರೊ ಮ್ಯಾನ್ ಎಂದೇ ಖ್ಯಾತರಾಗಿರುವ ಇ. ಶ್ರೀಧರನ್ ಅವರನ್ನು ಬಿಜೆಪಿ ಕೇರಳದಲ್ಲಿ ತನ್ನ ಮುಖ್ಯ ಮಂತ್ರಿ ಅಭ್ಯರ್ಥಿ ಯೆಂದು ಘೋಷಿಸಿದೆ ಎಂದು ಕೆಲವು ಮಾಧ್ಯಮ ವರದಿಗಳನ್ನು ಬಿಜೆಪಿ ಅಲ್ಲಗಳೆದಿದೆ.
ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್, ಶ್ರೀಧರನ್ ಅವರನ್ನು ಬಿಜೆಪಿಯ ಸಿಎಂ ಅಭ್ಯರ್ಥಿಯನ್ನಾಗಿ ಇನ್ನೂ ಘೋಷಿಸಿಲ್ಲ. ಈ ಕುರಿತಂತೆ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ, ಅಭಿವೃದ್ಧಿ ಆಧಾರದಲ್ಲಿ ಮತಕೇಳಲು ಮುಂದಡಿ ಯಿಟ್ಟಿದೆ. ದಿಲ್ಲಿ, ಉತ್ತರ ಪ್ರದೇಶ, ಕೇರಳದಲ್ಲಿ ಶ್ರೀಧರನ್ ಮಾರ್ಗ ದರ್ಶನ ದಡಿಯಲ್ಲೇ ಮೆಟ್ರೋ ಯೋಜನೆ ಗಳನ್ನು ಸಾಕಾರ ಗೊಳಿಸಲಾಗಿದೆ. 88 ವರ್ಷದ ಅವರು ಫೆ.25ರಂದು ಬಿಜೆಪಿಗೆ ಸೇರ್ಪಡೆ ಯಾಗಿದ್ದರು. ಅವರ ನೇತೃತ್ವದಲ್ಲಿ 140 ವಿಧಾನಸಭಾ ಕ್ಷೇತ್ರಗಳ ಕೇರಳ ಚುನಾವಣೆ ಯನ್ನು ಬಿಜೆಪಿ ಎದುರಿ ಸಲಿದೆ. ಎ.6ರಂದು ಅಲ್ಲಿ ಚುನಾವಣೆ ನಡೆಯಲಿದೆ. ಮೇ 2ಕ್ಕೆ ಮತ ಎಣಿಕೆ ನಡೆಯಲಿದೆ. ಪ್ರಸ್ತುತ ಕೇರಳ ಎಡಪಕ್ಷ ಮತ್ತು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅದನ್ನು ಭೇದಿಸಲು ಬಿಜೆಪಿ ಸಂಕಲ್ಪ ಮಾಡಿದೆ.
200ಕ್ಕೂ ಹೆಚ್ಚು ಸೀಟು ಗೆಲ್ತೇವೆ - ತೇಜಸ್ವಿ ವಿಶ್ವಾಸ : ಈ ಬಾರಿಯ ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿ ದ್ದಾರೆ. “ಮೇ 3ರಂದು ಪಶ್ಚಿಮ ಬಂಗಾಲ ಬಿಜೆಪಿ ಮುಖ್ಯಮಂತ್ರಿಯನ್ನು ನೋಡಲಿದೆ’ ಎಂದಿದ್ದಾರೆ.
ಮಮತಾ-ಸುವೇಂದು ನೇರ ಸ್ಪರ್ಧೆ?: ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸಲಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಅವರ ವಿರುದ್ಧ ಬಿಜೆಪಿಯಿಂದ ಸುವೇಂದು ಅಧಿಕಾರಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಶ್ಚಿಮ ಬಂಗಾಲದ ಬಿಜೆಪಿ ಅಧ್ಯಕ್ಷ ದಿಲೀಪ್ ತಿಳಿಸಿದ್ದಾರೆ.
ಬಂಗಾಲದ ಉಪ ಚುನಾವಣಾಧಿಕಾರಿ ಸಂದೀಪ್ ಜೈನ್ ಅವರನ್ನು ತೆರವುಗೊಳಿಸುವಂತೆ ತೃಣಮೂಲ ಕಾಂಗ್ರೆಸ್ ಕೇಂದ್ರ ಚುನಾವಣ ಆಯೋಗವನ್ನು ಆಗ್ರಹಿಸಿದೆ.
ಸ್ಕ್ವಾಟ್ ಮಾಡಿದ ಬಿಜೆಪಿ ನಾಯಕ!: ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸುಶಾಂತ ಪಾಲ್ ಅವರು, ತಮ್ಮ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ವೇದಿಕೆಯ ಮೇಲೆ ಸ್ಕ್ವಾಟ್ ವ್ಯಾಯಾಮ ಮಾಡಿ ಗಮನ ಸೆಳೆದಿದ್ದಾರೆ. ಪಬೋì ಮೇದಿನಿ ಪುರ್‌ನಲ್ಲಿ ಆಯೋ ಜಿ ಸಲಾಗಿದ್ದ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ಸೇರ್ಪಡೆ ಗೊಂಡಿದ್ದಕ್ಕೆ ಸೂಚ್ಯವಾಗಿ ಅವರಿಗೆ ಬಿಜೆಪಿ ಪಕ್ಷದ ಬಾವುಟ ನೀಡಲಾಯಿತು. ತತ್‌ಕ್ಷಣವೇ ಅವರು, ವೇದಿಕೆಯಲ್ಲೇ ಸ್ಕ್ವಾಟ್ ವ್ಯಾಯಾಮ ಮಾಡಿ ಗಮನ ಎಲ್ಲರ ಗಮನ ಸೆಳೆದಿದ್ದಾರೆ.
“ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ’ ;
ಅಸ್ಸಾಂನಲ್ಲಿ ತಾನು ಅಧಿಕಾರಕ್ಕೆ ಬಂದರೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ (ಮಹಾಜೋತ್) ಅಲ್ಲಿನ ಮತದಾರರಿಗೆ ವಾಗ್ಧಾನ ನೀಡಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅಸ್ಸಾಂ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಸುಷ್ಮಿತಾ ದೇವ್, ಮೀಸಲಾತಿ ನೀಡುವ ಮೂಲಕ ನಾವು ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ತಿಳಿಸಿದರು.
ಶಶಿಕಲಾ ನಿರ್ಗಮನದಿಂದ ಅನುಕೂಲ: ಸಿಟಿ ರವಿ :
ತಮಿಳುನಾಡು ರಾಜಕೀಯದಿಂದ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಅವರು ನಿರ್ಗಮಿಸಿರುವುದು ಎಐಎಡಿಎಂಕೆಗೆ ಅನುಕೂಲವಾಗಿದೆ ಎಂದು ತಮಿಳುನಾಡು ಉಸ್ತುವಾರಿ ಸಿ.ಟಿ. ರವಿ ತಿಳಿಸಿದ್ದಾರೆ.
ಶಶಿಕಲಾ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ತಮಿಳುನಾಡಿನಲ್ಲಿ ಎನ್‌ಡಿಎಯನ್ನು ಭದ್ರವಾಗಿ ಬೇರೂರಿಸಲು ಬಿಜೆಪಿ ನಿರ್ಧರಿಸಿದೆ. ಡಿಎಂಕೆ ಸೋಲಿಸುವುದೇ ನಮ್ಮ ಗುರಿ. ಅದಕ್ಕಾಗಿ ಪ್ರಯತ್ನ ನಡೆಸಿದ್ದು, 234 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಜಯಭೇರಿ ಸಾಧಿಸಲೆಂಬ ಆಶಯವಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.