ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗ ಸೂತ್ರ
Team Udayavani, Jul 27, 2021, 7:20 AM IST
ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಆಯ್ಕೆಯಲ್ಲಿ ವರಿಷ್ಠರು ಯುವಕರಿಗೆ ಆದ್ಯತೆ ನೀಡಬಹುದೇ? ಇತರ ರಾಜ್ಯಗಳಲ್ಲಿ ನಡೆಸಲಾಗಿರುವ ಪ್ರಯೋಗ ಗಂಧದ ಗುಡಿಯಲ್ಲಿ ನಡೆದೀತೆ? ಬಿಜೆಪಿಯ ಮುಖ್ಯಮಂತ್ರಿ ಪ್ರಯೋಗದತ್ತ ಒಂದು ನೋಟ.
ಉತ್ತರ ಪ್ರದೇಶ :
2017ರ ಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ಡಾ|ಮಹೇಶ್ ಶರ್ಮಾ, ಸಂತೋಷ್ ಗಂಗ್ವಾರ್, ಕೇಶವ ಮೌರ್ಯ,ಮನೋಜ್ ಸಿನ್ಹಾ ನಡುವೆ ಸ್ಪರ್ಧೆಯಿತ್ತು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎಚ್ಚರಿಕೆಯ ಹೆಜ್ಜೆ ಇರಿಸಿ, ಅಚ್ಚರಿಯ ಆಯ್ಕೆ ಪ್ರಕಟಿಸಿದ್ದರು. ಗೋರಖ್‌ಪುರದ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ್ದರು. ಇತ್ತೀಚೆಗೆ ಹಲವು ಬೆಳವಣಿಗೆಗಳು ನಡೆದಿದ್ದರೂ, ನಾಯಕತ್ವ ಬದಲಾವಣೆ ಮಾಡುವ ಅಗತ್ಯ ಬಂದಿಲ್ಲ.
ಗೋವಾ :
2017ರಲ್ಲಿ ಬಿಜೆಪಿ ಅಧಿಕಾರ ಉಳಿಸಿ ಕೊಂಡ ನಂತರ ಅಲ್ಲಿ ಸಿಎಂ ಆಗಿದ್ದು ಮನೋಹರ ಪರ್ರಿಕರ್. ಅವರ ನಿಧನದ ಬಳಿಕ ಸಾಂಕ್ವೇಲಿಮ್ ಶಾಸಕ ಡಾ|ಪ್ರಮೋದ್ ಸಾವಂತ್‌ರನ್ನು ಸಿಎಂ ಆಗಿ ಆಯ್ಕೆ ಮಾಡ ಲಾ ಯಿತು. ಜು.17ರಂದು ಪಣಜಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಿಎಂ ಸಾವಂತ್ ಆಡಳಿತ ಮೆಚ್ಚಿದ್ದರು. ಜತೆಗೆ ಅವರೇ ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದು ಹೇಳಿದ್ದನ್ನು ಸ್ಮರಿಸಬಹುದು.
ತ್ರಿಪುರಾ ವಿಧಾನಸಭೆ :
ಈಶಾನ್ಯ ರಾಜ್ಯದಲ್ಲಿ 20 ವರ್ಷಗಳಿಂದ ಅಧಿಕಾರದಲ್ಲಿದ್ದ ಸಿಪಿಎಂ ಆಡಳಿತವನ್ನು 2018ರಲ್ಲಿ ಕೊನೆಗೊಳಿಸಿದ್ದ ಬಿಜೆಪಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಸಿಎಂ ಮಾಡಿತ್ತು. 2016ರಲ್ಲೇ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿಸಲಾಗಿತ್ತು. ಅವರ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆ ಎದುರಿಸಿ, ಜಯಗಳಿಸಲಾಗಿತ್ತು. ಎರಡು ಬಾರಿ ಅವರು ತಮ್ಮ ನಿರ್ಧಾರಗಳಿಂದ ವಿವಾದಕ್ಕೆ ಒಳಗಾಗಿದ್ದರೂ, ಪಕ್ಷದ ಶಾಸಕರಿಂದಲೇ ಭಿನ್ನಮತ ಎದುರಿಸಲಿಲ್ಲ.
ಉತ್ತರಾಖಂಡ :
2 ಸಾವಿರನೇ ಇಸ್ವಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ರಾಜ್ಯದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಹಾಲಿ ಅವಧಿಯಲ್ಲಿ 3ನೇ ಮುಖ್ಯಮಂತ್ರಿ ಯನ್ನು ರಾಜ್ಯ ಕಾಣುತ್ತಿದೆ. ಮೊದಲ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮಾ.10ರಂದು ರಾಜೀನಾಮೆ ನೀಡಿದ್ದರು. ಅವರ ಅನಂತರ ತೀರಥ್ ಸಿಂಗ್ ರಾವತ್ ಅಧಿಕಾರ ವಹಿಸಿಕೊಂಡರು. ಈಗ ಪುಷ್ಕರ್ ಸಿಂಗ್ ಧಾಮಿ ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.
ಮಹಾರಾಷ್ಟ್ರ :
2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ದೇವೇಂದ್ರ ಫಡ್ನವೀಸ್‌ರನ್ನು ಆಯ್ಕೆ ಮಾಡಲಾಗಿತ್ತು. “ಮೈತ್ರಿ ಚತುರ’ ಹೆಗ್ಗಳಿಕೆಗೆಯ ಇವರು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಯಶ ಸ್ವಿ ಸಿಎಂ ಎನಿಸಿದ್ದಾರೆ. ಮರಾಠ ಸಮುದಾಯದವರೇ ಹೆಚ್ಚಾಗಿರುವ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಫಡ್ನವೀಸ್ ಮೊದಲ ಹಂತದಲ್ಲೇ ಸಫ ಲ ರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.