ರಾಜಸ್ಥಾನದಲ್ಲಿ ಬಿಜೆಪಿ ಮತ್ತೂಮ್ಮೆ ಕ್ಲೀನ್ ಸ್ವೀಪ್
Team Udayavani, May 24, 2019, 12:30 PM IST
ಕೆಲವೇ ತಿಂಗಳುಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಸೋತು, ಕಾಂಗ್ರೆಸ್ ಅಧಿಕಾರ ಹಸ್ತಾಂತರಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರು ಬಿಜೆಪಿ ಕೈಬಿಡಲಿಲ್ಲ.
ಕಳೆದ ಲೋಕಸಭೆ ಚುನಾವಣೆಯಂತೆಯೇ ಈ ಬಾರಿಯೂ 25 ಕ್ಕೆ 25 ಕ್ಷೇತ್ರದಲ್ಲೂ ಜನರು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಚುನಾವಣೆ ವೇಳೆ ಮೋದಿ ಬಿಟ್ಟು ಇನ್ಯಾರೂ ಇಲ್ಲ, ವಸುಂಧರಾ ಪರಿವೆ ಇಲ್ಲ ಎಂಬ ಘೋಷಣೆ ಜನರಲ್ಲಿ ಭಾರಿ ಪ್ರಚಾರವಾಗಿತ್ತು. ಜನರಿಗೆ ಬಿಜೆಪಿ ನಾಯಕಿ ವಸುಂಧರಾ ರಾಜೆ ವಿರುದ್ಧ ಸಿಟ್ಟಿದೆ . ಆದರೆ ಮೋದಿ ವಿರುದ್ಧ ಸಿಟ್ಟಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.
ಇನ್ನೊಂದೆಡೆ ಚುನಾವಣೆಗೂ ಸ್ವಲ್ಪ ದಿನ ಮೊದಲು ಭಾರಿ ಚರ್ಚೆಗೀಡಾದ ಅಲ್ವಾರ್ ಗ್ಯಾಂಗ್‌ರೇಪ್ ಪ್ರಕರಣವೂ ಕಾಂಗ್ರೆಸ್ ಕಾಂಗ್ರೆಸ್ ವಿರುದ್ಧ ಜನರು ಮತ ಹಾಕುವಂತೆ ಪ್ರೇರೇಪಿಸಿತು.
ಇನ್ನು ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಮನಸ್ತಾಪಗಳೂ ಜನರು ಈ ತೀರ್ಮಾನ ಮಾಡಲು ಕಾರಣವಾಗಿದೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಸಿಎಂ ಅಶೋಕ್ ಗೆಹಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಭಾರಿ ತಿಕ್ಕಾಟ ನಡೆದಿದ್ದು, ಇದು ಆಗಾಗ ಬಹಿರಂಗವೂ ಆಗುತ್ತಿದೆ. ಇದರಿಂದ ಅಸ್ಥಿರ ಸರ್ಕಾರದ ಭಾವ ಜನರಲ್ಲಿ ಮೂಡಿದೆ. ಹೀಗಾಗಿ ಅವರು ಸ್ಥಿರ ಸರ್ಕಾರದತ್ತ ಮತ ಹಾಕಿದ್ದಾರೆ.
ಗೆದ್ದ ಪ್ರಮುಖರು
ದುಷ್ಯಂತ್ ಸಿಂಗ್ (ಬಿಜೆಪಿ), ಝಲಾವರ್
ರಾಜ್ಯವರ್ಧನ್ ಸಿಂಗ್ (ಬಿಜೆಪಿ), ಜೈಪುರ ಗ್ರಾ
ಅರ್ಜುನ್ ಮೇಘಾಲ್, ಬಿಕಾನೇರ್
ಸೋತ ಪ್ರಮುಖರು
ವೈಭವ್ ಗೆಹಲೋಟ್, ಜೋಧ್‌ಪುರ
ಮಾನವೇಂದ್ರ ಸಿಂಗ್ (ಕಾಂ), ಬಾರ್ಮರ್
ಕೃಷ್ಣಾ ಪೂನಿಯಾ (ಕಾಂ), ಜೈಪುರ ಗ್ರಾ.
ಜೈಪುರ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ನಾನು ಕ್ಷೇತ್ರದ ಜನರೊಂದಿಗೆ ಕುಳಿತು ಯೋಜನೆ ರೂಪಿಸಿದ್ದೇನೆ. ಇದನ್ನು ಜಾರಿಗೆ ತರಲು ನಾನು ಯತ್ನಿಸುತ್ತೇನೆ.
ರಾಜ್ಯವರ್ಧನ್ ಸಿಂಗ್, ಕೇಂದ್ರ ಸಚಿವ
ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ಮೋದಿ ಅಲೆಯನ್ನು ನಾವು ಗಮನಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಸರ್ಕಾರವು ನೀಡಿದ ಭರವಸೆಗಳನ್ನು ಪೂರೈಸಿದೆ.
ವಸುಂಧರಾ ರಾಜೆ, ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.