Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ
Team Udayavani, May 22, 2024, 5:46 AM IST
ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 370 ಕ್ಷೇತ್ರಗಳಲ್ಲಿ ಜಯಸಾಧಿಸಲು ಬಿಜೆಪಿಗೆ ಸಾಧ್ಯವಿಲ್ಲವಾದರೂ, 300 ಕ್ಷೇತ್ರಗಳಲ್ಲಂತೂ ಜಯ ಗಳಿಸುವುದು ನಿಶ್ಚಿತ ಎಂದು ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಜತೆಗೆ ದೇಶದಲ್ಲಿ ಪ್ರಧಾನಿ ಮೋದಿ ವಿರುದ್ಧದ ವ್ಯಾಪಕ ಅಲೆಯೂ ಇಲ್ಲ ಹೀಗಾಗಿ ಮೋದಿ ಸರ್ಕಾರ ಮತ್ತೂಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿದ್ದಾರೆ.
ಇಂಡಿಯಾ ಟು ಡೇ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಪ್ರಶಾಂತ್, ಬಿಜೆಪಿ ತನ್ನ ಗೆಲುವಿನ ಗುರಿಯನ್ನು ಹೆಚ್ಚಿಸಿಕೊಂಡು 370ಕ್ಕೆ ನಿಗದಿ ಪಡಿಸಿಕೊಂಡಿರುವುದು ಉತ್ತಮ ಕಾರ್ಯತಂತ್ರ. 2019ರಲ್ಲಿ 303 ಸ್ಥಾನಗಳನ್ನು ಪಡೆದಿದ್ದ ಬಿಜೆಪಿಗೆ 250 ಸ್ಥಾನಗಳಲ್ಲಿ ಗೆಲುವು ದೊರೆತಿದ್ದು, ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಈ ಬಾರಿಯೂ ಹೆಚ್ಚು ಕ್ಷೇತ್ರಗಳು ಬಿಜೆಪಿಯ ಕೈ ಜಾರಿಲ್ಲ. ಬದಲಿಗೆ ಪೂರ್ವ ಮತ್ತು ದಕ್ಷಿಣದಲ್ಲಿ 50 ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ಅವುಗಳನ್ನು 15ರಿಂದ 20ರವರೆಗೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.