ದಲಿತನ ವರಿಸಿದ್ದಕ್ಕೆ ಹತ್ಯೆಯತ್ನ
ಉ.ಪ್ರ. ಶಾಸಕರ ಪುತ್ರಿಯ ವಿಡಿಯೋ ವೈರಲ್
Team Udayavani, Jul 12, 2019, 5:00 AM IST
ಲಕ್ನೋ: ದಲಿತ ಯುವಕನನ್ನು ವಿವಾಹವಾದ ಕಾರಣಕ್ಕೆ ನಮ್ಮನ್ನು ಕೊಲ್ಲಲು ನನ್ನ ತಂದೆಯೇ ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ (23) ಆರೋಪಿಸಿದ್ದಾರೆ. ಅಜಿತೇಶ್ ಕುಮಾರ್ (29) ಎಂಬುವರ ಜತೆಗೆ ವಿವಾಹವಾಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದು, ತಮಗೆ ಜೀವ ಬೆದರಿಕೆಯಿದೆ ಎಂಬ ಅಂಶವನ್ನೂ ಬಹಿರಂಗಪಡಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ದಂಪತಿಯು ಪೊಲೀಸ್ ರಕ್ಷಣೆ ಕೇಳುವುದರ ಜೊತೆಗೆ, ಅಲಹಾಬಾದ್ ಹೈಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಿದ್ದಾರೆ. ‘ನಮ್ಮನ್ನು ಶಾಂತಿಯುತವಾಗಿ ಜೀವಿಸಲು ಬಿಡಿ. ಸ್ವಇಚ್ಛೆಯಿಂದ ಅಜಿತೇಶ್ ಕುಮಾರ್ ಜತೆಗೆ ವಿವಾಹವಾಗಿದ್ದೇನೆ. ತಂದೆ ಗೂಂಡಾಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಅವರಿಂದ ಓಡಿ ಬಸವಳಿದಿದ್ದೇನೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾಳೆ.
ಪುತ್ರಿಯ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್ ಮಿಶ್ರಾ ‘ನಾನಾಗಲಿ, ಕುಟುಂಬದ ಸದಸ್ಯರಾಗಲಿ ಪುತ್ರಿಯ ನಿರ್ಧಾರಕ್ಕೆ ಅಡ್ಡಿ ಬಂದಿಲ್ಲ. ವಿವಾಹವಾಗಿರುವ ಯುವಕನು ನನ್ನ ಮಗಳಿಗಿಂತ 9 ವರ್ಷ ದೊಡ್ಡವನು. ಅಲ್ಲದೆ, ಅವನಿಗೆ ಸರಿಯಾದ ಆದಾಯವೂ ಇಲ್ಲ. ಇದಷ್ಟೇ ನಮ್ಮ ಅಸಮಾಧಾನಕ್ಕೆ ಕಾರಣ. ಪ್ರಾಪ್ತ ವಯಸ್ಕಳಾಗಿರುವ ಅವಳು ನಿರ್ಧಾರ ಕೈಗೊಳ್ಳಲು ಸ್ವತಂತ್ರಳು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಸೂಚನೆ ನೀಡಿದ್ದೇನೆ. ‘ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.