ಜ್ಯೋತಿರಾದಿತ್ಯಗೆ ಗುಂಡಿಕ್ಕಿ ಕೊಲ್ಲುವೆ: BJP ಶಾಸಕಿ ಪುತ್ರನ ಧಮ್ಕಿ
Team Udayavani, Sep 3, 2018, 3:56 PM IST
ಹೊಸದಿಲ್ಲಿ : ಬಿಜೆಪಿ ಶಾಸಕಿ ಉಮಾ ದೇವಿ ಖತಿಕ್ ಅವರ ಪುತ್ರ ಪ್ರಿನ್ಸ್ ದೀಪ್ ಲಾಲ್ಚಂದ್ ಅವರು ಇಂದು ಸೋಮವಾರ ತಮ್ಮ ಸಾಮಾಜಿಕ ಮಾದ್ಯಮ ಪೋಸ್ಟ್ ಒಂದರಲ್ಲಿ ತಾನು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ.
ಲಾಲ್ಚಂದ್ ಖತಿಕ್ ಅವರು ಫೇಸ್ ಬುಕ್ ಪೋಸ್ಟ್ನಲ್ಲಿ ಹೀಗೆ ಬರೆದಿದ್ದಾರೆ : “ಜ್ಯೋತಿರಾದಿತ್ಯ ಸಿಂದಿಯಾ; ನಿಮ್ಮ ಧಮನಿಯಲ್ಲಿ ಝಾನ್ಸಿ ಕೀ ರಾಣಿಯನ್ನು ಕೊಂದ ಜಿವಾಜಿರಾವ್ ನ ರಕ್ತ ಹರಿಯುತ್ತಿದೆ; ಒಂದೊಮ್ಮೆ ನೀವು ಹತ್ತಾ ಜಿಲ್ಲೆ ಪ್ರವೇಶಿಸಿದರೆ ನಾನು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತೇನೆ; ಒಂದೋ ನೀವು ಸಾಯಬೇಕು, ಇಲ್ಲವೇ ನಾನು ಸಾಯಬೇಕು’.
ಜ್ಯೋತಿರಾದಿತ್ಯ ಸಿಂದಿಯಾ ಅವರು ಇದೇ ಸೆ.5ರಂದು ಹತ್ತಾ ಜಿಲ್ಲೆಗೆ ಭೇಟಿ ನೀಡಿ ಅಲ್ಲಿ ಚುನಾವಣಾ ಪ್ರಚಾರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಅದಕ್ಕೆ ಮೊದಲೇ ಈಗ ಬಿಜೆಪಿ ಶಾಸಕಿಯ ಪುತ್ರನಿಂದ ಅವರಿಗೆ ಕೊಲೆ ಬೆದರಿಕೆ ಬಂದಿದೆ.
“ಇದೊಂದು ದುರದೃಷ್ಟಕರ ಪೋಸ್ಟ್, ಅದನ್ನು ತೆಗೆದು ಹಾಕುವಂತೆ ನಾನು ನನ್ನ ಮಗನಿಗೆ ಹೇಳುತ್ತೇನೆ’ ಎಂದು ಮಧ್ಯ ಪ್ರದೇಶದ ಹತ್ತಾ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿ ಉಮಾ ದೇವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.