![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Feb 18, 2024, 4:23 PM IST
ಹೊಸದಿಲ್ಲಿ: ಮೂರನೇ ಅವಧಿಯನ್ನು ನಾನು ಅಧಿಕಾರ ಅನುಭವಿಸಲು ಕೇಳುತ್ತಿಲ್ಲ.ನನ್ನ ಮನೆಯ ಬಗ್ಗೆ ಯೋಚಿಸಿದ್ದರೆ ಕೋಟಿ ಕೋಟಿ ಬಡವರಿಗೆ ಮನೆ ಕಟ್ಟುತ್ತಿರಲಿಲ್ಲ. ಬಡ ಮಕ್ಕಳ ಭವಿಷ್ಯಕ್ಕಾಗಿ ಬದುಕುತ್ತಿದ್ದೇನೆ. ಕೋಟಿಗಟ್ಟಲೆ ಮಹಿಳೆಯರು, ಬಡವರು ಮತ್ತು ಯುವಕರ ಕನಸು ನನ್ನ ಸಂಕಲ್ಪವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಭಾರತ್ ಮಂಟಪ ದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ”ನೀವು ತುಂಬಾ ಸಾಧಿಸಿದ್ದೀರಿ, ಎಲ್ಲಾ ಪ್ರಮುಖ ಭರವಸೆಗಳನ್ನು ಈಡೇರಿಸಿದ್ದೀರಿ, ನೀವು ಇನ್ನೂ ಏಕೆ ಹೆಚ್ಚು ಕೆಲಸ ಮಾಡುತ್ತಿದ್ದೀರಿ? ಎಂದು ಜನರು ನನಗೆ ಹೇಳುತ್ತಲೇ ಇರುತ್ತಾರೆ. ನಿಷ್ಕಳಂಕ 10 ವರ್ಷಗಳ ಅವಧಿಯನ್ನು ಹೊಂದುವುದು ಮತ್ತು 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರುವುದು ಸರಳವಾದ ಕೆಲಸವಲ್ಲ ಎಂದು ಇಡೀ ದೇಶ ನಂಬುತ್ತದೆ” ಎಂದರು.
”ನಾವು ರಾಜನೀತಿಗಾಗಿ ಆಡಳಿತದಲ್ಲಿಲ್ಲ, ರಾಷ್ಟ್ರ ನೀತಿಗಾಗಿ ಆಡಳಿತ ಮಾಡುತ್ತಿದ್ದೇವೆ. ದಶಕಗಳಿಂದ ಬಾಕಿ ಉಳಿದಿದ್ದ ಕಾಮಗಾರಿಗಳನ್ನು ಪರಿಹರಿಸಲು ನಾವು ಧೈರ್ಯ ತೋರಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ಮೂಲಕ ನಾವು 5 ಶತಮಾನಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದೇವೆ” ಎಂದರು.
”ಈಗ ದೇಶದ ಕನಸು ಮತ್ತು ಸಂಕಲ್ಪ ದೊಡ್ಡದಾಗುತ್ತದೆ. ನಮ್ಮ ಕನಸು ಮತ್ತು ಸಂಕಲ್ಪವೆಂದರೆ ನಾವು ವಿಕಸಿತ ಭಾರತ ಮಾಡಬೇಕು ಮತ್ತು ಮುಂದಿನ 5 ವರ್ಷಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂದಿನ 5 ವರ್ಷಗಳಲ್ಲಿ, ನಾವು ವಿಕಸಿತ ಭಾರತ ಕಡೆಗೆ ದೈತ್ಯ ಜಿಗಿತವನ್ನು ತೆಗೆದುಕೊಳ್ಳಬೇಕಾಗಿದೆ” ಎಂದರು.
ಬಿಜೆಪಿ ಕಾರ್ಯಕರ್ತರು ವರ್ಷವೀಡೀ , ದಿನದ 24 ಗಂಟೆಗಳ ಕಾಲ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸುತ್ತಾರೆ. ಆದರೆ ಈಗ ಮುಂದಿನ 100 ದಿನಗಳು ಹೊಸ ಉತ್ಸಾಹ ಮತ್ತು ಹೊಸ ನಂಬಿಕೆಯೊಂದಿಗೆ ಕೆಲಸ ಮಾಡಬೇಕು. ಇಂದು ಫೆಬ್ರವರಿ 18, ಈ ಅವಧಿಯಲ್ಲಿ 18 ವರ್ಷಗಳ ಮೈಲಿಗಲ್ಲನ್ನು ತಲುಪಿರುವ ಯುವಕರು ದೇಶದ 18ನೇ ಲೋಕಸಭೆಯನ್ನು ಆಯ್ಕೆ ಮಾಡಲಿದ್ದಾರೆ” ಎಂದರು.
ಇಂದು, ನಾನು ಆಚಾರ್ಯ ಶ್ರೀ 108 ವಿದ್ಯಾಸಾಗರ ಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ಅವರ ಅಗಲುವಿಕೆಯ ಮಾಹಿತಿ ತಿಳಿದ ನಂತರ ಎಲ್ಲರೂ ತೀವ್ರ ದುಃಖಿತರಾಗಿದ್ದಾರೆ. ನನಗೆ, ಇದು ವೈಯಕ್ತಿಕ ನಷ್ಟವಾಗಿದೆ. ನಾನು ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿ ಮಾರ್ಗದರ್ಶನ ಪಡೆಯುತ್ತಿದ್ದೆ. ಕೊನೆಯ ಬಾರಿಗೆ ನಾನು ಅವರನ್ನು ಭೇಟಿ ಮಾಡಿದಾಗ, ನಾನು ಇನ್ನು ಮುಂದೆ ಅವರ ದರ್ಶನ ಪಡೆಯಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿರಲಿಲ್ಲ” ಎಂದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.