BJP; ರಾಜ್ಯಸಭೆಯಲ್ಲಿ ಬಹುಮತ ಸನಿಹಕ್ಕೆ ಎನ್‌ಡಿಎ
Team Udayavani, Jan 30, 2024, 6:20 AM IST
ಹೊಸದಿಲ್ಲಿ: ಈ ಬಾರಿ ರಾಜ್ಯಸಭೆಯಲ್ಲಿ ಕೇಂದ್ರ ದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಪ್ರಾಪ್ತಿಯಾಗು ತ್ತದೇಯೇ? ಹೀಗೊಂದು ಪ್ರಶ್ನೆ ಮತ್ತೂಮ್ಮೆ ಉದ್ಭವಿಸಿದೆ. ಇತ್ತೀಚೆಗೆ ಮುಕ್ತಾಯವಾಗಿರುವ ಪಂಚ ರಾಜ್ಯಗಳ ಚುನಾವಣೆಯ ಲೆಕ್ಕಾಚಾರ ನೋಡಿದರೆ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಲ 120 ಸ್ಥಾನಗಳ ವರೆಗೆ ವೃದ್ಧಿ ಯಾದರೂ, ಬಹುಮತಕ್ಕೆ 3 ಸ್ಥಾನಗಳ ಕೊರತೆ ಬೀಳಲಿದೆ.
ಎ.2ರಂದು ನಿವೃತ್ತಿಯಾಗಲಿರುವ ರಾಜ್ಯ ಸಭೆಯ 56 ಸಂಸದರ ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಸುವ ಬಗ್ಗೆ ಚುನಾವಣ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಪ್ರಾಪ್ತಿ ಯಾದೀತೇ ಎಂಬ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ.
ಬಿಹಾರದಲ್ಲಿ ಜೆಡಿಯು ಎನ್‌ಡಿಎ ತೆಕ್ಕೆಗೆ ಸೇರ್ಪಡೆ ಆದ ಬಳಿಕ ಆ ಪಕ್ಷದ 5 ಸದಸ್ಯರ ಬೆಂಬಲ ಸರಕಾರಕ್ಕೆ ಹೆಚ್ಚುವರಿಯಾಗಿ ಸಿಕ್ಕಿದಂತಾ ಗಲಿದೆ. ಇದು ತಮಿಳುನಾಡಿನ ಎಐಎಡಿಎಂಕೆಯ 3 ಮಂದಿ ರಾಜ್ಯಸಭೆಯ ಸದಸ್ಯರು ಇಲ್ಲದೇ ಇರುವ ನಷ್ಟವನ್ನು ಭರ್ತಿ ಮಾಡಿಕೊಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಡಿಎಗೆ 114 ಸದಸ್ಯರ ಬೆಂಬಲ ಇದೆ. ಈ ಪೈಕಿ ಬಿಜೆಪಿಗೆ ತನ್ನದೇ ಆಗಿರುವ 93 ಸಂಸದರ ಬೆಂಬಲ ಇದೆ.
ಫೆ.27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 28 ಕ್ಷೇತ್ರಗಳಲ್ಲಿ ಜಯ ಸಾಧಿಸುವುದು ಖಚಿತ. ಏಕೆಂದರೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳೇ ಜಯ ಸಾಧಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ರಾಜ್ಯದಲ್ಲಿ ಒಟ್ಟು 6 ಸ್ಥಾನಗಳು ಇದ್ದು, ಸದ್ಯ ಬಿಜೆಪಿ 3 ಸ್ಥಾನಗಳನ್ನು ಸದ್ಯ ಹೊಂದಿದೆ. ಎನ್‌ಸಿಪಿ, ಕಾಂಗ್ರೆಸ್, ಶಿವಸೇನೆ 1 ಸ್ಥಾನಗಳನ್ನು ಹೊಂದಿದೆ. ಎನ್‌ಸಿಪಿಯಲ್ಲಿನ ಅಜಿತ್ ಪವಾರ್ ಬಣ ಬಿಜೆಪಿಗೆ ಜತೆಗೆ ಇರುವು ದರಿಂದ ಬಿಜೆಪಿ ಅನುಕೂಲವಾಗಿ ಪರಿಣಮಿಸಲಿದೆ. ಬಿಹಾರ, ಮಹಾರಾಷ್ಟ್ರ, ಗುಜರಾತ್‌ಗಳಿಂದ ಎನ್‌ಡಿಎಗೆ 6 ಸ್ಥಾನಗಳು ಪ್ರಾಪ್ತಿಯಾಗಲಿವೆ. ಫೆ.27 ರಂದು ರಾಜ್ಯಸಭೆ ಚುನಾವಣೆ ನಡೆದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಬಲ 120ಕ್ಕೆ ಏರಲಿದೆ. ಇದರ ಹೊರತಾಗಿಯೂ ಬಹುಮತಕ್ಕೆ 3 ಸ್ಥಾನಗಳ ಕೊರತೆ ಬೀಳಲಿದೆ.
ಒಟ್ಟು 245 ಸ್ಥಾನಗಳು ಇರುವ ರಾಜ್ಯ ಸಭೆಯಲ್ಲಿ ಮಸೂದೆಗಳು ಅಂಗೀಕಾರ ವಾಗಬೇಕಾದರೆ 123 ಸದಸ್ಯರ ಮತಗಳು ಪ್ರಾಪ್ತಿಯಾಗಬೇಕು. ಸದ್ಯ ತಟಸ್ಥ ಬಣದಲ್ಲಿರುವ ಬಿಜೆಡಿ, ವೈ.ಎಸ್.ಆರ್.ಕಾಂಗ್ರೆಸ್ ಪಕ್ಷಗಳ ಬೆಂಬಲ ಪಡೆದುಕೊಳ್ಳುವ ಅನಿವಾರ್ಯತೆ ಕೇಂದ್ರ ಸರಕಾರಕ್ಕೆ ಇದೆ.
ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಆ ಪಕ್ಷಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸದ್ಯ ಹಿಮಾಚಲ ಪ್ರದೇಶ ದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹೀಗಾಗಿ ಅವರು ಬೇರೆ ರಾಜ್ಯದಿಂದ ಸ್ಪರ್ಧಿಸಬೇ ಕಾಗಬಹುದು.
ಈ ವರ್ಷದ ಜುಲೈಯಲ್ಲಿ ನಾಮನಿರ್ದೇಶನ ಗೊಂಡ ಬಿಜೆಪಿಯ ಮಹೇಶ್ ಜೇಠ್ಮಲಾನಿ, ಸೋನಲ್ ಮಾನ್ ಸಿಂಗ್, ರಾಮ್ ಶಕಾಲ್, ರಾಕೇಶ್ ಸಿನ್ಹಾ ನಿವೃತ್ತಿಯಾಗಲಿದ್ದಾರೆ.
ಯಾವ ರಾಜ್ಯಗಳಲ್ಲಿ ಎಷ್ಟು?
ಉತ್ತರ ಪ್ರದೇಶ-10, ಮಹಾರಾಷ್ಟ್ರ ಮತ್ತು ಬಿಹಾರ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲ- ತಲಾ 5, ಗುಜರಾತ್ ಮತ್ತು ಕರ್ನಾಟಕ- ತಲಾ 4, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾ- ತಲಾ 3, ಉತ್ತರಾಖಂಡ, ಹರಿಯಾಣ, ಛತ್ತೀಸ್‌ಗಢ- ತಲಾ 1
ನಿವೃತ್ತರಾಗಲಿರುವ ಪ್ರಮುಖರು
ಸುಶೀಲ್ ಮೋದಿ, ಅನಿಲ್ ಪ್ರಸಾದ್ ಹೆಗ್ಡೆ (ಬಿಹಾರ), ಜೆ.ಪಿ.ನಡ್ಡಾ, ಅಭಿಷೇಕ್ ಮನು ಸಿಂ Ì (ಕಾಂಗ್ರೆಸ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…