ಅಗತ್ಯ ಬಿದ್ದರೆ ವರ್ಚುಯಲ್ ರ್‍ಯಾಲಿ; ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಉ.ಪ್ರ.ಕ್ಕೆ ಹೊಸ ಮುಖ್ಯ ಕಾರ್ಯದರ್ಶಿ ನೇಮಕ; ಬಿಜೆಪಿ ಮುಖಂಡರ ಪ್ರತಿಪಾದನೆ
Team Udayavani, Dec 30, 2021, 6:20 AM IST
ನವದೆಹಲಿ: ಉತ್ತರ ಪ್ರದೇಶ ಸೇರಿದಂತೆ ದೇಶದ ಐದು ರಾಜ್ಯಗಳ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ಬಿಜೆಪಿ ವರ್ಚುಯಲ್ ರ್‍ಯಾಲಿಗಳನ್ನು ನಡೆಸಲಿದೆ.
ಕೆಲವೊಂದು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಮತ್ತು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ರಾತ್ರಿ ಕಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಸ್ತರಣೆಯಾಗಲಿರುವ ಸೋಂಕು ಪ್ರತಿಬಂಧಕ ನಿಯಮಗಳಲ್ಲಿ ಬಿಜೆಪಿ ಆನ್‌ಲೈನ್ ರ್‍ಯಾಲಿ ಗಳನ್ನು ನಡೆಸಲು ಸಿದ್ಧವಿದೆ ಎಂದು ಬಿಜೆಪಿಯ ಹಿರಿಯ ಮುಖಂಡ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲೂ ನಮ್ಮ ಪಕ್ಷ ಕೆಲವೊಂದು ಕ್ಷೇತ್ರಗಳಲ್ಲಿ ವರ್ಚುಯಲ್ ರ್‍ಯಾಲಿ ಗಳನ್ನು ನಡೆಸಿತ್ತು ಎಂದು ಹೇಳಿದ್ದಾರೆ. ಯಾವ ರೀತಿಯಲ್ಲಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಆಯೋಗ ನಿರ್ಧರಿಸಲಿದೆ. ಅದರ ನಿರ್ಧಾರ ಎಲ್ಲರಿಗೂ ಅನ್ವಯವಾಗಲಿದೆ ಎಂದಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಾಗಿನ ವೇಳಾಪಟ್ಟಿಯನ್ನು ಮುಂದಿನ ತಿಂಗಳು ಪ್ರಕಟಿಸುವ ಸಾಧ್ಯತೆ ಇದೆ.
ನಿಗದಿಯಂತೆ ನಡೆಯಲಿ:
ಫೆಬ್ರವರಿ-ಮಾರ್ಚ್‌ನಲ್ಲಿಯೇ ಉ.ಪ್ರ.ಚುನಾವಣೆ ನಡೆಯಲಿ. ಅದರಲ್ಲಿ ಬದಲು ಮಾಡುವುದು ಬೇಡ ಎಂದು ಎಸ್‌ಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಲಕ್ನೋದಲ್ಲಿ ಮನವಿ ಮಾಡಿಕೊಂಡಿವೆ. ಮಂಗಳವಾರ ತಡರಾತ್ರಿಯ ವರೆಗೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ಇನ್ನಿಬ್ಬರು ಆಯುಕ್ತರು ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಹಿನ್ನೆಲೆ: ಮಾರ್ಚ್‌ನಲ್ಲಿ ಜೆಇಇ ಪರೀಕ್ಷೆ?
ಸಿಎಸ್ ಬದಲು:
ಚುನಾವಣೆ ನಡೆಯಲಿರುವ ಉ.ಪ್ರ.ಕ್ಕೆ ನೂತನ ಮುಖ್ಯ ಕಾರ್ಯದರ್ಶಿಯವರನ್ನಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ ಮಿಶ್ರಾ ಅವರನ್ನು ನೇಮಿಸಲಾಗಿದೆ. 1984ನೇ ಸಾಲಿನ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ಅವರಾಗಿದ್ದಾರೆ. ಇನ್ನು ಎರಡು ದಿನಗಳಲ್ಲಿ ನಿವೃತ್ತರಾಗಿರುವಂತೆಯೇ ಈ ಆದೇಶ ಹೊರಡಿಸಲಾಗಿದೆ.
ಇಂದು ಪ್ರಧಾನಿ ಉತ್ತರಾಖಂಡಕ್ಕೆ
ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯದ ಹಲ್ದಾನಿ ಎಂಬಲ್ಲಿಗೆ ಭೇಟಿ ನೀಡಲಿರುವ ಅವರು, 17,500 ಕೋಟಿ ರೂ. ಮೌಲ್ಯದ 23 ಯೋಜನೆಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ ಮತ್ತು ಕೆಲವಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. 23 ಯೋಜನೆಗಳ ಪೈಕಿ 14,100 ಕೋಟಿ ರೂ. ಮೌಲ್ಯದ 17 ಯೋಜನೆಗಳಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಸರಿಯಾದ ವ್ಯಕ್ತಿ ಮೇಲೆಯೇ ದಾಳಿ
ಕಾನ್ಪುರದ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ನಿವಾಸದ ಮೇಲೆ ದಾಳಿ ನಡೆಸಿದ್ದು ಸರಿಯಾಗಿದೆ ಎಂದು ಜಿಎಸ್‌ಟಿ ಅಧಿಕಾರಿಗಳು ಹೇಳಿದ್ದಾರೆ. ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿ ಮೇಲೆ ದಾಳಿ ನಡೆಸಲಾಗಿದೆ ಎಂಬ ಬಗ್ಗೆ ರಾಜಕೀಯ ವಾಕ್ಸಮರ ಶುರುವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿ, ವಿಶ್ಲೇಷಣೆ ನಡೆಸಿದ ಬಳಿಕವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ ಅಧಿಕಾರಿಗಳು. ಅವರ ನಿವಾಸದಿಂದ 257 ಕೋಟಿ ರೂ. ನಗದು ಸೇರಿದಂತೆ ಚಿನ್ನ-ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.