ಪಶ್ಚಿಮ ಬಂಗಾಲ ಪೊಲೀಸರನ್ನು ನಾವು ನಂಬಲ್ಲ; CRPF ನಿಯೋಜಿಸಿ: ಬಿಜೆಪಿ
Team Udayavani, Mar 12, 2019, 6:05 AM IST
ಕೋಲ್ಕತ : ಭಾರತೀಯ ಜನತಾ ಪಕ್ಷ ಇಂದು ಮಂಗಳವಾರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಲೋಕಸಭಾ ಚುನಾವಣೆಯ ಉಸ್ತುವಾರಿಗೆ ಪಶ್ಚಿಮ ಬಂಗಾಲದಲ್ಲಿ ಕೇಂದ್ರದ ಪೊಲೀಸ್ ಪಡೆಯನ್ನು ಬಳಸಬೇಕೆಂದು ಆಗ್ರಹಿಸಲಿದೆ.
ತೃಣಮೂಲ ಕಾಂಗ್ರೆಸ್ ಸರಕಾರದ ಕೈಗೊಂಬೆಯಂತೆ ವರ್ತಿಸುವ ಪಶ್ಚಿಮ ಬಂಗಾಲ ಪೊಲೀಸರನ್ನು ನಾವು ನಂಬುವುದಿಲ್ಲ; ಆದುದರಿಂದ ಲೋಕಸಭಾ ಚುನಾವಣೆಯ ಉಸ್ತುವಾರಿಗೆ ಕೇಂದ್ರ ಪಡೆಯನ್ನು ಬಳಸಬೇಕು ಎಂದು ಬಿಜೆಪಿ ಇಂದು ಚುನಾವಣಾ ಆಯೋಗಕ್ಕೆ ಹೇಳಲಿದೆ ಎಂದು ವರದಿಗಳು ತಿಳಿಸಿವೆ. ಚುನಾವಣಾ ಆಯೋಗದ ಅಧಿಕಾರಿಗಳೊಂದಿಗಿನ ಬಿಜೆಪಿ ಭೇಟಿಗೆ ಇಂದು ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿರುವುದಾಗಿ ಗೊತ್ತಾಗಿದೆ.
ನಿನ್ನೆ ಸೋಮವಾರ ಕೂಡ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿ ತೃಣಮೂಲ ಕಾಂಗ್ರೆಸ್ ಮತದಾರರನ್ನು ಬೆದರಿಸುತ್ತಿದೆ ಎಂದು ಹೇಳಿತ್ತು.
“ಪಶ್ಚಿಮ ಬಂಗಾಲದಲ್ಲಿ ಪ್ರಜಾಸತ್ತೆ ಇಲ್ಲ. ಮೊನ್ನೆ ಭಾನುವಾರ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಿಗೇ ಟಿಎಂಸಿ ಸಚಿವ ಮತ್ತು ಕೋಲ್ಕತ ಮೇಯರ್ ಆಗಿರುವ ವ್ಯಕ್ತಿಯು ಉದ್ಧಟತನದಿಂದ ಜನರಿಗೆ, ಸಿಆರ್‌ಪಿಎಫ್ ಬಂದರೆ ಕೇವಲ ಎರಡು ದಿನ ಇದ್ದು ಹೋಗುತ್ತದೆ; ಅನಂತರ ನೀವೆಲ್ಲ ರಾಜ್ಯದ ಪೊಲೀಸರನ್ನೇ ಅವಲಂಬಿಸಬೇಕಾಗುತ್ತದೆ ಎಂದು ಹೇಳಿದ್ದಾರೆ; ಇದು ರಾಜ್ಯದ ಮತದಾರರಿಗೆ ಟಿಎಂಸಿ ಹಾಕಿರುವ ಬೆದರಿಕೆಯೇ ಆಗಿದೆ ಎಂಬುದಾಗಿ ಬಿಜೆಪಿ ಉಪಾಧ್ಯಕ್ಷ ಜಯ ಪ್ರಕಾಶ್ ಮಜುಮ್‌ದಾರ್ ಅವರು ಚುನಾವಣಾ ಆಯೋಗ ನಡೆಸಿದ್ದ ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.