ಕೇಜ್ರಿವಾಲ್ ಅವರ ಬಂಗಲೆಯ ವಿಡಿಯೋ ಹಂಚಿಕೊಂಡು 7ಸ್ಟಾರ್ ಹೋಟೆಲ್ ಗೂ ಕಡಿಮೆ ಇಲ್ಲ ಎಂದ ಬಿಜೆಪಿ
Team Udayavani, Dec 10, 2024, 3:30 PM IST
ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸದಾ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿರುವ ಬಿಜೆಪಿ ಇದೀಗ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಜ್ರಿವಾಲ್ ಅವರ ‘ಶೀಷ್ಮಹಲ್’ ಬಂಗಲೆಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಭ್ರಷ್ಟಾಚಾರ ಯಾವ ಮಟ್ಟಿಗೆ ನಡೆದಿದೆ ಎಂಬುದನ್ನು ಈ ವಿಡಿಯೋ ಮೂಲಕ ನೋಡಬಹುದು ಎಂದು ಬಿಜೆಪಿ ಹೇಳಿಕೊಂಡಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಾಮಾಜಿಕ ಜಾಲತಾಣ x ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು – ‘ತನ್ನನ್ನು ತಾನು ಸಾಮಾನ್ಯ ಎಂದು ಕರೆದುಕೊಳ್ಳುವ ಅರವಿಂದ್ ಕೇಜ್ರಿವಾಲ್ ಅವರ ಗಾಜಿನ ಅರಮನೆ ನೋಡಿದರೆ ನಿಜವಾಗಿಯೂ ಕೇಜ್ರಿವಾಲ್ ಸಾಮಾನ್ಯ ವ್ಯಕ್ತಿಯೇ ಎಂದು ಬರೆದಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಕೇಜ್ರಿವಾಲ್ ಬಂಗಲೆಗೆ ಖರ್ಚು ಮಾಡಿದ ಮೊತ್ತದಿಂದ ಎಷ್ಟು ಬಡವರನ್ನು ಉಳಿಸಬಹುದಿತ್ತು, ಎಷ್ಟು ಮಂದಿಗೆ ಮನೆ ಅಥವಾ ಆಟೋ ರಿಕ್ಷಾಗಳು ನೀಡಬಹುದಿತ್ತು ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅಧಿಕಾರದಲ್ಲಿದ್ದ ಸಮಯದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದೇ ಸಾಕ್ಷಿ ಈ ಬಂಗಲೆ ಯಾವ 7 ಸ್ಟಾರ್ ಹೋಟೆಲ್ ಗೂ ಕಡಿಮೆ ಇಲ್ಲ, ಅಲ್ಲದೆ ಈ ಬಂಗಲೆಗೆ ಕೇಜ್ರಿವಾಲ್ ಬರೋಬ್ಬರಿ 3.75 ಕೋಟಿ ರೂಪಾಯಿ ಖರ್ಚುಮಾಡಿದ್ದಾರೆ ಎಂದು ಹೇಳಿದ ಅವರು ಮನೆಯೊಳಗೆ ಅಳವಡಿಸಿರುವ ಎಲ್ಲ ವಸ್ತುಗಳ ಬೆಲೆಯನ್ನೂ ಹಂಚಿಕೊಂಡಿದ್ದಾರೆ.
केजरीवाल का 7-Star वाला शीशमहल 😳
खुद को आम आदमी कहने वाले @ArvindKejriwal की अय्याशी के शीशमहल की वीडियो सामने आ गई है…देख कर आप दंग रह जाएंगे !
खुद को ढोल पीट पीट कर आम आदमी बताने वाले केजरीवाल के आलीशान महल को देखिए। गाड़ी, बंगला, सुरक्षा न लूंगा कहने वाले केजरीवाल के इस… pic.twitter.com/yjdJ0TUNnz
— BJP Delhi (@BJP4Delhi) December 10, 2024
ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ವೀರೇಂದ್ರ ಸಚ್‌ದೇವ, ‘ಮಕ್ಕಳ ಹೆಸರಿನಲ್ಲಿ ಪ್ರಮಾಣ ಮಾಡಿ ಸರ್ಕಾರಿ ಮನೆ, ವಾಹನ, ಭದ್ರತೆ ಪಡೆಯುವುದಿಲ್ಲ ಎಂದು ಸುಳ್ಳು ಭರವಸೆ ನೀಡುವವರು ದೆಹಲಿಯ ತೆರಿಗೆದಾರರ ಆದಾಯವನ್ನು ಹೇಗೆ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.