BJP vs TMC ; ಸಂದೇಶ್‌ಖಾಲಿ ಆರೋಪಿಗಳ ವಿರುದ್ಧ ಕ್ರಮ: ಮೋದಿ
ವಿಷಸರ್ಪವನ್ನಾದರೂ ನಂಬಿ, ಬಿಜೆಪಿ ನಂಬಬೇಡಿ: ಮಮತಾ
Team Udayavani, Apr 5, 2024, 12:52 AM IST
ಕೂಛ್ ಬೆಹಾರ್/ ಜಮುಯಿ: ಪಶ್ಚಿಮ ಬಂಗಾಲದ ಸಂದೇಶ್‌ಖಾಲಿ ಘಟನೆಯಲ್ಲಿ ಆರೋಪಿಗಳು ಜೀವನ ಪರ್ಯಂತ ಜೈಲಲ್ಲಿ ಕಾಲ ಕಳೆಯುವಂತೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಕೂಛ್ ಬೆಹಾರ್‌ನಲ್ಲಿ ಗುರುವಾರ ಬೃಹತ್ ರ್‍ಯಾಲಿಯಲ್ಲಿ ಮಾತನಾ ಡಿದ ಅವರು, ತಪ್ಪಿತಸ್ಥರನ್ನು ರಕ್ಷಿಸಲು ಟಿಎಂಸಿ ಏನೆಲ್ಲ ಮಾಡಿತು ಎಂಬುದನ್ನು ದೇಶವೇ ಕಂಡಿದೆ ಎಂದರು.
“ಮಹಿಳಾ ಸಶಕ್ತೀಕರಣ ಬಿಜೆಪಿಯ ಗುರಿಯಾಗಿದೆ. ಪಶ್ಚಿಮ ಬಂಗಾಲದಲ್ಲಿ ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಬೇಕಿದೆ’ ಎಂದರು. “ಸಂದೇಶ್‌ಖಾಲಿ ಘಟನೆಯು ಟಿಎಂಸಿ ಸರಕಾರದ ದುರಾಡಳಿತದ ಪರಿಣಾಮವಾಗಿದೆ. ಆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ನೀಡುವ ಭರವಸೆಯನ್ನು ಬಿಜೆಪಿ ನೀಡುತ್ತದೆ’ ಎಂದರು.
ಸಿಎಎ ಕುರಿತು ಅಪಪ್ರಚಾರ
“ವಿಪಕ್ಷ ಇಂಡಿಯಾ ಒಕ್ಕೂಟವು ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಎಂದೂ ಯೋಚಿಸಿಲ್ಲ. ಆದರೆ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಅಪಪ್ರಚಾರ ನಡೆಸುತ್ತಿದೆ ಎಂದರು.
ಮೋದಿ ಹೇಳಿದ್ದೇನು?
ಟಿಎಂಸಿ ಸರಕಾರದ ದುರಾಡಳಿತದಿಂದ ಸಂದೇಶ್‌ಖಾಲಿ ಘಟನೆ
ಹಿಂದಿನ ಕಾಂಗ್ರೆಸ್ ಸರಕಾರಗಳಿಂದ ದೇಶಕ್ಕೆ ಕೆಟ್ಟ ಹೆಸರು
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಇಂಡಿಯಾ ಒಕ್ಕೂಟದಿಂದ ಅಪಪ್ರಚಾರ
ಭ್ರಷ್ಟರನ್ನು ರಕ್ಷಿಸಲು ವಿಪಕ್ಷಗಳಿಂದ ಯತ್ನ: ಪ್ರಧಾನಿ ಮೋದಿ ವಾಗ್ಧಾಳಿ
30 ಕಿ.ಮೀ. ಅಂತರದಲ್ಲಿ ಮೋದಿ, ದೀದಿ ರ್‍ಯಾಲಿ
ಬಿಹಾರದ ಕೂಛಬೆಹಾರ್ ಜಿಲ್ಲೆಯಲ್ಲಿ 30 ಕಿ.ಮೀ. ಅಂತರದಲ್ಲಿ ಗುರುವಾರ ಬಿಜೆಪಿ ಮತ್ತು ಟಿಎಂಸಿ ಪ್ರಚಾರ ರ್ಯಾಲಿಗಳನ್ನು ಆಯೋಜಿಸಿದ್ದವು. ಕೂಛ…ಬೆಹಾರದ ರಾಸ್ ಮೇಳ ಮೈದಾನದಲ್ಲಿ ಪ್ರಧಾನಿ, ಕೂಛ…ಬೆಹಾರ್ ಕ್ಷೇತ್ರದಲ್ಲಿ ಪ್ರಚಾರ ರ್ಯಾಲಿ ಉದ್ದೇಶಿಸಿ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಿದರು.
ಕಾಂಗ್ರೆಸ್, ಆರ್‌ಜೆಡಿಯಿಂದ ದೇಶದ ವರ್ಚಸ್ಸಿಗೆ ಧಕ್ಕೆ: ಮೋದಿ
ಬಿಹಾರದ ಜಮುಯಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ವರ್ಚಸ್ಸಿಗೆ ಕಾಂಗ್ರೆಸ್, ಆರ್‌ಜೆಡಿ ಧಕ್ಕೆ ತಂದಿವೆ ತಂದಿವೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹಿಸಲು ಕಾಂಗ್ರೆಸ್ ಸರಕಾರಗಳು ವಿಫಲವಾಗಿವೆ. ಈ ಮೂಲಕ ಅವು ದೇಶಕ್ಕೆ ಕೆಟ್ಟ ಹೆಸರು ತಂದಿವೆ ಎಂದರು.
ಚಿರಾಗ್‌ಗೆ ಶ್ಲಾಘನೆ
ಬಿಹಾರದ ಎಲ್ಲ 40 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದರು ಮೋದಿ. ಜತೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್‌ರನ್ನು ಕಿರಿಯ ಸಹೋದರ ಎಂದು ಬಣ್ಣಿಸಿದರು. ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್‌ರಂತೆ ಚಿರಾಗ್ ನಡೆದುಕೊಂಡಿದ್ದಾರೆ ಎಂದರು.
ವಿಷಸರ್ಪವನ್ನಾದರೂ ನಂಬಿ, ಬಿಜೆಪಿ ನಂಬಬೇಡಿ: ಮಮತಾ
ಐ.ಟಿ., ಬಿಎಸ್‌ಎಫ್ ಪಡೆಗಳು ಬಿಜೆಪಿ ಪರ: ದೀದಿ ಟೀಕೆ
ಕೂಛಬೆಹಾರ್: “ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೀತಿ ಸಂಹಿತೆಯನ್ನು ಪಾಲಿಸುತ್ತಿಲ್ಲ. ಒಂದು ವಿಷಕಾರಿ ಹಾವನ್ನಾದರೂ ನಂಬಬಹುದು, ಕಮಲ ಪಾಳಯವನ್ನಲ್ಲ.’ಇದು ಪಶ್ಚಿಮ ಬಂಗಾಲದ ಕೂಛ…ಬೆಹಾರ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದ ಪರಿ. ಗುರುವಾರ ಇಲ್ಲಿ ಲೋಕಸಭಾ ಚುನಾವಣ ಪ್ರಚಾರ ರ್‍ಯಾಲಿ ಯಲ್ಲಿ ಮಾತನಾಡಿದ ಮಮತಾ, “ಬಿಜೆಪಿಯು ನಿಮಗೆ ಆವಾಸ್ ಯೋಜನೆಗೆ ಮತ್ತೂಮ್ಮೆ ಹೆಸರು ನೋಂದಾಯಿಸುವಂತೆ ಸೂಚಿಸುತ್ತಿದೆ. ನಿಮ್ಮಿಂದ ಮತ್ತಷ್ಟು ದಾಖಲಾತಿಗೆ ಬೇಡಿಕೆಯಿಟ್ಟು, ಫಲಾನುಭವಿಗಳ ಪಟ್ಟಿಯಿಂದ ನಿಮ್ಮನ್ನು ಹೊರಹಾಕುವ ಸಾಧ್ಯತೆಯಿದೆ. ನೀವು ವಿಷದ ಹಾವನ್ನಾದರೂ ನಂಬಬಹುದು, ಪ್ರೀತಿಯಿಂದ ಪಳಗಿಸಿ ಸಾಕಬಹುದು. ಆದರೆ ಬಿಜೆಪಿಯನ್ನು ಯಾವತ್ತೂ ನಂಬಬೇಡಿ. ಬಿಜೆಪಿಯು ಇಡೀ ದೇಶವನ್ನೇ ನಾಶ ಮಾಡುತ್ತಿದೆ’ ಎಂದು ಗುಡುಗಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ಒಡ್ಡುವ ಬೆದರಿಕೆಗಳಿಗೆ ಟಿಎಂಸಿ ತಲೆಬಾಗುವುದೇ ಇಲ್ಲ ಎಂದು ಮಮತಾ ಬ್ಯಾನರ್ಜಿ ಸಾರಿದ್ದಾರೆ.ಜತೆಗೆ, ಕೇಂದ್ರ ತನಿಖಾ ಸಂಸ್ಥೆಗಳು, ಎನ್‌ಐಎ, ಐಟಿ, ಬಿಎಸ್‌ಎಫ್, ಸಿಐಎಸ್‌ಎಫ್ಗಳು ಬಿಜೆಪಿಗಾಗಿ ಕೆಲಸ ಮಾಡುತ್ತಿವೆ. ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವಂತೆ ಆಯೋಗ ನೋಡಿಕೊಳ್ಳಬೇಕು ಎಂದ ದೀದಿ, ಚುನಾವಣೆ ವೇಳೆ ಬಿಎಸ್‌ಎಫ್ನವರೇನಾದರೂ ನಿಮಗೆ ಹಿಂಸೆ ನೀಡಿದರೆ, ಕೂಡಲೇ ಪೊಲೀಸರಿಗೆ ದೂರು ನೀಡಿ ಎಂದು ಸ್ಥಳೀಯರಿಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.