ಪಶ್ಚಿಮ ಬಂಗಾಳ : ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ : ಮಮತಾ ಬ್ಯಾನರ್ಜಿ
Team Udayavani, Mar 29, 2021, 12:33 PM IST
ಕೋಲ್ಕತ್ತಾ : ಶನಿವಾರ(ಮಾ.27) ಪುರ್ಣಗೊಂಡ ಮೊದಲ ಹಂತದಚುನಾವಣೆಯಲ್ಲಿ ಬಿಜೆಪಿ 30 ಸೀಟುಗಳಲ್ಲಿ 26 ಸೀಟುಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ತೃಣ ಮೂಲ ಕಾಂಗ್ರೆಸ್ ನ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೆಟು ನೀಡಿದ್ದಾರೆ.
ಚಂಡಿಪುರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮಮತಾ, ಯಾಕೆ ಬಿಜೆಪಿ 30 ಕ್ಕೆ 30 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ..? ಉಳಿದ ಸೀಟುಗಳು ಕಾಂಗ್ರೆಸ್ ಮತ್ತು ಸಿಪಿಐಎಮ್ ಗೆ ಬಿಟ್ಟಿದ್ದಾರೆಯೇ..? ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಓದಿ : ತಮಿಳು ನಾಡು : ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ : ಪಳನಿಸ್ವಾಮಿ
ಇನ್ನು, ಚುನಾವಣೆಗಳಲ್ಲಿ ಮುಕ್ತ ಮತ್ತು ಪ್ರಜಾಪ್ರಭುತ್ವದ ಮತದಾನವನ್ನು ನಡೆಸಲು ಕೇಂದ್ರ ಪಡೆಗಳನ್ನು ಅವರು ಒತ್ತಾಯಿಸಿದರು.
ಮಮತಾ ಅವರಿಗೆ ಸಾಥ್ ನೀಡಿದ ತೃಣ ಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರೆಕ್ ಓ’ಬ್ರಿಯನ್ , ಕೇಂದ್ರ ಗೃಹ ಸಚಿವರನ್ನು ‘ಸುಳ್ಳುಗಾರ’ ಎಂದು ಕರೆದಿದ್ದಾರೆ.
ಏತನ್ಮಧ್ಯೆ, ಕೇಂದ್ರ ಗೃಹ ಸಚಿವರು ಈ ಬಾರಿ ರಾಜ್ಯದ ಬದಲಾವಣೆಗೆ ಬಿಜೆಪಿಗೆ ಮತ ಚಲಾಯಿಸುವಂತೆ ನಂದಿಗ್ರಾಮ್ ನಾಗರಿಕರನ್ನು ಒತ್ತಾಯಿಸಿದರು.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 8 ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ಮೊದಲ ಹಂತದ ಚುನಾವಣೆ ಮುಗಿದಿದೆ. ಇನ್ನು ಪಶ್ಚಿಮ ಬಂಗಾಳ ಏಳು ಹಂತಗಳ ಚುನಾವಣೆಯನ್ನು ಎದುರು ಕಾಣುತ್ತಿದ್ದು, ಏಪ್ರಿಲ್ 1(30 ಕ್ಷೇತ್ರಗಳು), ಏಪ್ರಿಲ್ 6 (31 ಕ್ಷೇತ್ರಗಳು), ಏಪ್ರಿಲ್ 10 (44 ಕ್ಷೇತ್ರಗಳು) ಏಪ್ರಿಲ್ 17 (45 ಕ್ಷೇತ್ರಗಳು) ಏಪ್ರಿಲ್ 22(43 ಕ್ಷೇತ್ರಗಳು), ಏಪ್ರಿಲ್ 26 (36 ಕ್ಷೇತ್ರಗಳು) ಹಾಗೂ ಏಪ್ರಿಲ್ 29(35 ಕ್ಷೇತ್ರಗಳು) ರಂದು ಚುನಾವಣೆ ನಡೆಯಲಿದೆ.
ಓದಿ : ಬೆಳಗಾವಿ ರಾಜಕೀಯ: ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ ಜೆಡಿಎಸ್ ಮುಖಂಡ ಅಶೋಕ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.