ಉತ್ತರ ಪ್ರದೇಶದಲ್ಲಿ ಬಿಜೆಪಿ ಕಿಂಗ್? ಟೈಮ್ಸ್ ನೌ ಸಮೀಕ್ಷೆ
Team Udayavani, Jan 31, 2017, 3:45 AM IST
ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಮ್ಯಾಜಿಕ್ ನಡೆಯಲಿದ್ದು, ಬಿಜೆಪಿ ಬೃಹತ್ ಪಕ್ಷವಾಗಿ ಹೊರಹೊಮ್ಮಲಿದೆ. ಎಸ್ಪಿ- ಕಾಂಗ್ರೆಸ್ ಮಹಾಮೈತ್ರಿಗೆ ತೀವ್ರ ಮುಖಭಂಗ ಆಗಲಿದೆ.
ಟೈಮ್ಸ್ ನೌ ಸುದ್ದಿವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 47 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, 2017ರ ಚುನಾವಣೆಯಲ್ಲಿ 202 ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಪಕ್ಷದ ಜನಪ್ರಿಯತೆ + 155 ಹೆಚ್ಚಿದ್ದು, ಆಡಳಿತರೂಢ ಎಸ್ಪಿ ತೀವ್ರ ಕುಸಿತ ಕಂಡಿದೆ. ಎಸ್ಪಿ- ಕಾಂಗ್ರೆಸ್ ಈಗ 252 ಸ್ಥಾನಗಳನ್ನು ಹೊಂದಿದ್ದರೂ, ಸರ್ವೆ ಪ್ರಕಾರ ಮಹಾಮೈತ್ರಿಗೆ ಒಲಿಯುವ ಒಟ್ಟು ಸ್ಥಾನಗಳು 147! ಮೈತ್ರಿಯ ಜನಪ್ರಿಯತೆ -105ಕ್ಕೆ ಕುಸಿದಿದ್ದು, ಬಿಎಸ್ಪಿಯ ಜನಪ್ರಿಯತೆಯೂ -33 ಇಳಿಕೆ ಕಂಡಿದೆ. ಮೈತ್ರಿಯಿಂದಲೇ ಎಸ್ಪಿಗೆ ಹಿನ್ನೆಡೆ ಆಗಲಿದೆ ಎಂಬ ಜನಾಭಿಪ್ರಾಯ ಮೂಡಿದೆ.
ಆದರೆ, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಜನಪ್ರಿಯತೆ ಉ.ಪ್ರ.ದಲ್ಲಿ ಕುಗ್ಗಿದ್ದು, -124ಕ್ಕೆ ಇಳಿದಿದೆ. ಎಸ್ಪಿ- ಕಾಂಗ್ರೆಸ್ ಮೈತ್ರಿಗೆ +90 ಜನಮನ್ನಣೆ ಸಿಗಲಿದೆ. ಮೊದಲ ಮತ ಚಲಾಯಿಸುತ್ತಿರುವ 18 ವರ್ಷದ ಯುವಸಮೂಹಕ್ಕೆ ನರೇಂದ್ರ ಮೋದಿ ಅವರ ಮೇಲೆ ಒಲವು ಹೆಚ್ಚಿದೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಎಬಿಪಿ ಸಮೀಕ್ಷೆಯಲ್ಲಿ ಅತಂತ್ರ ಭವಿಷ್ಯ!
ಎಬಿಪಿ ಸುದ್ದಿವಾಹಿನಿಯೂ ಉತ್ತರ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಅತಂತ್ರ ಫಲಿತಾಂಶದ ಭವಿಷ್ಯ ಹೊರಹಾಕಿದೆ. ಬಿಜೆಪಿ ಇಲ್ಲಿ ಹಿನ್ನಡೆ ಅನುಭವಿಸಿದ್ದು, 118- 128 ಸ್ಥಾನಗಳಷ್ಟೇ ಪಡೆಯಲಿದೆ ಎಂದು ಹೇಳಿದೆ. ಕಾಂಗ್ರೆಸ್- ಎಸ್ಪಿ ಮೈತ್ರಿಗೆ ಮತದಾರ ಜೈ ಎಂದಿದ್ದು 187- 197 ಸ್ಥಾನಗಳನ್ನು ಪಡೆಯಬಹುದು. ಬಿಎಸ್ಪಿ- 76- 86 ಸೀಟುಗಳಿಗೆ ತೃಪ್ತಿ ಪಡೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಶೇ.35 ಮತಗಳು ಮೈತ್ರಿಗೆ ಬೀಳಲಿದ್ದು, ಬಿಜೆಪಿ ಪಾಲು ಕೇವಲ ಶೇ.28! ಇಲ್ಲೂ ಸಿಎಂ ಸ್ಥಾನದಲ್ಲಿ ಅಖೀಲೇಶ್ ಯಾದವ್ ಮುಂದಿದ್ದು, ಶೇ.26 ಜನಪ್ರಿಯತೆ ಪಡೆದಿದ್ದಾರೆ. ಮಾಯಾವತಿ ಶೇ.21, ನರೇಂದ್ರ ಮೋದಿ ಶೇ.9, ಮುಲಾಯಂ ಸಿಂಗ್ ಯಾದವ್ ಅವರ ಮೇಲೆ ಮತದಾರನಿಗೆ ಶೇ.5ರಷ್ಟು ಒಲವು ಇದೆ ಎಂದು ಸಮೀಕ್ಷೆ ಹೇಳಿದೆ. ಎನ್‌ಡಿಎ ಸರ್ಕಾರದ ಅಪನಗದೀಕರಣ ಯೋಜನೆಗೆ ಶೇ.41 ಮಂದಿ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಫೆ.4ರಿಂದ ಮಾ.8ರ ವರೆಗೆ ಸಮೀಕ್ಷೆ ಇಲ್ಲ
ಫೆಬ್ರವರಿ 4ರಿಂದ ಮಾರ್ಚ್ 8ರ ವರೆಗೆ ಚುನಾವಣಾ ಸಮೀಕ್ಷೆ ನಡೆಸದಂತೆ ಮಾಧ್ಯಮಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. 126 ಎ ಕಲಂ ಅಡಿಯಲ್ಲಿ ಯಾವುದೇ ಮಾಧ್ಯಮ ಈ ಅವಧಿಯಲ್ಲಿ ಚುನಾವಣಾ ಸಮೀಕ್ಷೆ ನಡೆಸಬಾರದು. ಚುನಾವಣಾ ಪ್ರದೇಶ ಸೇರಿದಂತೆ ದೇಶದ ಯಾವುದೇ ಭಾಗದಿಂದಲೂ ಮಾಧ್ಯಮಗಳು ಸರ್ವೆಗೆ ಮುಂದಾಗಬಾರದು ಎಂದು ಆದೇಶ ಹೊರಡಿಸಿದೆ.
ಸರ್ವೆ ಸಾರಾಂಶ
1. ಯಾರಿಗೆ ಎಷ್ಟು?
ಬಿಜೆಪಿ- 202
ಎಸ್ಪಿ- ಕಾಂಗ್ರೆಸ್ 147
ಬಿಎಸ್ಪಿ- 47
ಇತರೆ- 7
ಒಟ್ಟು – 403
2. ಮತಗಳ ಹಂಚಿಕೆ
ಬಿಜೆಪಿ- ಶೇ.34
ಎಸ್ಪಿ- ಕೈ ಮೈತ್ರಿ- ಶೇ. 31
ಬಿಎಸ್ಪಿ- ಶೇ.24
3. ಸಿಎಂ ಯಾರಾಗ್ಬೇಕು?
ಅಖೀಲೇಶ್ ಯಾದವ್- ಶೇ.39
ಮಾಯಾವತಿ- ಶೇ.23
ಯೋಗಿ ಆದಿತ್ಯನಾಥ್- ಶೇ.19
ಮುಲಾಯಂ ಸಿಂಗ್ ಯಾದವ್- ಶೇ.1
ಶೀಲಾ ದೀಕ್ಷಿತ್- ಶೇ.2
4. ಅಪನಗದೀಕರಣದಿಂದ ದೇಶಕ್ಕೆ ಒಳಿತಾಗಿದೆಯೇ?
ಹೌದು- 63.4
ಇಲ್ಲ- 31.9
ಗೊತ್ತಿಲ್ಲ- 4.7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಬೆಂಗಳೂರು ಬುಲ್ಸ್ಗೆ 19ನೋ ಸೋಲು
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.